ETV Bharat / state

ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ವಸ್ತು ಸರಬರಾಜು: ಬಿಹಾರ ಮೂಲದ ಆರೋಪಿ ಬಂಧನ - ಈಟಿವಿ ಭಾರತ ಕನ್ನಡ

ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಮಾದಕವಸ್ತು ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

Etv drug-peddler-arrested-in-bengaluru
ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕವಸ್ತು ಸರಬರಾಜು : ಬಿಹಾರ ಮೂಲದ ಆರೋಪಿ ಬಂಧನ
author img

By

Published : Dec 17, 2022, 5:19 PM IST

ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕವಸ್ತು ಸರಬರಾಜು : ಬಿಹಾರ ಮೂಲದ ಆರೋಪಿ ಬಂಧನ

ಬೆಂಗಳೂರು : ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ ಮೂಲದ ಅಭಿಜಿತ್ ಎಂದು ಗುರುತಿಸಲಾಗಿದೆ. ಅಭಿಜಿತ್​ನಿಂದ ಸುಮಾರು 4 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಬಿಹಾರ ಮೂಲದ ಮತ್ತೋರ್ವ ಆರೋಪಿ ಆದೇಶದ ಅನ್ವಯ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಈ ಹಿಂದೆ ಸ್ವಿಗ್ಗಿ, ಜೊಮ್ಯಾಟೋ ಕಂಪನಿಗಳಲ್ಲಿ ಡಿಲವರಿ ಬಾಯ್ ಕೆಲಸ ಮಾಡಿಕೊಂಡಿದ್ದ ಅಭಿಜಿತ್​ ಕೆಲಸ ಬಿಟ್ಟ ಬಳಿಕ ಸಮವಸ್ತ್ರ ಹಾಗೂ ಬ್ಯಾಗನ್ನು ವಾಪಾಸ್ ನೀಡಿರಲಿಲ್ಲ. ಬಿಹಾರ ಮೂಲದ ಪ್ರಮುಖ ಆರೋಪಿಯಿಂದ ಮಾದಕ ಪದಾರ್ಥ ಹಾಗೂ ಅದನ್ನು ತಲುಪಿಸಬೇಕಿರುವ ಲೋಕೇಶನ್​ ಪಡೆಯುತ್ತಿದ್ದ ಅಭಿಜಿತ್, ಡಿಲಿವರಿ ಬಾಯ್ ಸೋಗಿನಲ್ಲಿ ಮಾದಕ ಪದಾರ್ಥಗಳನ್ನ ಕೊಂಡೊಯ್ದು ಲೊಕೇಶನ್ನಿನಲ್ಲಿರಿಸಿ ಬರುತ್ತಿದ್ದ.ಇದರಿಂದಾಗಿ ಗಿರಾಕಿಗಳು ಯಾರು ಎಂಬುದು ಸಹ ಅಭಿಜಿತ್​ಗೆ ಗೊತ್ತಾಗುತ್ತಿರಲಿಲ್ಲ.

ಆರೋಪಿಯು ವೈಟ್ ಫೀಲ್ಡ್ ಬಳಿ ಮಾದಕವಸ್ತು ಸರಬರಾಜಿನಲ್ಲಿ‌ ತೊಡಗಿದ್ದಾಗ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೋರ್ವ ಆರೋಪಿಯು ಬಿಹಾರದಲ್ಲಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ.

drug-peddler-arrested-in-bengaluru

ಇದೇ ರೀತಿ ಯಲಹಂಕ ಭಾಗದಲ್ಲೂ ಕಾಲೇಜು‌ ವಿದ್ಯಾರ್ಥಿಗಳಿಗೆ ಮಾದಕವಸ್ತು‌ ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ಶಿಬು ಟಿ. ಚಾಕೋ ಎಂಬಾತನನ್ನ ಬಂಧಿಸಲಾಗಿದೆ. ಬಂಧಿತನಿಂದ 5 ಲಕ್ಷ ಮೌಲ್ಯದ ಎಲ್.ಎಸ್.ಡಿ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರ: ಕಾಲೇಜು ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೊಲೆ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.