ಬೆಂಗಳೂರು: ರಾಜ್ಯವ್ಯಾಪಿ ಆರೋಗ್ಯ ದಾಖಲಾತಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಸಭೆ ನಡೆಸುತ್ತಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹಿರಿಯ ವೈದ್ಯರು ಮತ್ತು ಪ್ರಮುಖ ತಜ್ಞ ವೈದ್ಯರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಆರೋಗ್ಯ ದಾಖಲಾತಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ಕೆಲವೊಂದು ಮಾಹಿತಿಯನ್ನು ಸಚಿವರಿಗೆ ನೀಡುತ್ತಿದೆ.