ಬೆಂಗಳೂರು: ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸದ್ಯ ನಗರದ ಪ್ರತಿ ಡಿವಿಜನ್ ಗಳಲ್ಲಿ ಸೈಬರ್ ಕ್ರೈಂ ಠಾಣೆಗಳನ್ನ ತೆರೆಯಲು ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ಇಂದು ವೈಟ್ ಫೀಲ್ಡ್ ವಿಭಾಗ ವ್ಯಾಪ್ತಿಯಲ್ಲಿ ಸೈಬರ್ ಸೆನ್ ಪೊಲೀಸ್ ಠಾಣೆಯನ್ನ ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಹಾಗೂ ಸೈಬರ್ ಠಾಣೆಯ ಇನ್ಸ್ಪೆಕ್ಟರ್ ಗುರುಪ್ರಸಾದ್ ಹಾಗೂ ಇತರೆ ಸಿಬ್ಬಂದಿ ಚಾಲನೆ ನೀಡಿದರು.
ವೈಟ್ ಫೀಲ್ಡ್ ವಿಭಾಗದಲ್ಲಿ ನಡೆಯುವ ಸೈಬರ್ ಅಪರಾಧ ಪ್ರಕರಣಗಳನ್ನು ಇಂದಿನಿಂದ ಶುರುವಾದ ಹೊಸ ಠಾಣೆಗಳಿಗೆ ತೆರಳಿ ದೂರು ನೀಡಬಹುದು. ಇದಕ್ಕಾಗಿ ಈಗಾಗಲೇ ಹೊಸತಾಗಿ ಇನ್ಸ್ಪೆಕ್ಟರ್ ಗುರುಪ್ರಸಾದ್ ಅವರನ್ನ ನೇಮಕ ಮಾಡಲಾಗಿದೆ. ಇವರ ಜೊತೆ ಪಿಎಸ್ಐ ಹಾಗೂ ಇತರೆ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಇವರಿಗೆಲ್ಲಾ ಇತ್ತಿಚೆಗೆ ನಗರ ಆಯುಕ್ತರ ಕಚೇರಿಯಲ್ಲಿ ಸೈಬರ್ ಅಪರಾಧವನ್ನ ಯಾವ ರೀತಿ ತಡೆಗಟ್ಟಬಹುದು, ಆರೋಪಿಗಳನ್ನ ಹೇಗೆ ಪತ್ತೆ ಮಾಡಬಹುದು ಎಂದು ಟ್ರೈನಿಂಗ್ ನೀಡಲಾಗಿತ್ತು. ಇನ್ನು ಇದೇ ವೇಳೆ ಠಾಣೆಯ ಸಿಬ್ಬಂದಿ ಲತಾ ಅವರ ಸೀಮಂತ ಕಾರ್ಯವನ್ನು ಕೂಡ ಮಾಡಲಾಯಿತು.