ETV Bharat / state

ಡ್ರಗ್ಸ್​ ಮಾಫಿಯಾ ನಂಟು ಆರೋಪ: ಕಾರ್ಪೊರೇಟರ್​ ಮಗನಿಗಾಗಿ ಎನ್​ಸಿಬಿ ಶೋಧ

ಮಹಾಲಕ್ಷೀ ಲೇಔಟ್ ಕಾಂಗ್ರೆಸ್ ಕಾರ್ಪೊರೇಟರ್ ಕೇಶವಮೂರ್ತಿ ಅವರ ಪುತ್ರ ಯಶಸ್​ ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿರುವ ಶಂಕೆ‌ ಹಿನ್ನೆಲೆ ಆತನಿಗಾಗಿ ಎನ್​ಸಿಬಿ ಶೋಧ ಕಾರ್ಯ ಮುಂದುವರೆಸಿದೆ.

ಕೇಶವಮೂರ್ತಿ ಪುತ್ರ ಯಶಸ್
ಕೇಶವಮೂರ್ತಿ ಪುತ್ರ ಯಶಸ್
author img

By

Published : Sep 14, 2020, 11:49 AM IST

ಬೆಂಗಳೂರು: ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಡ್ರಗ್ಸ್​ ಮಾಫಿಯಾ ನಂಟು ಹಿನ್ನೆಲೆಯಲ್ಲಿ ಎನ್​ಸಿಬಿ‌‌ ವಿಚಾರಣೆ ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮಹಾಲಕ್ಷೀ ಲೇಔಟ್ ಕಾಂಗ್ರೆಸ್ ಕಾರ್ಪೊರೇಟರ್ ಕೇಶವಮೂರ್ತಿ ಅವರ ಪುತ್ರ ಯಶಸ್​ ಡ್ರಗ್ಸ್​​ ಮಾಫಿಯಾದಲ್ಲಿ ಭಾಗಿಯಾಗಿರುವ ಶಂಕೆ‌ ಹಿನ್ನೆಲೆ ಆತನಿಗಾಗಿ ಶೋಧ ಕಾರ್ಯ ಮುಂದುವರೆಸಿದೆ.

ಈ ಹಿಂದೆ ಎನ್​ಸಿಬಿ ಸೆಪ್ಟೆಂಬರ್ 7ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ ಒಮ್ಮೆ ವಿಚಾರಣೆಗೆ ಹಾಜರಾದ ಯಶಸ್​ ನಂತರ ತಲೆಮರೆಸಿಕೊಂಡಿದ್ದಾನೆ. ಆ ಬಳಿಕ ಎನ್​ಸಿಬಿ,‌ ಸಿಸಿಬಿ ನೇತೃತ್ವದಲ್ಲಿ ದಾಳಿ ನಡೆಸಿ ಹುಡುಕಾಟ ನಡೆಸಲಾಗಿತ್ತು. ಸದ್ಯ ಡ್ರಗ್ಸ್​ ಜಾಲದ ತನಿಖೆ ಗಂಭೀರ ಸ್ವರೂಪ ಪಡೆಯುತ್ತಿದೆ. ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದ್ದರೂ ಸಹ ಯಶಸ್​ ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಲಾಗ್ತಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್​ ನಂಟಿನ ಆರೋಪ ಹಿನ್ನೆಲೆ ನಾರ್ಕೋಟಿಕ್ಸ್ ಕಂಟ್ರೋಲರ್ ಬ್ಯೂರೊ ತನಿಖೆಗೆ ಇಳಿದಿತ್ತು‌. ಈ ವೇಳೆ ಡ್ರಗ್ಸ್​ ಪೆಡ್ಲರ್ ಮೊಹಮ್ಮದ್ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಗೆ ಡ್ರಗ್ಸ್​ ಪೂರೈಕೆ ಮಾಡುತ್ತಿರುವ ವಿಚಾರ ಬಯಲಾಗಿತ್ತು. ನಂತರ ಎನ್‌ಸಿಬಿ ಆರೋಪಿ ಮೊಹಮದ್​ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮೊಹಮ್ಮದ್ ಜೊತೆ ಕಾರ್ಪೊರೇಟರ್ ಮಗ ಯಶಸ್​ ಸಂಪರ್ಕ ಹೊಂದಿರುವ ವಿಚಾರ ತಿಳಿದುಬಂದಿದೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.