ETV Bharat / state

ಶಾಲೆಗಳಿಗೆ ಬೆದರಿಕೆ ಮೇಲ್: ಕೇಂದ್ರ ಸರ್ಕಾರ ಮಾಹಿತಿ ಪಡೆದುಕೊಂಡಿದೆ.. ಡಾ ಜಿ ಪರಮೇಶ್ವರ್

45 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಮೇಲ್​ ಹೋಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ಗೃಹ ಸಚಿವ ಡಾ. ಜಿ ಪರಮೇಶ್ವರ್
ಗೃಹ ಸಚಿವ ಡಾ. ಜಿ ಪರಮೇಶ್ವರ್
author img

By ETV Bharat Karnataka Team

Published : Dec 1, 2023, 9:21 PM IST

ಗೃಹ ಸಚಿವ ಡಾ. ಜಿ ಪರಮೇಶ್ವರ್

ಬೆಂಗಳೂರು : ಬೆಂಗಳೂರಿನ ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿರುವ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಪಡೆದುಕೊಂಡಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್​ ತಿಳಿಸಿದರು. ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಸಭೆ ಮಾಡಿ ಚರ್ಚೆ ನಡೆಸಿದರು.

ಈ ಬಳಿಕ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ಇದೆ. ಕೇಂದ್ರ ಸರ್ಕಾರ ಗೃಹ ಇಲಾಖೆ ಪೊಲೀಸ್​ ಮಹಾ ನಿರ್ದೇಶಕರ ಬಳಿ ಮಾತನಾಡಿದ್ದಾರೆ. ಯಾವ ರೀತಿ ಪರಿಸ್ಥಿತಿ ಇದೆ ಎಂದು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಬೆಳಗ್ಗೆಯಿಂದಲೇ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಇದೀಗ ಇದು ಹುಸಿ ಬಾಂಬ್​ ಬೆದರಿಕೆ ಮೇಲ್​​ ಎನ್ನುವುದು ಗೊತ್ತಾಗಿದೆ. 45 ಶಾಲೆಗಳಿಗೆ ಈ ತರಹದ ಬೆದರಿಕೆ ಇ- ಮೇಲ್ ಹೋಗಿದೆ. ಅಲ್ಲೆಲ್ಲಾ ಸಂಪೂರ್ಣ ಹಾಗೂ ಕುಲಂಕಷ ಪರಿಶೀಲನೆಯನ್ನ ಮಾಡಿದ್ದಾರೆ. ಇದು ನಮ್ಮ‌ ದೇಶದಲ್ಲಿ ಮಾತ್ರ ಆಗಿಲ್ಲ. ಮಲೇಷ್ಯಾ, ಜರ್ಮನಿಯಲ್ಲಿ ಈ ತರಹದ ಇ -ಮೇಲ್​ ಸಂದೇಶ ಕಳುಹಿಸಿ, ಬೇರೆ ಬೇರೆ ಶಾಲೆಗಳಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್​ ಅವರು ಇದೇ ವೇಳೆ ತಿಳಿಸಿದರು.

ಇ-ಮೇಲ್ ಮೂಲ ಎಲ್ಲಿಂದ ಬಂದಿದೆ ಅಂತ ಪತ್ತೆ ಹಚ್ಚಲಾಗುತ್ತಿದೆ. ನಮ್ಮ ದೇಶದಿಂದ ಆ ಸಂದೇಶ ಬಂದಿಲ್ಲ. ಐಪಿ ಅಡ್ರೆಸ್ ಇಲ್ಲಿಂದ ಸಿಗುತ್ತಿಲ್ಲ. ಇ-ಮೇಲ್ ಕಂಪನಿಯವರಿಗೆ ಮೇಲ್ ಕಳುಹಿಸಲಾಗಿದೆ. ನಮಗೆ ಮಾಹಿತಿ ನೀಡುವಂತೆ ಹೇಳಿದ್ದೇವೆ. ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ಅದು ಬಂದ ತಕ್ಷಣ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕರ್ನಾಟಕದ ಗೃಹ ಸಚಿವರು ಹೇಳಿದರು.

ಪೊಲೀಸರು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಹೋಗಿ ಈ ಸಂಬಂಧ ಜಾಗೃತಿ ಮೂಡಿಸಲು ಸೂಚನೆ ನೀಡಿದ್ದೇವೆ. ಇದನ್ನು ಇಲ್ಲಿಗೆ ಬಿಡುವುದಿಲ್ಲ. ಮುಂದುವರಿದು ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ. ಇದೆಕ್ಕೆಲ್ಲಾ ಸಮಯ ತೆಗೆದುಕೊಳ್ಳುತ್ತದೆ. ಹೊರ ದೇಶದಿಂದ ಇದು ಬಂದಿದೆ. ಹಾಗಾಗಿ ಪತ್ತೆಗೆ ಸಮಯ ತೆಗೆದುಕೊಳ್ಳುತ್ತದೆ. ಅಗತ್ಯ ಬಿದ್ದರೆ ವಿಶೇಷ ತಂಡ ರಚನೆ ಮಾಡುತ್ತೇವೆ. ಸದ್ಯಕ್ಕೆ ಇಲ್ಲ. ಒಂದಷ್ಟು ಪರಿಣಿತರನ್ನು ಇದಕ್ಕೆ ನಿಯೋಜನೆ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಿಗೆ ಬಾಂಬ್​ ಬೆದರಿಕೆ: ಮೂಲ‌ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ- ಗೃಹ ಸಚಿವ ಜಿ.ಪರಮೇಶ್ವರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.