ETV Bharat / state

ಬರ ಕಾಮಗಾರಿಗಳಿಗೆ ಕೊರೊನಾ ಬರೆ... ರಿಲೀಫ್ ನೀಡುತ್ತಾ ಲಾಕ್​ಡೌನ್ ಸಡಿಲಿಕೆ? - ಬರಪೀಡಿತ ತಾಲ್ಲೂಕುಗಳ ಬರ ಕಾಮಗಾರಿಗಳಿಗೆ ಕೊರೊನಾ ಬರೆ‘

ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು, ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಪೂರೈಕೆ ಯೋಜನೆಗಳ ಅನುಷ್ಠಾನಕ್ಕೆ ಕೊರೊನಾದ ಕರಿನೆರಳು ಬಿದ್ದಿದ್ದು ಎರಡು ತಿಂಗಳ ಕಾಲ ಬರ ಕಾಮಗಾರಿಗಳಿಗೆ ಕೋವಿಡ್ ಬರೆ ಎಳೆದಿದೆ. ಇದೀಗ ಲಾಕ್​ಡೌನ್ ಸಡಿಲಿಕೆಯಾಗಿದ್ದು, ಮತ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Banglore
ಬರಪೀಡಿತ ತಾಲ್ಲೂಕುಗಳ ಬರ ಕಾಮಗಾರಿಗಳಿಗೆ ಕೊರೊನಾ ಬರೆ...ರಿಲೀಫ್ ನೀಡುತ್ತಾ ಲಾಕ್​ಡೌನ್ ಸಡಿಲಿಕೆ?
author img

By

Published : May 18, 2020, 7:30 PM IST

ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿನ ಬರ ಕಾಮಗಾರಿಗಳ ಮೇಲೆ‌ ಕೊರೊನಾ ಕರಿನೆರಳು ಬಿದ್ದ ಪರಿಣಾಮ ರಾಜ್ಯದ ಬರಪೀಡಿತ ತಾಲೂಕುಗಳ ಘೋಷಣೆಯನ್ನ ಒಂದು ತಿಂಗಳ ಕಾಲ ವಿಸ್ತರಣೆ ಮಾಡಿ ಅಭಿವೃದ್ಧಿ ಕಾರ್ಯ ಆರಂಭಕ್ಕೆ ಸೂಚನೆ ನೀಡಿದೆ.

ಹೌದು, ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು, ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಪೂರೈಕೆ ಯೋಜನೆಗಳ ಅನುಷ್ಠಾನಕ್ಕೆ ಕೊರೊನಾದ ಕರಿನೆರಳು ಬಿದ್ದಿದ್ದು, ಎರಡು ತಿಂಗಳ ಕಾಲ ಬರ ಕಾಮಗಾರಿಗಳಿಗೆ ಕೋವಿಡ್ ಬರೆ ಎಳೆದಿದೆ. ಇದೀಗ ಲಾಕ್​ಡೌನ್ ಸಡಿಲಿಕೆಯಾಗಿದ್ದು, ಮತ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರು ನಗರದ 3, ಬೆಂಗಳೂರು ಗ್ರಾಮಾಂತರ 3, ರಾಮನಗರ 2, ಕೋಲಾರ 5, ಚಿಕ್ಕಬಳ್ಳಾಪುರ 3, ತುಮಕೂರು 7, ಚಿತ್ರದುರ್ಗ 3, ದಾವಣಗೆರೆ 1, ಚಾಮರಾಜನಗರ 1, ಬಳ್ಳಾರಿ 4, ಕೊಪ್ಪಳ 1, ರಾಯಚೂರು 3, ಕಲಬುರಗಿ 3, ಯಾದಗಿರಿ 1, ಬೆಳಗಾವಿ 1, ಬಾಗಲಕೋಟೆ 3, ವಿಜಯಪುರ 4, ಗದಗದ 1 ತಾಲೂಕು ಸೇರಿ 18 ಜಿಲ್ಲೆಗಳ 49 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ.

ಬರ ಪೀಡಿತ ತಾಲೂಕುಗಳಲ್ಲಿ ಬರ ನಿರ್ವಹಣೆಗೆ ಕೊರೊನಾ ಕರಿನೆರಳು ಬಿದ್ದಿದ್ದು, ಕಳೆದ ಒಂದೆರಡು ತಿಂಗಳಿನಿಂದ ಬರ ನಿರ್ವಹಣಾ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಗೋ ಶಾಲೆಗಳ ಆರಂಭ, ಮೇವು ಸಂಗ್ರಹ, ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ, ಕೆರೆಗಳ ಹೂಳೆತ್ತುವ ಕಾರ್ಯ, ಟ್ಯಾಂಕರ್ ಮೂಲಕ‌ ಹಳ್ಳಿಗಳಿಗೆ ನೀರು ಪೂರೈಕೆ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳ‌‌ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.

