ETV Bharat / state

ಮಂಗಳೂರು-ಬೆಂಗಳೂರು ಮಾದಕ ನಂಟು ಜಾಲಾಡುತ್ತಿರುವ ಸಿಸಿಬಿ: ರಾಗಿಣಿಗೆ ಕಾದಿದೆ ಸಂಕಷ್ಟ - ಬೆಂಗಳೂರು ಡ್ರಗ್ ಲಿಂಕ್ ಕೇಸ್​ ಅಪ್ಡೇಟ್

ಡ್ರಗ್ಸ್​​ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತನಾದ ಮಂಗಳೂರು ಮೂಲದ ಪ್ರತೀಕ್ ಶೆಟ್ಟಿಯನ್ನ ಸಿಸಿಬಿ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಈತ ನಟಿ ರಾಗಿಣಿ ಹೆಸರನ್ನು ಹೇಳಿದ್ದಾನೆ ಎನ್ನಲಾಗಿದೆ. ಇದನ್ನೇ, ರಾಗಿಣಿ ವಿರುದ್ಧ ಸಾಕ್ಷ್ಯವಾಗಿ ಪರಿಗಣಿಸಲು ಸಿಸಿಬಿ ಸಿದ್ಧತೆ ನಡೆಸಿದೆ.

Drug case accused Prateek Shetty inquiry from CCB
ಸಿಸಿಬಿಯಿಂದ ಬೆಂಗಳೂರು-ಮಂಗಳೂರು ಡ್ರಗ್​ ಜಾಲದ ತನಿಖೆ
author img

By

Published : Sep 24, 2020, 10:58 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ತೀವ್ರಗೊಂಡಿದೆ. ಡ್ರಗ್ಸ್​ ಜಾಲದ ಕಬಂಧಬಾಹುಗಳು ಮಂಗಳೂರಿಗೂ ಚಾಚಿವೆ. ಮಾದಕ ಲೋಕದ ನಂಟಿನ ಆರೋಪದಲ್ಲಿ ಡ್ಯಾನ್ಸರ್​​ ಕಿಶೋರ್​​ ಶೆಟ್ಟಿಯನ್ನ ಬಂಧಿಸಿರುವ ಸಿಸಿಬಿ ಅಧಿಕಾರಿಗಳು, ಮಂಗಳೂರು-ಬೆಂಗಳೂರು ನಡುವಿನ ಮಾದಕ ಜಾಲದ ಹಿನ್ನೆಲೆಯನ್ನು ಜಾಲಾಡ್ತಿದ್ದಾರೆ.

ಆರೋಪಿಗಳಾದ ಕಿಶೋರ್​ ಶೆಟ್ಟಿ ಮತ್ತು ಪ್ರತೀಕ್ ಶೆಟ್ಟಿ ಮಾದಕ ಜಗತ್ತಿನಲ್ಲಿ ಒಂದೇ ಗ್ಯಾಂಗ್​ನಲ್ಲಿದ್ದವರು. ಹೆಚ್ವಿನ ಹಣ ಗಳಿಸುವ ಉದ್ದೇಶದಿಂದ ‌ತಮ್ಮದೇ ಜಾಲ ಸೃಷ್ಟಿಸಿಕೊಂಡು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು, ಡ್ಯಾನ್ಸ್ ಸ್ಟಾರ್​ಗಳು ಮತ್ತು ಶ್ರೀಮಂತರ ‌ಮಕ್ಕಳಿಗೆ ಡ್ರಗ್ಸ್​ ಸರಬರಾಜು ಮಾಡುತ್ತಿದ್ದರು. ಜೊತೆಗೆ ತಾವೂ ಸೇವನೆ ಮಾಡುತ್ತಿದ್ದರು ಎಂಬ ವಿಚಾರ ಬಯಲಾಗಿದೆ.

ಪ್ರತೀಕ್ ಶೆಟ್ಟಿಯನ್ನ ಬೆಂಗಳೂರು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರೆ, ಕಿಶೋರ್​​ ಶೆಟ್ಟಿಯನ್ನ ಮಂಗಳೂರು ಪೊಲೀಸರು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಅವಶ್ಯಕತೆ ಇದ್ದರೆ, ನ್ಯಾಯಾಲಯದ ಅನುಮತಿ ಪಡೆದು ಬೆಂಗಳೂರಿನ ಸಿಸಿಬಿ ಪ್ರಧಾನ ಕಚೇರಿಯಲ್ಲಿ ಕಿಶೋರ್​ ಶೆಟ್ಟಿಯನ್ನು ವಿಚಾರಣೆ​ ಮಾಡುವ ಸಾಧ್ಯತೆಯಿದೆ.

