ETV Bharat / state

ರಾಜ್ಯದಲ್ಲಿ ಕೊರೊನಾಗೂ ಕೇರ್​ ಮಾಡದ ಮಾದಕ ಲೋಕ: ದಾಖಲೆ ಪ್ರಮಾಣದಲ್ಲಿ ಸೇಲಾಗ್ತಿದೆಯಂತೆ ಡ್ರಗ್ಸ್​!

ಕೊರೊನಾ ಟೈಂನಲ್ಲಿ ಕೂಡ ಗಾಂಜಾ ಸಿಲಿಕಾನ್ ಸಿಟಿಯಲ್ಲಿ ಹರಿದಾಡಿತ್ತು. ಮಾದಕ ವಸ್ತುಗಳನ್ನ ಮಟ್ಟ ಹಾಕಲೆಂದು ರಾಜ್ಯ ಪೊಲೀಸ್ ಇಲಾಖೆ ಪಣ ತೊಟ್ಟಿದೆ. ‌ಸದ್ಯ‌ ಪ್ರತೀ ಡಿವಿಜನ್​ನಲ್ಲಿ ಡ್ರಗ್ಸ್​ ಪೆಡ್ಲರ್​ಗಳ‌ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

Drug
ಡ್ರಗ್ಸ್
author img

By

Published : Aug 31, 2020, 2:23 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ‌ ಡ್ರಗ್ ಹಾವಳಿ ಜಾಸ್ತಿಯಾಗ್ತಿದೆ.‌ ನಗರದ ಗಲ್ಲಿ ಗಲ್ಲಿಗಳಲ್ಲಿ ಒಂದಲ್ಲ ಒಂದು ಕಡೆ ಡ್ರಗ್ ಮಾರಾಟವಾಗ್ತಿರುತ್ತದೆ. ಮನೆ ಬಾಗಿಲಿಗೆ ಯಾವುದಾದರೂ ಆರ್ಡರ್ ಮಾಡಿದ ವಸ್ತುಗಳು ರೀಚ್ ಆಗೋದು ಲೇಟ್ ಆಗಬಹುದು. ಆದರೆ ಡ್ರಗ್ಸ್​ ಆರ್ಡರ್​ ಮಾಡಿದವರ ಮನೆಗೆ ಪೊಲೀಸರ ಕಣ್ತಪ್ಪಿಸಿ ಆರೋಪಿಗಳು ಅಮಲು ಪದಾರ್ಥವನ್ನು ಅರ್ಧ ಗಂಟೆಯೊಳಗೆ ಸಪ್ಲೈ ಮಾಡ್ತಾರಂತೆ.

ಸದ್ಯ ಸಿಟಿಯಲ್ಲಿ‌ಡ್ರಗ್ಸ್​​ ಪೆಡ್ಲರ್​ಗಳ ಮಟ್ಟ ಹಾಕೋದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಯಿಯವರು ಕೂಡ ಪಣ ತೊಟ್ಟಿದ್ದಾರೆ. ಕೊರೊನಾ ಸೋಂಕು ಇದ್ರೂ ಕೂಡ ಸಿಟಿಯಲ್ಲಿ ಡ್ರಗ್ಸ್​​ ಮಾರಾಟ ದಂಧೆ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಎಗ್ಗಿಲ್ಲದೆ ಡ್ರಗ್ಸ್​ ಮಾರಾಟವಾಗ್ತಿದೆ ಎನ್ನಲಾಗಿದೆ.

ಡ್ರಗ್ಸ್​ ಪೆಡ್ಲರ್​ಗಳ‌ನ್ನು ಮಟ್ಟ ಹಾಕಲು ಮುಂದಾದ ಪೊಲೀಸ್​ ಇಲಾಖೆ

ಕೊರೊನಾ ಟೈಂನಲ್ಲಿ ಕೂಡ ಗಾಂಜಾ ಸಿಲಿಕಾನ್ ಸಿಟಿಯಲ್ಲಿ ಹರಿದಾಡಿತ್ತು. ಮಾದಕ ವಸ್ತುಗಳನ್ನ ಮಟ್ಟ ಹಾಕಲೆಂದು ರಾಜ್ಯ ಪೊಲೀಸ್ ಇಲಾಖೆ ಪಣ ತೊಟ್ಟಿದೆ. ‌ಸದ್ಯ‌ ಪ್ರತೀ ಡಿವಿಜನ್​ನಲ್ಲಿ ಡ್ರಗ್ಸ್​ ಪೆಡ್ಲರ್​ಗಳ‌ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಆರೋಪಿಗಳನ್ನ ಪ್ರತೀ ದಿನ ಮಟ್ಟ ಹಾಕ್ತಿದ್ದಾರೆ.

