ETV Bharat / state

ಬೇಬಿ ಬ್ಯಾಗ್​ನಲ್ಲಿತ್ತು 20 ಲಕ್ಷ ರೂ. ಮೌಲ್ಯದ ಮಾದಕ ವಸ್ತು: ಬೆಂಗಳೂರಲ್ಲಿ ಇಬ್ಬರು ಖದೀಮರು ವಶಕ್ಕೆ - drugs suplay in baby bag

ಬೇಬಿ ಬ್ಯಾಗ್​ನಲ್ಲಿಟ್ಟು ಸಾಗಿಸುತ್ತಿದ್ದ ಮಾದಕ ವಸ್ತುವನ್ನು ಎನ್.ಸಿ.ಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಇಬ್ಬರು ಖದೀಮರನ್ನು ಸಹ ವಶಕ್ಕೆ ಪಡೆದಿದ್ದಾರೆ.

banglore
ಬೇಬಿ ಬ್ಯಾಗ್​ನಲ್ಲಿ ಮಾದಕ ವಸ್ತು ಸಪ್ಲೆ
author img

By

Published : Nov 24, 2020, 12:16 PM IST

ಬೆಂಗಳೂರು: ಮಾದಕ ವಸ್ತುಗಳ‌ ಮೇಲೆ ಸಮರ ಸಾರುತ್ತಿರುವ ಎನ್.ಸಿ.ಬಿ ಅಧಿಕಾರಿಗಳು ಸದ್ಯ ಮತ್ತೆ ತಮ್ಮ ಬೇಟೆ ಶುರು ಮಾಡಿದ್ದಾರೆ. ಬೆಂಗಳೂರು ವಲಯದ ಎನ್.ಸಿ.ಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೇಬಿ ಬ್ಯಾಗ್​ನಲ್ಲಿಟ್ಟು ಸಾಗಿಸುತ್ತಿದ್ದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

ಮಾದಕ ವಸ್ತುವನ್ನು ಬೇಬಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ ಮಾಹಿತಿ ಎನ್.ಸಿ.ಬಿ ಗೆ ಬಾತ್ಮೀದಾರರಿಂದ ಬಂದಿತ್ತು. ಈ ಮಾಹಿತಿ ಆಧರಿಸಿ ದಾಳಿ ಮಾಡಿದಾಗ ದಕ್ಷಿಣ ಆಫ್ರಿಕಾಗೆ 6.870 ಕೆ.ಜಿ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಶುಕ್ಲಾ ಹಾಗೂ ಮರಿಯಾ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಈ ಆರೋಪಿಗಳ ಮಾಹಿತಿ ಮೇರೆಗೆ ಕಿಂಗ್ ಪಿನ್​ಗಳಾದ ನೈಜೀರಿಯಾ ಮೂಲದ ಒನೊವೋ ಹಾಗೂ ಓಕ್ವರ್​ರನ್ನು ಸಹ ಎನ್‌.ಸಿ.ಬಿ ವಶಕ್ಕೆ ಪಡೆದು ಒಟ್ಟು 20 ಲಕ್ಷ ರೂ. ಮೌಲ್ಯದ ಡ್ರಗ್ಸ್​ಅನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ‌ನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.