ETV Bharat / state

ಎಲ್ಲರೂ ಬಸವಣ್ಣನ ಅನುಯಾಯಿಗಳಾದರೆ ಸ್ವಾಮೀಜಿಗಳ ನಡುವೆ ಗುದ್ದಾಟವಿರಲ್ಲ: ಮುರುಘಾ ಶರಣರು - ಮಠಗಳ ಸ್ವಾಮೀಜಿಗಳ ನಡುವೆ ಗುದ್ದಾಟಗಳು

ಬೆಂಗಳೂರಿನ ಖಾಸಗಿ ಹೋಟೆಲ್​ವೊಂದರಲ್ಲಿ ಶಿವಶರಣರ ಸಮ್ಮೇಳನದ ಯಶಸ್ಸಿಗೆ ಕಾರಣರಾದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ, ಸ್ವಾಗತ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.

ಮುರುಘಾ ಶರಣರು
ಮುರುಘಾ ಶರಣರು
author img

By

Published : Feb 27, 2020, 4:18 AM IST

ಬೆಂಗಳೂರು: ಎಲ್ಲರೂ ಬಸವಣ್ಣನ ಅನುಯಾಯಿಗಳಾದರೆ ಮಠಗಳ ಸ್ವಾಮೀಜಿಗಳ ನಡುವೆ ಗುದ್ದಾಟಗಳು ಇರುವುದಿಲ್ಲ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶಿವಶರಣರ ಸಮ್ಮೇಳನದ ಸ್ವಾಗತ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನರ ಅನುಭಾವದ ಹಂಬಲ ಮತ್ತು ಶರಣರ ಶಕ್ತಿ ಗಣಮೇಳವನ್ನು ಯಶಸ್ವಿಗೊಳಿಸಿದೆ. ಇದು ಬಸವಣ್ಣನಿಗೆ ಸಲ್ಲಿಸಿದ ನಿಜವಾದ ಗೌರವ ಎಂದರು.

ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಅಭಿನಂದನಾ ಸಮಾರಂಭ

ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿ, ಪ್ರಮಥ ಗಣಮೇಳದಲ್ಲಿ ಸರ್ವ ಶರಣರ ಅಭಿವೃದ್ಧಿಗೆ ಕೈಗೊಂಡ ನಿರ್ಣಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಮುರುಘಾ ಶರಣರು ಕೇವಲ ವ್ಯಕ್ತಿಯಲ್ಲ, ಒಂದು ವಿಶಿಷ್ಟ ಶಕ್ತಿಯಾಗಿದ್ದಾರೆ. ಎಲ್ಲ ಮಠಗಳ ಸಾವಿರಾರು ಶ್ರೀಗಳನ್ನು ಒಂದೆಡೆ ಸೇರಿಸಿದ ಹಿರಿಮೆ ಅವರದು. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಮಾಡಿದ್ದರು. ರಾಜಕಾರಣಿಗಳೂ ಪಕ್ಷ ಭೇದ ಮರೆತು ಇಲ್ಲಿ ಸೇರಿದ್ದರು. ಶ್ರೀಗಳ ಆಶೀರ್ವಾದ ತಂದೆ ಯಡಿಯೂರಪ್ಪ ಅವರ ಮೇಲೆ ಇದ್ದು, ರಾಜ್ಯದ ಅಭಿವೃದ್ಧಿಗೆ ಶ್ರೀಗಳು ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದರು.

ಎಲ್ಲರೂ ಬಸವಣ್ಣನ ಅನುಯಾಯಿಗಳಾದರೆ ಸ್ವಾಮೀಜಿಗಳ ನಡುವೆ ಗುದ್ದಾಟವಿರಲ್ಲ: ಮುರುಘಾ ಶರಣರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.