ETV Bharat / state

ಅಕಾಲಿಕ ಮಳೆಯಿಂದ ನೆಲಕ್ಕುರುಳಿದ ಬಾಳೆ ಬೆಳೆ: ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ - The rain destroys the banana crop

ದೊಡ್ಡಬಳ್ಳಾಪುರದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬಾಳೆ ಬೆಳೆ ನೆಲಕ್ಕುರುಳಿದ್ದು, ಸುಮಾರು 3 ಲಕ್ಷದಷ್ಟು ನಷ್ಟವಾಗಿದೆ.

banana crop
ನೆಲಕ್ಕುರುಳಿದ ಬಾಳೆ ಬೆಳೆ
author img

By

Published : Apr 27, 2020, 11:54 AM IST

ದೊಡ್ಡಬಳ್ಳಾಪುರ: ತಾಲೂಕಿನ ಸುತ್ತಮುತ್ತ ಭಾನುವಾರ ರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಭಾರಿ ಬಿರುಗಾಳಿಯೊಂದಿಗೆ ಆರ್ಭಟಿಸಿದ ಮಳೆ ತಾಲೂಕಿನ ಮರಳೇನ ಹಳ್ಳಿಯ ಹಲವು ಬಾಳೆ ತೋಟಗಳನ್ನು ನೆಲಸಮ ಮಾಡಿದೆ.

ಮುತ್ತುರಾಜ್ ಎಂಬುವರು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ತೋಟ ಸಂಪೂರ್ಣವಾಗಿ ನಾಶವಾಗಿದೆ. ಶೇಕಡಾ.90ರಷ್ಟು ಗಿಡಗಳಲ್ಲಿ ಗೊನೆಗಳು ಬಂದಿದ್ದು, ಒಂದೆರಡು ತಿಂಗಳಲ್ಲಿ ಬಾಳೆ ಫಸಲು ಕೊಯ್ಲಿಗೆ ಬರುತ್ತಿತ್ತು. ಸುಮಾರು 3 ಲಕ್ಷ ರೂಪಾಯಿ ಬಂಡವಾಳ ಹಾಕಿ ಬಾಳೆ ಬೆಳೆಯಲಾಗಿತ್ತು. ಆದರೆ ಭಾನುವಾರ ಸಂಜೆ ಬಂದ ಬಿರುಗಾಳಿ ಮಳೆಗೆ ಸಂಪೂರ್ಣವಾಗಿ ಬಾಳೆ ನೆಲಕಚ್ಚಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಮಳೆ ಗಾಳಿಯಿಂದಾಗಿ ಬೆಳೆದಿದ್ದ ಬಾಳೆ ತೋಟ ಸಂಪೂರ್ಣ ನಾಶ, ರೈತರಿಗೆ ಸಂಕಷ್ಟ

ಇನ್ನೊಬ್ಬ ರೈತ ಮಂಜುನಾಥ್ ಸಹ ಎರಡು ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದರು. ಇವರ ತೋಟವು ಸಹ ಬಿರುಗಾಳಿ ಮಳೆಗೆ ಸಿಲುಕಿ ನೆಲಕ್ಕುರುಳಿದೆ. ಮಳೆಯಿಂದಾಗಿ 3 ಲಕ್ಷ ನಷ್ಟ ಅನುಭವಿಸಿರುವ ಈ ರೈತ ಸರ್ಕಾರದಿಂದ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಂದೆಡೆ ವಿಜಯೇಂದ್ರ ಮೂರ್ತಿ ಎಂಬುವರು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಏಲಕ್ಕಿ ಬಾಳೆ ಸಹ ಮಳೆಯಿಂದ ನೆಲಕ್ಕುರುಳಿದೆ. ಅರ್ಧಕ್ಕೂ ಹೆಚ್ಚು ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಇದರಿಂದ 3 ಲಕ್ಷದಷ್ಟು ನಷ್ಟ ಅನುಭವಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.