ಬೆಂಗಳೂರು: ಅತೃಪ್ತ ಶಾಸಕ ಡಾ.ಸುಧಾಕರ್ ಅವರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದಿಲ್ಲ. ಅವರು ನಮ್ಮ ಸ್ನೇಹಿತ. ನಮ್ಮ ಹಿತೈಷಿ. ನಮ್ಮ ಶಾಸಕ ಎಂದು ಮಾಜಿ ಸಿದ್ದರಾಮಯ್ಯ ತಿಳಿಸಿದರು.
ಸಮನ್ವಯ ಸಮಿತಿ ಅಧ್ಯಕ್ಷರಾಗಿ ನಾನು ಅವರನ್ನು ಮನವೊಲಿಸಲು ಯತ್ನಿಸಿದೆ. ಬಿಜೆಪಿ ಶಾಸಕರು ರೌಡಿಗಳು. ಅದನ್ನು ನಾನು ಖಂಡಿಸುತ್ತೇನೆ. ಅವರಿಗೆ ಯಾವುದೇ ಅಧಿಕಾರ ಇಲ್ಲ. ಬಿಜೆಪಿ ನಾಯಕರು ಗೂಂಡಾಗಳಾಗಿ ವರ್ತಿಸಿದರು. ಕಾಂಗ್ರೆಸ್ ನಾಯಕರು ಗೂಂಡಾಗಳಾಗಿ ವರ್ತಿಸಿಲ್ಲ. ಬಿಜೆಪಿ ಈ ರಾಜೀನಾಮೆ ಹಿಂದೆ ಇದೆ. ಇವತ್ತಿನ ಘಟನೆ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.