ETV Bharat / state

ಬೆಂಗಳೂರು ಡ್ರಗ್ಸ್​​ ಕೇಸ್​: ದೇಶ, ವಿದೇಶದ 40 ಮಂದಿ ಮಾಡೆಲ್​ಗಳಿಗೆ ನೋಟಿಸ್ - ದೇಶ ಮತ್ತು ವಿದೇಶದ ಜನ ಮಾಡೆಲ್​ಗಳಿಗೆ ನೋಟಿಸ್​ ಜಾರಿ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರೇವ್‌ ಪಾರ್ಟಿ ಮತ್ತು ಡ್ರಗ್ಸ್​​ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು ದೇಶ-ವಿದೇಶದ 40 ಮಂದಿ ಮಾಡೆಲ್​ಗಳಿಗೆ ನೋಟಿಸ್​ ಜಾರಿ ಮಾಡಿದ್ದಾರೆ.

Siddhanth Kapoor
ಸಿದ್ಧಾರ್ಥ್​​ ಕಾಪೂರ್
author img

By

Published : Jun 21, 2022, 4:06 PM IST

ಬೆಂಗಳೂರು: ನಗರದ ಐಷಾರಾಮಿ ಹೋಟೆಲ್​ನಲ್ಲಿ ನಡೆದ ರೇವ್ ಪಾರ್ಟಿ ಮತ್ತು ಡ್ರಗ್ಸ್​​ ಸೇವನೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು ದೇಶ ಮತ್ತು ವಿದೇಶದ 40 ಜನ ಮಾಡೆಲ್​ಗಳಿಗೆ ನೋಟಿಸ್​ ನೀಡಿದ್ದಾರೆ. ಎಲ್ಲರಿಗೂ ಒಂದು ವಾರದೊಳಗೆ ತನಿಖೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಜೂನ್ 12ರಂದು ಬಾಲಿವುಡ್​ ನಟಿ ಶ್ರದ್ಧಾ ಕಪೂರ್ ಅವರ​ ಸಹೋದರ ಸಿದ್ಧಾರ್ಥ್​​ ಕಪೂರ್​ ಭಾಗವಹಿಸಿದ್ದ ಪಾರ್ಟಿಯಲ್ಲಿ ಸುಮಾರು 150 ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಡ್ರಗ್ಸ್​​ ಸೇವನೆ ಸಂಬಂಧ ಹಲಸೂರು ಪೊಲೀಸರು ದಾಳಿ ಮಾಡಿ ಹಲವರನ್ನು ಬಂಧಿಸಿದ್ದರು. ಇದರಲ್ಲಿ ಸಿದ್ಧಾರ್ಥ್​​ ಕಪೂರ್​ ಸೇರಿ ಆರು ಮಂದಿ ಡ್ರಗ್ಸ್ ಸೇವಿಸಿರುವುದು ಸಾಬೀತಾಗಿತ್ತು.

ಈ ಹಿಂದೆ ಆರು ಮಹಿಳಾ ಮಾಡೆಲ್​ಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿ ಅವರ ಹೇಳಿಕೆ ದಾಖಲಿಸಿಕೊಂಡಿದ್ಧರು. ಆದರೆ, ಇನ್ನೂ ಹಲವು ಮಾಡೆಲ್‌ಗಳು ಮತ್ತು ಸೆಲೆಬ್ರಿಟಿಗಳ ವಹಿವಾಟು ಮತ್ತು ಅವರ ಸಂಪರ್ಕಗಳ ಬಗ್ಗೆ ಕೆಲವು ಸಂಶಯಗಳು ಕಾಡುತ್ತಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಈ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕೆಲ ವಿದೇಶಿಯರು ತಮ್ಮ ವೀಸಾ ಅವಧಿ ಮುಗಿದ ಮೇಲೂ ಅಕ್ರಮವಾಗಿ ನೆಲೆಸಿದ್ದಾರೆ ಎಂಬುವುದು ತನಿಖೆಯ ವೇಳೆ ಬಯಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಸಿದ್ಧಾರ್ಥ್​​ ಕಪೂರ್ ಸೇರಿ ಆರು ಜನರನ್ನು ಪೊಲೀಸರು ಸ್ಟೇಷನ್​ ಬೇಲ್​ ಮೇಲೆ ಬಿಡುಗಡೆ ಮಾಡಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಸಿದ್ಧಾರ್ಥ್​​ ಕಾಪೂರ್, "ಸ್ನೇಹಿತರು ನೀರು ಮತ್ತು ಸಿಗರೇಟ್​​​ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ನನಗೆ ಕೊಟ್ಟಿದ್ದಾರೆ. ಇದನ್ನು ಅರಿಯದೇ ಕುಡಿದು ಸಿಗರೇಟ್​​ ಸೇವನೆ ಮಾಡಿದ್ದೆ" ಎಂದು ಹೇಳಿಕೆ ಕೊಟ್ಟಿದ್ದರು.

ಇದನ್ನೂ ಓದಿ: ಸ್ನೇಹಿತ ನೀಡಿದ ಸಿಗರೇಟ್​​ ಸೇದಿದ್ದಷ್ಟೇ... ಡ್ರಗ್ಸ್ ಸೇವನೆ ಮಾಡಿಲ್ಲ: ಸಿದ್ಧಾಂತ್ ಕಪೂರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.