ಬೆಂಗಳೂರು: ಸದ್ಯ ಸ್ಯಾಂಡಲ್ವುಡ್ಗೆ ಡ್ರಗ್ಸ್ ಘಾಟು ಅಂಟಿದ್ದು, ಡ್ರಗ್ಸ್ ಸೇವನೆ ಮಾಡಲು ಅಂತಾನೇ ಕೆಲವು ಪಬ್ ಮತ್ತು ಡ್ಯಾನ್ಸ್ ಬಾರ್ ನಗರದಲ್ಲಿವೆ ಎಂಬ ಆತಂಕಕಾರಿ ವಿಚಾರ ಬಯಲಾಗಿದೆ.
ನಗರದ ಎಂ ಜಿ ರೋಡ್, ಇಂದಿರಾನಗರ, ಕೋರಮಂಗಲ ಹೀಗೆ ಕೆಲ ಪ್ರದೇಶದಲ್ಲಿ ಪ್ರತಿಷ್ಠಿತ ಪಬ್ ಬಾರ್ಗಳಲ್ಲಿ ಮೆಲ್ನೋಟಕ್ಕೆ ಕೌಂಟರ್ ಬಳಿ ಡ್ರಿಂಕ್ ಇಟ್ಟಿರುತ್ತಾರೆ. ಆದರೆ ಟಾಯ್ಲೆಟ್ನಲ್ಲಿ ಡ್ರಗ್ಸ್ ಸೇವನೆ ಮಾಮೂಲಿಯಾಗಿದೆ. ಕೆಲ ಸಿನಿತಾರೆಯರು ಪಬ್ ಕೌಂಟರ್ನಲ್ಲಿ ಮದ್ಯ ಸೇವಿಸಿ ನಂತರ ಟಾಯ್ಲೆಟ್ ಒಳಗೆ ಸ್ನೇಹಿತರೊಟ್ಟಿಗೆ ಸೇರಿ ನಶೆ ಏರಿಸಿಕೊಳ್ಳುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಅನೇಕ ಉದ್ಯಮಿಗಳ ಮಕ್ಕಳು ಸಹ ಈ ಜಾಲದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಟಿ ಹೊರಗೆ ಪಾರ್ಟಿ ಮಾಡಿ ಕೊಕೈನ್, ಚರಸ್, ಬ್ರೌನ್ ಶುಗರ್, ವಿವಿಧ ಹೆಸರಿನ ಮಾದಕ ವಸ್ತುಗಳನ್ನು ಸೇವಿಸುತ್ತಾರಂತೆ. ನೈಜಿರಿಯನ್, ಆಫ್ರಿಕನ್ ಡೀಲರ್ಗಳಿಂದ ಕೊಕೈನ್ ಹೆಚ್ಚಾಗಿ ನಗರದಲ್ಲಿ ಮಾರಾಟವಾಗುತ್ತಿದೆ ಎನ್ನಲಾಗ್ತಿದೆ ಡ್ರಗ್ಸ್ ಮಾಫಿಯಾಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇ ತವರೂರಾಗಿದೆ. ಇನ್ನು ಡ್ರಗ್ಸ್ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ದೇಶಗಳಿಂದ ಬಂದಿಳಿಯುತ್ತೆ ಎಂದು ಹೇಳಲಾಗ್ತಿದೆ.
ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯ ಮತ್ತು ವರ್ಷ
2016-17ರಲ್ಲಿ 14 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ,
2017-18ರಲ್ಲಿ 6 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ,
2018-19ರಲ್ಲಿ 6.45 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ,
2019-20ರಲ್ಲಿ ಅತಿ ಹೆಚ್ಚು ಅಂದ್ರೆ 18 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮಹಿಳೆಯರ ಸ್ಯಾನಿಟರಿ ಪ್ಯಾಡ್ಗಳಲ್ಲೂ ಕೆಲವರು ಡ್ರಗ್ಸ್ ಪೂರೈಸುತ್ತಾರೆ ಎಂಬ ಆತಂಕಕಾರಿ ಮಾಹಿತಿಯೂ ಹೊರಬಿದ್ದಿದೆ.