ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ತನಿಖೆ ಜೋರಾದ ಬೆನ್ನಲ್ಲೇ ತಡರಾತ್ರಿ ಸಿಸಿಬಿ ನಾರ್ಕೋಟಿಕ್ಸ್ ಭರ್ಜರಿ ಬೇಟೆಯಾಡಿದೆ.
ಕೆ.ಆರ್ ಮಾರ್ಕೆಟ್ನಲ್ಲಿ ನಕಲಿ ಗುಟ್ಕಾ ದಂಧೆ ಜೋರಾಗಿದ್ದು, ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿ ಮೂಟೆ ಮೂಟೆ ನಕಲಿ ಗುಟ್ಕಾ ಜಪ್ತಿ ಮಾಡಿದೆ. ದಾಳಿ ವೇಳೆ 200 ಮೂಟೆ ನಕಲಿ ಗುಟ್ಕಾ, 3 ಲಾರಿಗಳನ್ನು ಸೀಜ್ ಮಾಡಿ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ. ಮತ್ತೊಂದಡೆ ನೆಲಮಂಗಲ ರಸ್ತೆಯಲ್ಲಿನ ಗೋಡೌನ್ ಮೇಲೆ ದಾಳಿ ಮಾಡಿದ ಸಿಸಿಬಿ ನಾರ್ಕೋಟಿಕ್ಸ್, ಡ್ರಗ್ಸ್ ಜಪ್ತಿ ಮಾಡಿದೆ.
ದಾಳಿ ವಿಚಾರ ತಿಳಿಯುತ್ತಿದ್ದಂತೆ ಕೆಲವರು ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.