ETV Bharat / state

ಬಿನೀಶ್ ಕೊಡಿಯೇರಿ ಡ್ರಗ್ಸ್ ಅಕ್ರಮ ಹಣ ವಹಿವಾಟು ಪ್ರಕರಣ: 104 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಇಡಿ - Drug case

ಡ್ರಗ್ಸ್ ಪ್ರಕರಣದಲ್ಲಿ ಅಕ್ರಮ ಹಣದ ವಹಿವಾಟು ಮತ್ತು ಆರೋಪಿಗಳ ಪಾತ್ರದ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಿಟಿ ಸಿವಿಲ್ ಕೋರ್ಟ್ 34ನೇ ನ್ಯಾಯಾಲಯಕ್ಕೆ ಇಡಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಕರಣದ ನಾಲ್ಕನೇ ಆರೋಪಿಯನ್ನಾಗಿ ಬಿನೀಶ್ ಕೊಡಿಯೇರಿ ಹೆಸರನ್ನು ನಮೂದಿಸಲಾಗಿದೆ.

Bineesh Kodiyeri
Bineesh Kodiyeri
author img

By

Published : Feb 10, 2021, 4:06 AM IST

ಬೆಂಗಳೂರು: ಬಿನೀಶ್ ಕೊಡಿಯೇರಿ ಡ್ರಗ್ಸ್​ನ ಹಣ ವಹಿವಾಟು ಪ್ರಕರಣದ ಸಂಬಂಧ 104 ಪುಟಗಳ ಚಾರ್ಜ್ ಶೀಟ್ ಅನ್ನು ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದೆ.

ಡ್ರಗ್ಸ್ ಪ್ರಕರಣದಲ್ಲಿ ಅಕ್ರಮ ಹಣದ ವಹಿವಾಟು ಮತ್ತು ಆರೋಪಿಗಳ ಪಾತ್ರದ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಿಟಿ ಸಿವಿಲ್ ಕೋರ್ಟ್ 34ನೇ ನ್ಯಾಯಾಲಯಕ್ಕೆ ಇಡಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಕರಣದ ನಾಲ್ಕನೇ ಆರೋಪಿಯನ್ನಾಗಿ ಬಿನೀಶ್ ಕೊಡಿಯೇರಿ ಹೆಸರು ನಮೂದಿಸಲಾಗಿದೆ.

ಬಿನೀಶ್ ಕೊಡಿಯೇರಿ ಕೇರಳದ ಮಾಜಿ ಗೃಹ ಸಚಿವರ ಪುತ್ರನಾಗಿದ್ದು ಅನೂಪ್ ಜೊತೆಗಿನ ವ್ಯವಹಾರದಲ್ಲಿ ಅಕ್ರಮ ಹಣದ ವಹಿವಾಟು ಪತ್ತೆ ಹಚ್ಚಲಾಗಿದೆ. ಅನೂಪ್​ನನ್ನು ಬೇನಾಮಿಯಾಗಿ ಬಳಕೆ ಮಾಡಿಕೊಂಡಿದ್ದ ಬಿನೇಶ್ ಕೋಡಿಯೇರಿ, ಅವನ ಹೆಸರಲ್ಲಿ ಬೆಂಗಳೂರು ಮತ್ತು ಕೇರಳದಲ್ಲಿ ಹೊಟೇಲ್ ತೆರೆದಿದ್ದ. ಅನೂಪ್​ಗೆ ಡ್ರಗ್ಸ್ ವ್ಯವಹಾರಕ್ಕೆ ಹಣದ ಪೂರೈಕೆ ಮಾಡಿದ್ದ ಬಿನೇಶ್ ಕೊಕೇನ್ ಮತ್ತು ಡ್ರಗ್ಸ್ ಸೇವನೆಗೆ ಬ್ಲಾಕ್ ಮನಿ ಬಳಕೆ ಮಾಡಿಕೊಳ್ಳುತ್ತಿದ್ದ.

ಇದನ್ನೂ ಓದಿ: ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ.. 20ಕ್ಕೂ ಹೆಚ್ಚು ಅಧಿಕಾರಿಗಳಿಂದ ಮುಂದುವರೆದ ಶೋಧ..

ಕೇರಳ ಸರ್ಕಾರದ ಅನೇಕ ಟೆಂಡರ್ ಯೋಜನೆಗಳಿಗೆ ಕಮಿಷನ್ ಪಡೆಯುತ್ತಿದ್ದ ಈತನ ಬಗ್ಗೆ ಸೂಕ್ತ ದಾಖಲೆಗಳನ್ನು ಇಡಿ ಸಂಗ್ರಹಿಸಿದೆ. ಅಕ್ರಮ ಹಣವನ್ನು ಬೇನಾಮಿಯಾಗಿ ಬಳಕೆ ಮಾಡಿಕೊಂಡಿದ್ದ ಬಿನೇಶ್ ನಗರದಲ್ಲಿ ಸುಹಾಸ್ ಕೆ ಗೌಡ ಎನ್ನುವವನ ಜೊತೆ ಸೇರಿ ಹೌಸ್ ಪಾರ್ಟಿಗೆ ಕೊಕೇನ್ ಬಳಕೆಮಾಡಿದ್ದ.