ಸಾಮಾಜಿಕ ಅಂತರ ಪಾಲನೆ ನಿಯಮದ ಕಾರಣದಿಂದ ರಾಜ್ಯದ ಇತರ ಭಾಗದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯ ಸ್ಥಗಿತಗೊಳಿಸಿದಂತೆ ಬರಪೀಡಿತ ತಾಲೂಕುಗಳಲ್ಲಿಯೂ ಎಲ್ಲ‌ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನ ನಿಲ್ಲಿಸಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿನ ಯೋಜನೆ, ರಸ್ತೆ ದುರಸ್ತಿ ಸೇರಿದಂತೆ ಎಲ್ಲ ಕಾಮಗಾರಿಗಳು ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದವು. ಸದ್ಯದ ಮಟ್ಟಿಗೆ ಇತರ ಎಲ್ಲ ಯೋಜನೆ ನಿಲ್ಲಿಸಿ ಕೇವಲ ಕೊರೊನಾ ನಿಯಂತ್ರಣಕ್ಕೆ ಆದ್ಯತೆ ನೀಡಿ ಎನ್ನುವ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ಕೂಡ ಇದಕ್ಕೆ ಕಾರಣವಾಗಿರಬಹುದು.

ಇದೀಗ ಲಾಕ್​ಡೌನ್​ 4.0 ಸಡಿಲಿಕೆಯಲ್ಲಿ ಸಾಕಷ್ಟು ವಲಯಕ್ಕೆ ವಿನಾಯಿತಿ ನೀಡಿದ್ದು, ಮತ್ತೆ ಬರ ಕಾಮಗಾರಿಗಳ ಆರಂಭಕ್ಕೆ ಸೂಚನೆ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಬರಪೀಡಿತ ತಾಲೂಕಿನ ಪಟ್ಟಿಯಲ್ಲಿದ್ದ ತಾಲೂಕುಗಳನ್ನ ಮತ್ತೊಂದು ತಿಂಗಳ ಕಾಲ ಬರಪೀಡಿತ ತಾಲೂಕುಗಳು ಎಂದೇ ಪರಿಗಣಿಸಿ ಅಭಿವೃದ್ಧಿ ಕಾರ್ಯ ನಡೆಸಲು ಮುಂದಾಗಿದೆ.

ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು, ರಸ್ತೆ ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಲಾಗಿದೆ. ಬರ ತಾಲೂಕುಗಳ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬರ ತಾಲೂಕುಗಳ ಅವಧಿಯನ್ನು ಮತ್ತೊಂದು ತಿಂಗಳಿಗೆ ವಿಸ್ತರಣೆ ಮಾಡಿ ಅಭಿವೃದ್ಧಿ ಕಾರ್ಯ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.

ಸಾಲ ಸೌಲಭ್ಯ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಕಾರಣ ಹೊಸ ಕಾಮಗಾರಿಗಳನ್ನೂ ಶುರು ಮಾಡಲಿದ್ದೇವೆ ಈ ಸಂಬಂಧ ಸದ್ಯದಲ್ಲೇ ಸಭೆ ನಡೆಸಿ ಹೊಸ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕುಡಿಯುವ ನೀರಿನ ಯೋಜನೆ ವಿವರ:

ಸದ್ಯ ರಾಜ್ಯದಲ್ಲಿ ಒಟ್ಟು 420 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರಲಾಗಿದ್ದು, 5,500 ಗ್ರಾಮಗಳ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಎಲ್ಲ ಗ್ರಾಮ ಪಂಚಾಯತ್​ಗಳಲ್ಲಿ ಶುದ್ಧ ಕುಡಿಯುವ ಘಟಕಗಳನ್ನು ಅಳವಡಿಸಿದ್ದು 16,000 ಘಟಕಗಳನ್ನು ಆರಂಭಿಸಲಾಗಿದೆ. 2 ಕೋಟಿ ಜನರ ಕುಡಿಯುವ ನೀರಿನ ಅಗತ್ಯ ಪೂರೈಕೆ ಮಾಡಲಾಗುತ್ತಿದೆ.

ನೀರಿನ ಮೂಲ‌ ಇಲ್ಲದ ಗ್ರಾಮಗಳು ಹಾಗೂ ನೀರಿನ ಕೊರತೆ ಇರುವ ಕಡೆಗಳಲ್ಲಿ ಸ್ಥಳೀಯ ಆಡಳಿತದ ಮೂಲಕ ಟ್ಯಾಂಕರ್​ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.