ಬೆಂಗಳೂರು: ವರ್ಗಾವಣೆ ದಂಧೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕಿಂಗ್. ನಾನು ವರ್ಗಾವಣೆಗೊಳಿಸಿ ಹಣ ಪಡೆದಿರುವುದಕ್ಕೆ ಒಂದೇ ಒಂದು ಸಾಕ್ಷಿ ತಂದು ತೋರಿಸಿದರೆ ಅವರು ಹೇಳಿದ ಹಾಗೇ ಕೇಳುತ್ತೇನೆಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಸವಾಲೆಸೆದಿದ್ದಾರೆ.
ಮುಖ್ಯ ಮಂತ್ರಿಗಳ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಒಂದು ರೂಪಾಯಿಯನ್ನು ವರ್ಗಾವಣೆಯಿಂದ ಪಡೆದಿಲ್ಲ. ಯಾರು ವರ್ಗಾವಣೆ ನಡೆಸಿದ್ದರೋ ಅವರು ಇವಾಗ ಈ ರೀತಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು. ಕಳಂಕ ಇಟ್ಟುಕೊಂಡು ರಾಜಕೀಯ ಮಾಡಲು ನಾವು ಬಂದಿಲ್ಲ ಎಂದರು.
ತಾನು ಎಷ್ಟು ಪ್ರಾಮಾಣಿಕ ಅಂತಾ ತಿಳಿದುಕೊಂಡು ಅವರು ಮಾತನಾಡಲಿ. ಸುಮ್ನೆ ಬಾಯಿ ಇದೆ ಅಂತಾ ಮಾತಾಡೋದಲ್ಲ. ನಾಲಿಗೆಗೆ ಬೆಲೆ ಇರಬೇಕು, ನಾಲಿಗೆ ಶುದ್ದ ಇರಬೇಕು. ನಾಯಕ ಎಂಬ ಪದದ ಅರ್ಥ ಮೊದಲು ಕುಮಾರಸ್ವಾಮಿ ತಿಳಿದುಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.