ಆ ಡ್ರಗ್ಸ್ ಖರೀದಿ ಮಾಡಲು ಅಕ್ರಮ ಸಂಪಾದನೆಯ ಬಳಕೆ ಮಾಡಿರುವುದು ಪತ್ತೆ ಹಚ್ಚಲಾಗಿದ್ದು, ಮೊಹಮ್ಮದ್ ಎನ್ನುವವನು ಅನೂಪ್ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ನಮೂದಿಸಲಾಗಿದೆ. ಅಕ್ರಮ ಹಣದ ಮೂಲ ಪತ್ತೆ ಮಾಡಿರುವುದು ಹಾಗೂ ಡ್ರಗ್ಸ್ ಬಳಕೆ ಮಾಡಲು ಈ ಹಣವನ್ನು ಬಳಸಿಕೊಂಡಿರುವುದು ಪತ್ತೆಯಾಗಿದೆ.

ಎನ್​ಸಿಬಿ ಡಿ ಅನಿಕಾ, ರಿಜೇಶ್ ರವಿಚಂದ್ರನ್, ಮೊಹಮ್ಮದ್ ಅನೂಪ್ ಮತ್ತು ಬಿನೀಶ್ ಕೊಡಿಯೇರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

ಪ್ರಕರಣದ ಹಿನ್ನಲೆ: ಡ್ರಗ್ಸ್ ಸಮೇತ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದ ಎನ್​ಸಿಬಿ ಅಧಿಕಾರಿಗಳು ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ಸೀಜ್ ಮಾಡಿದ್ದರು. ಅಕ್ರಮ ಹಣದ ವರ್ಗಾವಣೆ ಪತ್ತೆಯಾದ ಹಿನ್ನೆಲೆಯಲ್ಲಿ ಪಿಎಂಎಲ್ಎ ಆಕ್ಟ್ ಅಡಿ ಕೇಸ್ ದಾಖಲಿಸಲಾಗಿತ್ತು ಹಾಗೂ ಅಕ್ರಮ ಹಣ ವರ್ಗಾವಣೆ ಸಂಬಂಧ ಅನೇಕ ದಾಖಲೆಗಳನ್ನು ಇಡಿಯಿಂದ ಸೀಜ್ ಮಾಡಲಾಗಿತ್ತು.

ಅನೂಪ್ ಕೊಟ್ಟ ಮಾಹಿತಿ ಮೇರೆಗೆ ಬಿನೇಶ್ ಕೊಡಿಯೇರಿ ಬಂಧಿಸಲಾಗಿತ್ತು. ಪ್ರಕರಣದ ಎ1 ಆರೋಪಿ ಅನಿಕಾ ಟಾಮ್ ಟಾಮ್ ಎಂಬಾತನಿಂದ ಡ್ರಗ್ ಖರೀದಿ ಮಾಡಿದ್ದಳು. ಅದನ್ನು ನಗರದ ಪ್ರತಿಷ್ಠಿತ ಮ್ಯೂಸಿಷಿಯನ್ಸ್, ಡ್ರಾಗ್ ಕ್ವೀನ್​ಗಳಿಗೆ ಮಾರಾಟ ಮಾಡಲಾಗಿತ್ತು. ರಿಜೇಶ್ ರವಿಚಂದ್ರನ್ ಮ್ಯೂಸಿಕ್ ಪಾರ್ಟಿಗಳಿಗೆ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದ. ಈ ವೇಳೆಯಲ್ಲಿ ವಿದೇಶದಿಂದ ಹವಾಲಾ ವರ್ಗಾವಣೆಯಲ್ಲಿ ಭಾಗಿಯಾಗಿದ್ದ ಬಗ್ಗೆ ಕೂಡ ಪತ್ತೆಯಾಗಿತ್ತು. ಮೊಹಮ್ಮದ್ ಅನೂಪ್ ಸಹ ಅನಿಕಾಳಿಂದ ಡ್ರಗ್ ಖರೀದಿ ಮಾಡಿದ್ದು ಪತ್ತೆಹಚ್ಚಲಾಗಿತ್ತು. ಖರೀದಿ ಮಾಡಲು ಆತ ಬಿನೇಶ್ ಕೊಡಿಯೇರಿ ಕೊಟ್ಟ ಸಂಬಳ ಬಳಕೆ ಮಾಡುತ್ತಿದ್ದ. ಈ ಮಾಹಿತಿ ಆಧಾರದ ಮೇಲೆ ಬಿನೇಶ್ ಕೊಡಿಯೇರಿ ಇಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಸದ್ಯ 104 ಪುಟಗಳ ಚಾರ್ಜ್ ಶೀಟ್ ಫೈಲ್ ಮಾಡಿಲಾಗಿದ್ದು. ಸಿಟಿ ಸಿವಿಲ್ ಕೋರ್ಟ್​ನ 34ನೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.