ಮೂಲತಃ ಮಂಗಳೂರಿನವನಾದ ಪ್ರತೀಕ್ ಶೆಟ್ಟಿ, ಬಿಇ ವ್ಯಾಸಂಗ ಮಾಡಿ ಮಾರ್ಕೆಟಿಂಗ್ ಕೆಲಸ ಮಾಡ್ತಿದ್ದ. 2018 ರಲ್ಲಿ ಪಬ್​ವೊಂದರಲ್ಲಿ ಆಫ್ರಿಕಾದ ಡ್ರಗ್ಸ್​​ ಪೆಡ್ಲರ್​ಗಳಾದ ಫೈತ್ ಚುಕ್ಸ್ ಮತ್ತು ಕಂಟೆ ಹೆನ್ರಿ ಪರಿಚಯವಾಗಿ, ಇವರ ಜೊತೆ ಸೇರಿಕೊಂಡು ಡ್ರಗ್ಸ್​ ‌ದಂಧೆಯಲ್ಲಿ ತೊಡಗಿದ್ದ. ಈ ವೇಳೆ, ನಟಿ ರಾಗಿಣಿಯ ಆಪ್ತರು ಸೇರಿದಂತೆ ಹಲವು ಮಂದಿಯ ಪರಿಚಯ ಈತನಿಗೆ ಆಗಿತ್ತು ಎನ್ನಲಾಗ್ತಿದೆ.

ಅಧಿಕ ಹಣ ಗಳಿಸುವ ಉದ್ದೇಶದಿಂದ ಪೊಲೀಸರ ಕಣ್ತಪ್ಪಿಸಿ ಡ್ರಗ್​ ದಂಧೆ ಮಾಡುತ್ತಿದ್ದ ಪ್ರತೀಕ್​ ಶೆಟ್ಟಿ, ಈ ಹಿಂದೆ ಇದೇ ಡ್ರಗ್​ ಜಾಲ ನಂಟು ಆರೋಪದಲ್ಲಿ ಬಾಣಸವಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಈ ವೇಳೆ ಈತ ರಾಗಿಣಿ ಹೆಸರು ಹೇಳಿದ್ದರೂ, ಸರಿಯಾದ ಸಾಕ್ಷ್ಯಗಳು ಸಿಗದ ಕಾರಣ ಪೊಲೀಸರ ರಾಗಿಣಿಯ ವಿಚಾರಣೆ ಮಾಡಿರಲಿಲ್ಲ. ಸದ್ಯ, ಪ್ರತೀಕ್ ಶೆಟ್ಟಿ ಹೇಳಿಕೆಯನ್ನು ಕೂಡ ರಾಗಿಣಿ ವಿರುದ್ಧ ಸಾಕ್ಷ್ಯವನ್ನಾಗಿ ಪರಿಗಣಿಸಲಾಗಿದೆ. ಪ್ರತೀಕ್ ಶೆಟ್ಟಿ, ರಾಗಿಣಿ ಗಾಂಜಾ ಸಪ್ಲೈ ಮಾಡಿದ್ದನ್ನು ಮತ್ತು ಸೇವಿಸಿದ್ದನ್ನು ಕಣ್ಣಾರೆ ನೋಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ರಾಗಿಣಿ ಆಪ್ತ ರವಿಶಂಕರ್​ ಕೂಡ ಡ್ರಗ್ಸ್​ ಟ್ಯಾಬ್ಲೆಟ್ ಪೂರೈಸಿರುವುದಾಗಿ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾನೆ ಎಂದು ಹೇಳಲಾಗ್ತಿದೆ.

ಇಂದು ನ್ಯಾಯಾಲಯಕ್ಕೆ ಸಾಕ್ಷ್ಯಗಳ ವರದಿಯನ್ನು ಸಿಸಿಬಿ ಪೊಲೀಸರು ಸಲ್ಲಿಕೆ ಮಾಡಲಿದ್ದಾರೆ. ಈಗಾಗಲೇ ಬಂಧಿತರಾದ ಎಲ್ಲಾ ಡ್ರಗ್ಸ್​ ಪೆಡ್ಲರ್​ಗಳು ರಾಗಿಣಿಯ ಹೆಸರನ್ನೇ ಹೇಳುತ್ತಿದ್ದಾರೆ. ಆದರೆ, ರಾಗಿಣಿ ಮಾತ್ರ ನಾನೇನು ತಪ್ಪೇ ಮಾಡಿಲ್ಲ ಎಂಬ ವಾದ ಮುಂದುವರೆಸಿದ್ದಾಳೆ. ಆದ್ದರಿಂದ, ಸಾಕ್ಷ್ಯ ಸಮೇತ ರಾಗಿಣಿಯನ್ನು ಖೆಡ್ಡಾಗೆ ಕೆಡವಲು ಸಿಸಿಬಿ ಸಜ್ಜಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.