ಬೆಂಗಳೂರು: ಡಾ.ಮಜೀದ್ ಫೌಂಡೇಶನ್ ಸಾಮಿ - ಸಬಿನ್ಸಾ ಸಮೂಹದ ಸ್ಥಾಪಕ ಮತ್ತು ಅಧ್ಯಕ್ಷ ಡಾ. ಮುಹಮ್ಮದ್ ಮಜೀದ್ ಅವರಿಂದ ಸ್ಥಾಪಿತವಾದ ಲಾಭರಹಿತ ಸಂಸ್ಥೆಯು ಇಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ 2 ಕೋಟಿ ರೂ ಕೊಡುಗೆ ನೀಡಿದೆ.
ಸಾಮಿ - ಸಬಿನ್ಸಾ ಗ್ರೂಪ್‍ನ ಸ್ಥಾಪಕ ಮತ್ತು ಅಧ್ಯಕ್ಷರಾದ ಡಾ.ಮುಹಮ್ಮದ್ ಮಜೀದ್ ಮತ್ತು ಸಾಮಿ ಲ್ಯಾಬ್ಸ್ ಲಿಮಿಟೆಡ್‍ನ ಸಿಇಒ ಮತ್ತು ನಿರ್ದೇಶಕರಾದ ಶ್ರೀಮತಿ ನೀರಜಾ ಶೆಟ್ಟಿ ಅವರು ಡಿಸಿಎಂ ಡಾ.ಅಶ್ವತ್‍ನಾರಾಯಣ್ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು.
ಡಾ. ಮಜೀದ್ ಫೌಂಡೇಶನ್ ಬೆಂಗಳೂರು ಮತ್ತು ಹೈದರಾಬಾದ್‍ನಲ್ಲಿ ಕೊರೊನಾದಿಂದ ಬಳಲುತ್ತಿರುವವರಿಗೆ ಅಗತ್ಯವಾದ ಆಹಾರ ಪದಾರ್ಥಗಳು, ರಕ್ಷಣಾ ಸಾಧನಗಳು, ಹ್ಯಾಂಡ್ ಸ್ಯಾನಿಟೈಸರ್ಗಳು ಮತ್ತು ಆರೋಗ್ಯ ಪರಿಕರಗಳನ್ನು ಒದಗಿಸಿದೆ. ಇತ್ತೀಚೆಗೆ ಬೆಂಗಳೂರಿನ ಚೊಕ್ಕಸಂದ್ರ ಮತ್ತು ಪೀಣ್ಯಗಳಲ್ಲಿ ಡಾ. ಮಜೀದ್ ಫೌಂಡೇಶನ್ ಒಟ್ಟು 2,000 ಆಹಾರ ಕಿಟ್‍ಗಳನ್ನು ವಿತರಿಸಿದೆ.
ಪ್ರತಿ ಆಹಾರ ಕಿಟ್‍ನಲ್ಲಿ ಅಗತ್ಯ ಕಿರಾಣಿ ವಸ್ತುಗಳು- 5 ಕೆಜಿ ಅಕ್ಕಿ,1 ಕೆಜಿ ತೊಗರಿಬೇಳೆ, 1 ಕೆಜಿ ಹಿಟ್ಟು, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು, ಎಣ್ಣೆ ಪ್ಯಾಕ್, 1 ಸೋಪ್ ಮತ್ತು ಮರುಬಳಕೆ ಮಾಡಬಹುದಾದ ಮಾಸ್ಕ್ಗಳಿವೆ.
ಹೈದರಾಬಾದ್‍ನಲ್ಲಿ ಡಾ.ಮಜೀದ್ ಫೌಂಡೇಶನ್ ತುರ್ಕಪಲ್ಲಿ ಗ್ರಾಮದ ನಿವಾಸಿಗಳಿಗೆ, ವೃದ್ಧಾಶ್ರಮ ಮತ್ತು ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಒಟ್ಟು 1,600 ಆಹಾರ ಕಿಟ್‍ಗಳನ್ನು ವಿತರಿಸಿದೆ
ಈ ಬಗ್ಗೆ ಸಾಮಿ-ಸಬಿನ್ಸಾ ಸಮೂಹದ ಸ್ಥಾಪಕ ಮತ್ತು ಅಧ್ಯಕ್ಷ ಡಾ. ಮುಹಮ್ಮದ್ ಮಜೀದ್ ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದರಲ್ಲಿ ಹಾಗೂ ಸಮಾಜ ಹಾಗೂ ರಾಷ್ಟ್ರಕ್ಕೆ ಏನಾದರೂ ಮರಳಿ ನೀಡುವುದರಲ್ಲಿ ನಮಗೆ ಸದಾ ನಂಬಿಕೆ ಇದೆ ಎಂದಿದ್ದಾರೆ.