ಬೆಂಗಳೂರು : ಕೆಮಿಕಲ್ ಮಿಶ್ರಿತ ಆಹಾರ ನೀಡಿ ದುಷ್ಕರ್ಮಿಗಳು ಐವತ್ತಕ್ಕೂ ಹೆಚ್ಚು ಪಾರಿವಾಳಗಳನ್ನು ಕೊಂದಿದ್ದಾರೆ.
ನಗರದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಪಾರಿವಾಳಗಳು, ಕಾಳು ತಿಂದು ರಕ್ತ ಕಾರಿ ಒದ್ದಾಡಿ ಪ್ರಾಣ ಬಿಟ್ಟಿದ್ದಾವೆ. ಮುಂಜಾನೆ ವಾಯುವಿಹಾರಕ್ಕೆ ಬಂದ ಸ್ಥಳೀಯರು ಪಾರಿವಾಳಗಳ ಸ್ಥಿತಿ ಕಂಡು ಮರುಗಿದ್ದಾರೆ. ಪಕ್ಷಿಗಳನ್ನು ಒಂದೆಡೆ ಹಾಕಿ ನೀರು ಕುಡಿಸಿ ರಕ್ಷಿಸಲು ಪ್ರಯತ್ನ ಪಟ್ಟಿದ್ದಾರೆ. ಪ್ರಾಣಿದಯಾಸಂಘ, ಹಾಗೂ ಬಿಬಿಎಂಪಿಗೂ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.
ಯಾರೋ ಕಿಡಿಗೇಡಿಗಳು ಬೇಕೆಂದೇ ಕೆಮಿಕಲ್ ಮಿಶ್ರಿತ ಕಾಳುಗಳನ್ನ ಹಾಕಿ ಸಾಯಿಸಿದ್ದಾರೆ. ಪಕ್ಷಿಗಳಿಗೆ ಆಹಾರ ಹಾಕದಿದ್ರೂ ಪರವಾಗಿಲ್ಲ, ಈ ರೀತಿ ಪ್ರಾಣ ತೆಗೆಯಬಾರದು ಎಂದು ಸ್ಥಳದಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ವೈದ್ಯರಾಗಿರುವ ಡಾ.ಆನಂದ್ ಕೂಡಾ ಫೋನ್ ಸಂಪರ್ಕಕ್ಕೆ ಸಿಗದೆ ಇದ್ದದ್ದಕ್ಕೆ ಸಾರ್ವಜನಿಕರು ಅಸಮಾಧಾನ ಹೊರದಹಾಕಿದ್ದಾರೆ.