ಎಲ್ಲೆಲ್ಲಿ ನಡೆಯತ್ತೆ ಗೊತ್ತಾ ಡ್ರಗ್ಸ್ ಡೀಲ್​:

ನಗರದಲ್ಲಿ ಡ್ರಗ್ಸ್​ ಜಾಲ ಬಹಳಷ್ಟು ಪವರ್​​ಫುಲ್ ಆಗಿದೆ. ಕೆಲವು ಬೇಕರಿ, ಪಾನ್ ಶಾಪ್, ಎಳನೀರು ಅಂಗಡಿ, ಪಿಜಿಗಳು, ದಿನಸಿ‌ ಅಂಗಡಿ,‌ ಮನೆಗಳು, ಕೊರಿಯರ್‌‌ ಮುಖಾಂತರ ಡ್ರಗ್ ಸಪ್ಲೈ, ಕಾಲೇಜ್ ಕ್ಯಾಂಟಿನ್, ಹಾಸ್ಟೆಲ್​​, ಪಿಜಿ, ದೊಡ್ಡ ದೊಡ್ಡ‌ ಹೋಟೆಲ್​​, ಬಾರ್ ಅಂಡ್​ ರೆಸ್ಟೋರೆಂಟ್​ ಹಾಗೆಯೇ ಹುಕ್ಕಾ ಸೆಂಟರ್​ಗಳಲ್ಲಿ ಪೂರೈಕೆ ‌ಆಗ್ತಿದೆಯಂತೆ.‌

ಕೋಡ್​ ವರ್ಡ್​ಗಳಲ್ಲಿ ಸೇಲ್​:

ಈ‌ ಡ್ರಗ್ಸ್​​ ಗ್ಯಾಂಗ್ ‌ತನ್ನದೇ ಆದ ವ್ಯವಸ್ಥಿತ ಜಾಲವನ್ನು ಸೃಷ್ಟಿ ಮಾಡಿಕೊಂಡಿದೆ. ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು, ಯುವಕರು, ಟೆಕ್ಕಿಗಳು, ವಿದ್ಯಾಭ್ಯಾಸಕ್ಕೆ ಹೊರಗಿನಿಂದ ಬಂದವರು, ಸಿನಿಮಾ ಮತ್ತು‌ ಕಿರುತೆರೆ ಕಲಾವಿದರು, ಕೆಲಸ ಅರಸಿ ಬರುವ ಹೊಸ‌ ಯುವಕ-ಯುವತಿಯರು, ಸ್ಟಾರ್ ಹೋಟೆಲ್​ಗಳು, ಹೈಸ್ಕೂಲ್ ‌ಮಕ್ಕಳನ್ನ ಇವರು ಟಾರ್ಗೆಟ್‌‌ ಮಾಡಿಕೊಂಡು ಮಾರಾಟ ಮಾಡುತ್ತಾರೆ.

ದಾಖಲಾದ ಪ್ರಕರಣಗಳೆಷ್ಟು ಗೊತ್ತಾ?

ಇನ್ನು 2020ರ ಜನವರಿಯಿಂದ ಇಲ್ಲಿಯವರೆಗೆ ದಾಖಲಾದ ಕೇಸ್​ಗಳನ್ನ ನೋಡುವುದಾದರೆ, ಕೇಂದ್ರ ವಿಭಾಗದಲ್ಲಿ 15, ಪಶ್ಚಿಮ ವಿಭಾಗ 235, ಉತ್ತರ ವಿಭಾಗ 105, ದಕ್ಷಿಣ ವಿಭಾಗ 90, ಆಗ್ನೇಯ ವಿಭಾಗ 59, ವೈಟ್ ಫೀಲ್ಡ್ ವಿಭಾಗ 71, ಈಶಾನ್ಯ ವಿಭಾಗದಲ್ಲಿ 160 ಪ್ರಕರಣಗಳು ದಾಖಲಾಗಿವೆ. ಇದು ಕೇವಲ 8 ತಿಂಗಳಲ್ಲಿ ಬೆಂಗಳೂರು ವಿಭಾಗದಲ್ಲಿ ದಾಖಲಾದ ಪ್ರಕರಣಗಳು.

ಆದರೆ ಪೊಲೀಸರು ಹೇಳುವ ಪ್ರಕಾರ, ಕೊರೊನಾ ಟೈಂನಲ್ಲಿ ಲಾಕ್​ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ಕೂಡಾ ಡ್ರಗ್ಸ್​ ಪೆಡ್ಲರ್​ಗಳ ಹಾವಳಿ ಕಡಿಮೆ ಇರಲಿಲ್ಲ‌. ‌ಪೊಲೀಸರ ಕಣ್ತಪ್ಪಿಸಿ ಕೊಕೇನ್​​, ಅಫೀಮು, ಗಾಂಜಾ , ಹಶೀಶ್, ಹೆರಾಯಿನ್, ಎಲ್​ಎಸ್​ಡಿ ಮಾರಾಟ ಮಾಡ್ತಿದ್ರು.

