ಬೆಂಗಳೂರು: ಎಚ್.ಎಸ್. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರಲ್ಲ ಅಂದ್ರೆ ಮತ್ಯಾಕೆ ಪಿಂಚಣಿ ಕೊಡ್ತಿದ್ದೀರಿ? ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಯಾಕೆ ಅವರನ್ನು ಕ್ರಿಮಿನಲ್ ರೀತಿ ನಡೆಸಿಕೊಳ್ತಿದ್ದೀರಿ. ಯಾರಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಗೌರವ ಕೊಡಬೇಕು. ನನಗೂ 59 ವರ್ಷ ಆಯ್ತು ಈಗ, ಕೆಲವು ಮೆಂಟಲ್ ಕೇಸ್ಗಳು ಏನೇನೋ ಮಾತಾಡ್ತಾರೆ. ಮಾತಾಡಲಿ ಬಿಡಿ. ಮಾತಾಡಿದವರ ವಿರುದ್ಧ ಮೂರ್ನಾಲ್ಕು ಕೋಟಿ ಕೇಸ್ ಹಾಕಿದ್ದೀನಿ. ನೋಡ್ರಿ ರಾಜಕಾರಣದಲ್ಲಿ ಹೀರೋಗಳೆಲ್ಲ ಝಿರೋ ಆಗ್ತಾರೆ, ಝಿರೋಗಳೆಲ್ಲ ಹೀರೋ ಆಗ್ತಾರೆ ಎಂದರು.
ಇಲ್ಲಿ ಯತ್ನಾಳ್ ಒಬ್ಬರ ವಿಚಾರವಲ್ಲ, ಇಡೀ ಬಿಜೆಪಿ ನಾಯಕರು ಯತ್ನಾಳ್ಗೆ ಸಾಥ್ ಕೊಡ್ತಿದ್ದಾರೆ. ಅವರಿಗೆ ಸ್ವಲ್ಪ ಸ್ವಾತಂತ್ರ್ಯದ ಇತಿಹಾಸ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟವನ್ನು ಅವರ ಪಕ್ಷ ಮಾಡಿಲ್ಲ. ಜನಸಂಘ ಇದ್ದಾಗ ಬೇರೆ ಇತ್ತು. ಈಗ ಹೊಸದಾಗಿ ಮಲ್ಟಿ ಪಾರ್ಟಿ ಲೀಡರ್ಗಳು ಒಂದೊಂದು ಘಂಟೆಗೆ ಒಂದೊಂದು ಪಾರ್ಟಿಗೆ ಹೋಗಿ ಒಂದೊಂದು ಮಾತನಾಡ್ತಾರೆ. ದೊರೆಸ್ವಾಮಿ ಹಿಂದೆ ನನ್ನ ವಿರುದ್ಧ ಕೂಡ ಮಾತನಾಡಿದ್ದರು, ಮಂತ್ರಿ ಸ್ಥಾನ ಕೊಡಬೇಡಿ ಅಂತ ಪತ್ರ ಬರೆದಿದ್ದರು.
ನಮ್ಮನ್ನು ಹೊಗಳುವವರನ್ನು ಮಾತ್ರ ಒಳ್ಳೆಯವರು ಅನ್ನೋಕಾಗುತ್ತಾ. ದೊರೆಸ್ವಾಮಿ ತರದವರು ಹೋರಾಟ ಮಾಡಿದ್ದಕ್ಕೆ ತಾನೇ ನಾವೆಲ್ಲ ಎಂಎಲ್ಎಗಳಾಗಿದ್ದು. ಇಷ್ಟು ಬೇಸಿಕ್ ನಾಲೆಜ್ಡ್ ಬಿಜೆಪಿಯವರಿಗೆ ಇಲ್ವೇನ್ರಿ..? ಎಂದು ಪ್ರಶ್ನಿಸಿದ್ದಾರೆ.