ಬೆಂಗಳೂರು : ಈ ವರ್ಷ ಸಂವಿಧಾನ ಶಿಲ್ಪಿ ಡಾ ಬಿ ಅರ್ ಅಂಬೇಡ್ಕರ್ 129 ನೇ ಜಯಂತಿ ಆಚರಣೆಗೆ ಕಿಲ್ಲರ್ ಕೊರೊನ ಅಡ್ಡಲಾಗಿ ನಿಂತಿತ್ತು.
ಕೊರೊನ ಭೀತಿಯಿಂದ ಯಾರು ಕೂಡ ಮನೆಯಿಂದ ಹೊರ ಬಂದು ಗುಂಪು ಸೇರಿ ಬಾಬ ಸಾಹೇಬರ ಜಯಂತಿ ಆಚರಿಸ ಬೇಡಿ. ನಿಮ್ಮ ಮನೆಗಳಲ್ಲಿ ಆಚರಿಸಿ ಎಂದು ಸರ್ಕಾರ ಕೂಡ ಜನರಲ್ಲಿ ಮನವಿ ಮಾಡಿತ್ತು. ಅ ನಿಟ್ಟಿನಲ್ಲಿ ಸರ್ಕಾರಿ ಕಚೇರಿಗಳಲ್ಲೂ ಈ ವರ್ಷ ಸರಳವಾಗಿ ಬಾಬ ಸಾಹೇಬರ ಫೋಟೋಗೆ ಹೂ ಮಾಲೆ ಹಾಕುವ ಮೂಲಕ ಸರಳವಾಗಿ ಆಚರಿಸಿದ್ದಾರೆ.
ಅದೇ ರೀತಿ ಬೆಂಗಳೂರಿನ ಕೆಲವು ದಲಿತ ಸಂಘಟನೆಗಳು ಈ ವರ್ಷ ಬಹಳ ಸರಳವಾಗಿ ಸಂವಿಧಾನ ಶಿಲ್ಪಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಕರಿಸಂದ್ರ ವಾರ್ಡ್ ನಲ್ಲಿ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಿಸಿದ್ದಾರೆ. ಅಲ್ಲದೆ ಈ ವೇಳೆ ಪೌರಕಾರ್ಮಿಕರಿಗೆ ಸ್ವಯಂ ರಕ್ಷಣಾ ಕಿಟ್ ಗಳನ್ನು ವಿತರಿಸಲಾಯಿತು.