ಕೆಆರ್ಪುರ : ನಗರದಲ್ಲಿ ಡ್ರಗ್ಸ್ ಹಾಗೂ ಗಾಂಜಾ ಸೇವನೆ ಹೆಚ್ಚಾಗುತ್ತಿರೋದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್ ತಿಳಿಸಿದರು.
ಕೆಆರ್ಪುರ ಬಿಜೆಪಿ ಯುವ ಮೋರ್ಚಾ ವತಿಯಿಂದ ಬಿಬಿಎಂಪಿ ಕಚೇರಿ ಎದುರು ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಯುವಕರು ಐದು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್ ಮಾತನಾಡಿ, ನಮ್ಮ ಮುಖಂಡರು ಗಾಂಜಾ ವಿಚಾರದಲ್ಲಿ ಮಾಹಿತಿ ನೀಡಿದರೆ ಪೊಲೀಸ್ ಸಿಬ್ಬಂದಿ ತಕ್ಷಣ ಕ್ರಮ ಕೈಗೊಳ್ಳಬೇಕು. ಸಂಜೆಯಾದರೆ ಗಾಂಜಾ ಸೇವಿಸಿ ಸಾರ್ವಜನಿಕರನ್ನು ನೋಡುವ ದೃಷ್ಟಿನೇ ಬೇರೆಯಾಗಿದೆ. ಆದಷ್ಟು ಬೇಗ ಇದನ್ನೆಲ್ಲ ಹತೋಟಿಗೆ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಯಶಸ್, ಎಸ್ಟಿ ಮೋರ್ಚಾ ಅಧ್ಯಕ್ಷ ದುಶ್ಯಂತ್, ಕ್ಷೇತ್ರದ ಉಪಾಧ್ಯಕ್ಷ ಶಿವಪ್ಪ, ಪ್ರ.ಕಾರ್ಯದರ್ಶಿ ಶ್ರೀರಾಮುಲು, ವಾರ್ಡ್ ಅಧ್ಯಕ್ಷ ರಮೇಶ್, ಮುಖಂಡರಾದ ನವೀನ್, ಮಹೇಶ್ ಭಾಗವಹಿಸಿ ಡ್ರಗ್ಸ್ ವಿರುದ್ಧ ಅಭಿಯಾನಕ್ಕೆ ಸಹಿ ಹಾಕಿ ಮಾದಕ ವಸ್ತುಗಳ ಸೇವನೆ ವಿರೋಧಿಸಿದರು.