ETV Bharat / state

ಮಾದಕ ದಂಧೆಕೋರರೊಂದಿಗೆ ಮತ್ತೊಮ್ಮೆ ಕೇಳಿ ಬಂದ ಸ್ಯಾಂಡಲ್​ವುಡ್ ನಂಟು - kannada actors drug case

ಡ್ರಗ್ ಪೆಡ್ಲರ್ ಲಿಯೋನಾರ್ಡ್ ಒಕ್ವುಡಿಲಿ ಸ್ಯಾಂಡಲ್​ವುಡ್​ನ ಕೆಲ ನಟ, ನಟಿಯರೊಂದಿಗೆ ಸಂಪರ್ಕ ಹೊಂದಿರುವುದು ಬಯಲಾಗಿದೆ.

drug case Accused had a connection with sandalwood stars?
ಡ್ರಗ್ಸ್ ದಂಧೆಕೋರರೊಂದಿಗೆ ತಾರೆಯರ ನಂಟು?
author img

By ETV Bharat Karnataka Team

Published : Dec 17, 2023, 1:23 PM IST

Updated : Dec 17, 2023, 2:03 PM IST

ಬೆಂಗಳೂರು: ಮೂರು ವರ್ಷಗಳ ಹಿಂದೆ ಮಾದಕ ದಂಧೆ ಪ್ರಕರಣಗಳಲ್ಲಿ ಸ್ಯಾಂಡಲ್​ವುಡ್ ನಟ-ನಟಿಯರ ಹೆಸರು ಕೇಳಿಬಂದಿತ್ತು. ಕನ್ನಡ ಚಿತ್ರರಂಗದಲ್ಲಿ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಮತ್ತೊಮ್ಮೆ ಮಾದಕ ವಸ್ತುಗಳ ದಂಧೆಕೋರರೊಂದಿಗೆ ಸ್ಯಾಂಡಲ್​ವುಡ್ ತಾರೆಯರ ಹೆಸರು ಕೇಳಿಬಂದಿದೆ.

ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ವಿದೇಶಿ ಡ್ರಗ್ಸ್​ ಪೆಡ್ಲರ್ ಜೊತೆ ಕೆಲ ನಟ ನಟಿಯರ ಸಂಪರ್ಕವಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿರುವ ಬೆಂಗಳೂರಿಗೆ ವಿದೇಶಿ ಮಾದಕ ಪದಾರ್ಥ ಬಂದು ತಲುಪುತ್ತಿದೆ ಎಂಬ ವಿಚಾರ ಪೊಲೀಸರಿಗೆ ತಿಳಿದು ಬಂದಿತ್ತು. ಅದರ ವಿರುದ್ಧ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ಇತ್ತೀಚೆಗೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಆಫ್ರಿಕಾ ಮೂಲದ ಆರೋಪಿ ಲಿಯೋನಾರ್ಡ್ ಒಕ್ವುಡಿಲಿ (44) ಎಂಬಾತನನ್ನು ಬಂಧಿಸಿ, ಅಂದಾಜು 21 ಕೋಟಿ ರೂ. ಬೆಲೆಬಾಳುವ 16 ಕೆ.ಜಿ ತೂಕದ ಮಾದಕ ಪದಾರ್ಥ, 500 ಗ್ರಾಂ ತೂಕದ ಕೊಕೇನ್, 1 ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ವಸತಿ ಶಾಲೆ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನಿಂಗ್​; ಕೋಲಾರದಲ್ಲಿ ಅಮಾನವೀಯ ಘಟನೆ

ಆರೋಪಿಯನ್ನು ವಿಚಾರಣೆಗೊಳಪಡಿಸಿ ಆತನ ಮೊಬೈಲ್ ಫೋನ್‌ ಪರಿಶೀಲಿಸಿದಾಗ ಸ್ಯಾಂಡಲ್​ವುಡ್​ನ ಕೆಲ ನಟ, ನಟಿಯರೊಂದಿಗೆ ಸಂಪರ್ಕ ಹೊಂದಿರುವುದು ಬಯಲಾಗಿದೆ. ಸದ್ಯ ಪೊಲೀಸರು ವಿಚಾರಣೆ ತೀವ್ರಗೊಳಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: 'ಜನರಲ್ ಹಾಸ್ಪಿಟಲ್' ಖ್ಯಾತಿಯ ನಟ ಜಾಕ್ ಆಕ್ಸೆಲ್ರೋಡ್ ವಿಧಿವಶ

Last Updated : Dec 17, 2023, 2:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.