ETV Bharat / state

ಗೋಮಾಂಸ ರಫ್ತು ಕೈಬಿಟ್ಟ ನಂತರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ: ಸರ್ಕಾರಕ್ಕೆ ದೊರೆಸ್ವಾಮಿ ಪತ್ರ - ಸರ್ಕಾರಕ್ಕೆ ದೊರೆಸ್ವಾಮಿ ಪತ್ರ

ಸರ್ಕಾರವೇ ಗೋಮಾಂಸದ ರಫ್ತನ್ನು ಹೆಚ್ಚಿಸುತ್ತಿರುವಾಗ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಅವರಿಗೆ ಯಾವ ನೈತಿಕ ಹಕ್ಕಿದೆ. ಗೋಮಾಂಸ ರಫ್ತನ್ನು ಕೈಬಿಟ್ಟು ಆ ನಂತರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತನ್ನಿ ಎಂದು ಸರ್ಕಾರಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ ಪತ್ರ ಬರೆದಿದ್ದಾರೆ.

ಸರ್ಕಾರಕ್ಕೆ ದೊರೆಸ್ವಾಮಿ ಪತ್ರ
ಸರ್ಕಾರಕ್ಕೆ ದೊರೆಸ್ವಾಮಿ ಪತ್ರ
author img

By

Published : Feb 2, 2021, 7:30 PM IST

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ, ಜಾನುವಾರು ಹತ್ಯೆ ತಡೆ ಕಾಯ್ದೆ ವಿರುದ್ಧವಾಗಿ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ದೇಶದಲ್ಲಿ ದನದ ಮಾಂಸದ ರಫ್ತನ್ನು ನಿಷೇಧಿಸಲಿ. ಬಳಿಕ ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಿ ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವ ದೊರೆಸ್ವಾಮಿ, ಮೋದಿ ಸರ್ಕಾರವೇ ಗೋಮಾಂಸದ ರಫ್ತನ್ನು ಹೆಚ್ಚಿಸುತ್ತಿರುವಾಗ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಅವರಿಗೆ ಯಾವ ನೈತಿಕ ಹಕ್ಕಿದೆ. ಗೋಮಾಂಸ ರಫ್ತನ್ನು ಕೈಬಿಟ್ಟು ಆ ನಂತರ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತನ್ನಿ ಎಂದು ಪತ್ರ ಬರೆದಿದ್ದಾರೆ.

ಮೋದಿ ಸರ್ಕಾರ ಗೋಮಾಂಸ ರಫ್ತಿಗೆ ಪರವಾನಗಿ ನೀಡಿ 2020ರಲ್ಲಿ 14 ಲಕ್ಷ ಟನ್ ಗೋಮಾಂಸ ರಫ್ತು ಮಾಡಿದೆ. ವಿಶ್ವದಲ್ಲೇ ಭಾರತ ಗೋಮಾಂಸ ರಫ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ಹಿಂದಿನ ಸರ್ಕಾರಗಳಿಗಿಂತಲೂ ಮೋದಿ ಸರ್ಕಾರದಲ್ಲಿ ಗೋಮಾಂಸ ರಫ್ತು ಹೆಚ್ಚಾಗಿದೆ. ಗೋಮಾಂಸಕ್ಕೆ 13 ವರ್ಷ ಮೇಲ್ಪಟ್ಟ ಮೂಳೆಗಳಿಂದ ತುಂಬಿರುವ ಗೋವನ್ನು ಮಾತ್ರ ವಧೆ ಮಾಡಿ ಗೋಮಾಂಸ ರಫ್ತು ಮಾಡುತ್ತಿಲ್ಲ. ದಷ್ಟಪುಷ್ಟವಾದ ಹಸುಗಳನ್ನೇ ಕಸಾಯಿಖಾನೆಯಲ್ಲಿ ಕೊಂದು ರಫ್ತು ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೆ ಗೋ ಮಾಂಸ ರಫ್ತು ಮಾಡುತ್ತಿರುವವರಲ್ಲಿ ನಾಲ್ಕು ಸಂಸ್ಥೆ ಹಿಂದೂಗಳದ್ದು, ಇಬ್ಬರು ಮುಸ್ಲಿಮರ ಒಡೆತನದ್ದು ಎಂದೂ ಉಲ್ಲೇಖಿಸಿದ್ದಾರೆ.
ಯಂತ್ರಚಾಲಿತ ಕಸಾಯಿಖಾನೆ ವಿರುದ್ಧವಾಗಿ ಒಂದು ತಿಂಗಳ ಸತ್ಯಾಗ್ರಹದಲ್ಲಿ ತಾನೂ ಭಾಗಿಯಾಗಿದ್ದೆ. ಗೋವಿನ ಮುಖಕ್ಕೆ ಸುತ್ತಿಗೆಯಲ್ಲಿ ಹೊಡೆದು ಅದರ ಪ್ರಜ್ಞೆ ತಪ್ಪಿಸಿ ಯಂತ್ರದೊಳಗೆ ನೂಕುವ ಘೋರ ಕೃತ್ಯ ಕಂಡು ಕಣ್ಣೀರು ಹಾಕಿದ್ದೇನೆ. ಈ ಘೋರ ಕೃತ್ಯ ಬೆಂಬಲಿಸಿ ರಫ್ತಿಗೆ ಪರವಾನಗಿ ನೀಡಿರುವ ಪಾಪ ಕೃತ್ಯದಲ್ಲಿ ಭಾಗಿಯಾದ ಮೋದಿ, ಶಾಗೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವ ನೈತಿಕ ಹಕ್ಕು ಇದೆಯೇ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.