ಎಲ್ಲಿಂದ ಬರುತ್ತೆ ಈ ಡ್ರಗ್ಸ್​:

ಇಲ್ಲಿಯವರೆಗೆ ಬಂಧನಕ್ಕೆ ಒಳಗಾದ 200ಕ್ಕೂ ಹೆಚ್ಚು ಆರೋಪಿಗಳನ್ನ ವಿಚಾರಣೆ ಮಾಡಿದಾಗ ಈ ಆರೋಪಿಗಳು ಗೋವಾ, ಕೇರಳ, ತಮಿಳುನಾಡು ಬೆಂಗಳೂರನ್ನ ಕೆಂದ್ರವಾಗಿರಿಸಿದ್ದಾರೆ‌. ಇಲ್ಲಿಯ ಡ್ರಗ್ಸ್​ ಪೆಡ್ಲರ್​ಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿ ಮಾಡ್ತಾರೆ. ಅಲ್ಲದೆ ನೈಜಿರಿಯಾ, ಮುಂಬೈ, ಅಸ್ಸಾಂ, ಒಡಿಶಾ, ಜಾರ್ಖಂಡ್, ನೇಪಾಳ, ಪಂಜಾಬ್​ನಿಂದ ಕೂಡ ಮಾದಕ ದ್ರವ್ಯ ಮಾರಾಟ ಆಗ್ತಿದೆ. ಅದನ್ನು ನಗರಕ್ಕೆ ತಂದು ಒಂದು ಗ್ರಾಂಗೆ 8 ಸಾವಿರದಿಂದ 12 ಸಾವಿರದವರೆಗೆ ಮಾರಾಟ ಮಾಡಲಾಗುತ್ತದೆ.

ಇನ್ನು ಇದು ಅಂಚೆ, ಬಸ್ಸು, ರೈಲ್ವೆ, ಗೂಡ್ಸ್ ವಾಹನದ ಮೂಲಕ ನಗರಕ್ಕೆ ಬಂದು ಸೇರುತ್ತದೆ. ಮತ್ತೊಂದೆಡೆ ವಿದೇಶಿ ಪ್ರಜೆಗಳು ವೀಸಾ ಅವಧಿ‌ ಮುಗಿದಿದ್ದರೂ ಕೂಡ ತಮ್ಮ ದೇಶಕ್ಕೆ ಹೋಗದೆ ನಗರದಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹೆಣ್ಣೂರು, ರಾಮಮೂರ್ತಿನಗರ, ಬಾಣಸವಾಡಿ, ಕೋರಮಂಗಲ ಹೀಗೆ ನಗರದ ಬಹುತೇಕ ಕಡೆ ನಕಲಿ‌ ದಾಖಲೆ ಕೊಟ್ಟು, ಬಾಡಿಗೆ ಮನೆ ಪಡೆದು ತದ ನಂತರ ತಮ್ಮದೇ ಗ್ಯಾಂಗ್ ಸೃಷ್ಟಿ ಮಾಡಿ ಗಾಂಜಾ ಮಾರಾಟ ಮಾಡ್ತಾರೆ. ಈವರೆಗೆ ಒಟ್ಟು 799 ವಿದೇಶಿಗರನ್ನ ಕೂಡ ಬಂಧಿಸಲಾಗಿದೆ.

ಸಿಬ್ಬಂದಿಯ ತಂಡ ರೆಡಿ:

