ಬೆಂಗಳೂರು: ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಕುಡುಕನೊಬ್ಬ ಅರೆಬೆತ್ತಲೆಯಲ್ಲಿ ನಿಂತು ಅವಾಂತರ ಸೃಷ್ಟಿಸಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ್ದಾನೆ.
ಸಚಿವ ಸಂಪುಟ ಸಭೆ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ವಿಧಾನಸೌಧಕ್ಕೆ ಆಗಮಿಸಿದರು. ಈ ವೇಳೆ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಇರುವ ವಿಧಾನಸೌಧ ಪಶ್ಚಿಮ ದ್ವಾರದ ಗೇಟ್ ಮುಂಭಾಗದ ವೃತ್ತದಲ್ಲಿ ಕುಡುಕನೊಬ್ಬ ಅರೆಬೆತ್ತಲಾಗಿ ನಿಂತು ಸಿಕ್ಕ ಸಿಕ್ಕ ವಾಹನಗಳ ಅಡ್ಡ ಮಲಗಿ ಅವಾಂತರ ಸೃಷ್ಟಿಸುತ್ತಿದ್ದ.
ವಿಧಾನಸೌಧಕ್ಕೆ ಬರುವ ವಾಹನಗಳನ್ನ ತಡೆದು ಅದರ ಮುಂದೆ ಅರೆಬೆತ್ತಲೆಯಲ್ಲಿ ಹೈಡ್ರಾಮಾ ನಡೆಸುತ್ತಿದ್ದ ಕುಡಕನನ್ನು ಸಂಬಾಳಿಸಲು ಹೋದ ಪೊಲೀಸರು ಹೈರಾಣಾದರು. ಪಕ್ಕಕ್ಕೆ ಎಳೆದು ಸರಿಸಿದರೂ ಆತನ ಹುಚ್ಚಾಟ ಮಾತ್ರ ನಿಲ್ಲಲಿಲ್ಲ. ಅಂತಿಮವಾಗಿ ಕುಡುಕನನ್ನು ಸ್ಥಳದಿಂದ ಬೇರೆಡೆಗೆ ಕರೆದೊಯ್ದ ಪೊಲೀಸರು ನಿಶ್ಚಿಂತಿತರಾದರು.