ಸಿಲಿಕಾನ್ ಸಿಟಿಯನ್ನ ಮಾದಕ ಮುಕ್ತ ಸಿಟಿಯನ್ನಾಗಿ ಮಾಡಬೇಕೆಂದು ಸರ್ಕಾರ ಪಣ ತೊಟ್ಟಿದ್ದು, ಈ ಕಾರಣಕ್ಕಾಗಿ ಗೃಹ ಸಚಿವರ ಆದೇಶದ ಮೇರೆಗೆ ನಗರ ಪೊಲೀಸರು ಡ್ರಗ್ ಮಾಫಿಯಾವನ್ನ ಬಯಲಿಗೆ ಎಳೆಯಲು ‌ಮುಂದಾಗಿದ್ದಾರೆ. ಈವರೆಗೆ 1.5 ಕೋಟಿ ಮೌಲ್ಯದ ಎಲ್​ಎಸ್​ಡಿ, ಎಂಡಿಎಂಎ, ಎಕ್ಸ್ಟಿಸಿ‌ ಡ್ರಗ್ಸ್ ಬಣ್ಣ ಬಣ್ಣದ, ಚಿತ್ರ ವಿಚಿತ್ರವಾಗಿ ಹೋಲುವ ಪೇಪರ್ ಮುಖಾಂತರ ಮಾರಾಟ ಮಾಡುವ ಡ್ರಗ್ಸ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್‌ ಪಾಟೀಲ್ ನೇತೃತ್ವದಲ್ಲಿ ಡಿಸಿಪಿ ಕುಲ್ ದೀಪ್ ಜೈನ್, ಡಿಸಿಪಿ ‌ರವಿ, ‌ಹಾಗೆಯೇ ಇನ್ಸ್​ಪೆಕ್ಟರ್​ ಹಾಗೂ ವಿಭಾಗದ ಡಿಸಿಪಿ ತಂಡ ರೆಡಿಯಾಗಿದೆ. ಹಾಗೇ ಸಿಸಿಬಿಯ ಎಲ್ಲಾ ವಿಂಗ್​ಗಳನ್ನ ಡ್ರಗ್ಸ್ ಜಾಲ ಪತ್ತೆಗೆ ತಯಾರು ಮಾಡಲಾಗಿದೆ. ಬೆಂಗಳೂರು ಅಲ್ಲದೆ ಇಡೀ ಕರ್ನಾಟಕದಲ್ಲಿ ಡ್ರಗ್ಸ್​​ ನಿರ್ಮೂಲನೆ ಮಾಡಲು ಪೊಲೀಸರು ತಂಡ ರೆಡಿ ಮಾಡಿದ್ದಾರೆ. ಆದರೆ ಡ್ರಗ್ಸ್ ಮಾಫಿಯಾದವರ ಪ್ರಮುಖ ಟಾರ್ಗೆಟ್ ಬೆಂಗಳೂರು ಆಗಿದೆ.

ಆರೋಪಿಗಳನ್ನ ಮಟ್ಟ ಹಾಕಿದರೆ ಮಾತ್ರ ಸಾಲದು, ಅದರ ಬದಲು ಮಾದಕ ಪದಾರ್ಥಗಳ ಜಾಗೃತಿ ಕಾರ್ಯಕ್ರಮ ಮಾಡಲು ಸಹ ಇಲಾಖೆ ಮುಂದಾಗಿದೆ. ಮಾದಕ ವಸ್ತು ವಿರೋಧಿ ಅಭಿಯಾನ ಮಾಡಿ ಎಲ್ಲಾ ಶಾಲಾ-ಕಾಲೇಜುಗಳು ಪ್ರಾರಂಭವಾಗುವ ಸಮಯದಲ್ಲಿ ಅದರ ಬಗ್ಗೆ ಅರಿವು ಮೂಡಿಸಲಿದ್ದಾರೆ.

ಇದರ ಬಗ್ಗೆ ಹೆಚ್ಚುವರಿ ಆಯುಕ್ತ ಸೌಮೆಂದ್ರ ಮುಖರ್ಜಿ ಈಟಿವಿ ಭಾರತದ ಜೊತೆ ಮಾತನಾಡಿ,‌ ಗೃಹ ಸಚಿವರ ಆದೇಶದಂತೆ ಸದ್ಯ ನಾವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಇದರ ಬಗ್ಗೆ ನಗರ ಪೊಲಿಸ್ ಆಯುಕ್ತ ಕಮಲ್ ಪಂತ್​ ಅವರು ಕೂಡ ಸೂಚನೆ ನೀಡಿದ್ದಾರೆ. ಹೀಗಾಗಿ ಡಿಸಿಪಿ ಅಧಿಕಾರಿಗಳು ಎಸಿಪಿ ಹಾಗೂ ಇನ್ಸ್​ಪೆಕ್ಟರ್​ ಮಟ್ಟದ ತಂಡ ರೆಡಿ‌ ಮಾಡಿಕೊಂಡು ಪ್ರತಿದಿನ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸ್ತಿದ್ದಾರೆ. ಹಾಗೆಯೇ ಸದ್ಯ ಕೊರೊನಾ ಕಾರಣ ಶಾಲಾ-ಕಾಲೇಜುಗಳು ಮುಚ್ಚಿವೆ‌. ಕಾಲೇಜ್​ಗಳು ಮತ್ತೆ ತೆರೆದಾಗ ಶಿಕ್ಷಕರಿಗೆ, ಆಡಳಿತ ಮಂಡಳಿ ಜೊತೆ ಜಾಗೃತಿ‌ ಮೂಡಿಸಲು ಮುಂದಾಗುತ್ತೇವೆ. ಸಿಟಿಯಲ್ಲಿ ಡ್ರಗ್ಸ್​ ಮಾರಾಟ ಮಾಡುವ ಪೆಡ್ಲರ್ ಮೇಲೆ ಗೂಂಡಾ ಆ್ಯಕ್ಟ್ ಹಾಕಿ ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.