ETV Bharat / state

ಅನ್ನಭಾಗ್ಯ ಯೋಜನೆ ನಿಲ್ಲಿಸದಂತೆ ಸರ್ಕಾರಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಆಗ್ರಹ - ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡನೆ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸದಂತೆ ಮಾಜಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ. ಇದೇ ವೇಳೆ ಬೀದರ್​ನ ಶಾಹಿನ್​ ಶಿಕ್ಷಣ ಸಂಸ್ಥೆ ವಿರುದ್ಧ ದೇಶದ್ರೋಹದ ಕೇಸ್​ ಹಾಕಿರುವುದಕ್ಕೆ ಖಾದರ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

UT Khadr's demand
ಯು.ಟಿ. ಖಾದರ್ ಆಗ್ರಹ
author img

By

Published : Feb 4, 2020, 4:07 PM IST

Intro:newsBody:ಅನ್ನ ದಾಸೋಹ ನಿಲ್ಲಿಸಬೇಡಿ, ಮುಂದುವರಿಸಿ: ಖಾದರ್



ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆರಂಭಿಸಿದ್ದ ದಾಸೋಹ ಕಾರ್ಯಕ್ರಮವನ್ನು ಈಗಿನ ಬಿಜೆಪಿ ಸರ್ಕಾರ ನಿಲ್ಲಿಸಿದ್ದು, ಕೂಡಲೇ ಇದನ್ನು ಆರಂಭಿಸಿ ಮುಂದುವರಿಸಿಕೊಂಡು ಹೋಗಬೇಕೆಂದು ಮಾಜಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿ,
ಅನ್ನ ದಾಸೋಹ ಯೋಜನೆಯಡಿ 7 ಕೆ.ಜಿ. ಅಕ್ಕಿ ನೀಡುವ ಕಾರ್ಯ ಆಗುತ್ತಿತ್ತು. ಆದರೆ ಅದನ್ನು 5 ಕೆಜಿಗೆ ಇಳಿಸುವ ಕಾರ್ಯ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಕಾರ್ಯ ಆಗಬಾರದು. ಕೂಡಲೇ ಸರ್ಕಾರ ದಾಸೋಹ ಯೋಜನೆ ಮರು ಆರಂಭಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸುತ್ತೇವೆ. ನಮ್ಮ ಸರ್ಕಾರ ತಂದಿದ್ದ ಮಹತ್ವಾಕಾಂಕ್ಷಿ ಯೋಜನೆ ಇದಾಗಿತ್ತು. ಆರು ತಿಂಗಳಿಗೊಮ್ಮೆ ಹಂಚಿಕೆ ಮಾಡುತ್ತಿದ್ದೆವು. 454 ಸಂಸ್ಥೆಗಳು ಇದರ ಪ್ರಯೋಜನ ಪಡೆಯುತ್ತಿದ್ದವು. 10 ಕೆ.ಜಿ.ಅಕ್ಕಿ,5 ಕೆ.ಜಿ.ಗೋಧಿ ನೀಡುತ್ತಿದ್ದೆವು. ಇದರ ಉಪಯೋಗ ಅನಾಥಾಶ್ರಮ, ವೃದ್ಧಾಶ್ರಮ ಪಡೆಯುತ್ತಿದ್ದವು. ಆದರೆ ಈಗ ರಾಜ್ಯ ಸರ್ಕಾರ ಇದನ್ನ ರದ್ಧುಪಡಿಸಿದೆ. ಇದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಬೇಕು. ಆದರೆ ರದ್ದು ಪಡಿಸೋಕೆ ಹೊರಟಿದ್ದೇ ಅನ್ಯಾಯ ಮಾಡಿದಂತೆ ಎಂದರು.
ಬಿಜೆಪಿ ನಿಲುವು ತಿಳಿಸಲಿ
ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಮಾತನಾಡಿ, ವಿಶ್ವದಲ್ಲೇ ಭಾರತಕ್ಕೆ ಹೆಸರು ತಂದವರು ಮಹಾತ್ಮ ಗಾಂಧಿಯವರು. ದೇಶಕ್ಕೆ ಆತಂಕ ಎದುರಾದಾಗ ಅಹಿಂಸೆ ಮೂಲಕ ಹೋರಾಡಿದವರು. ಅಹಿಂಸಾ ಮಾರ್ಗ ವಿಶ್ವಕ್ಕೆ ಮಾದರಿಯಾಗಿದೆ. ಹೀಗಿರುವಾಗ ಸತತವಾಗಿ ಅನಂತ್ಕುಮಾರ್ ಬಾಯಲ್ಲಿ ಗಾಂಧಿ ವಿರುದ್ಧ ಮಾತು ಬರುತ್ತಿದೆ. ಅವಹೇಳನ ಮಾಡುತ್ತಿದ್ದಾರೆ. ಬಿಜೆಪಿಯವರು ಇಂತವರ ವಿರುದ್ಧ ಯಾಕೆ ಪ್ರಕರಣ ದಾಖಲಿಸಲ್ಲ. ಜನರ ಮಧ್ಯೆ ತಮ್ಮ ಇಮೇಜ್ ತೋರಿಸಿಕೊಳ್ಳಲು ಗಾಂಧೀಜಿ ಹಾಗೂ ಅವರ ಸ್ವಚ್ಛತೆಯ ಪಾಠ ಬಳಸಿಕೊಳ್ಳುತ್ತದೆ. ಆದರೆ ಹಿಂದೆ ಬಿಟ್ಟು ಅವರ ಅವಹೇಳನ ಮಾಡುತ್ತಿದೆ. ಇದರಿಂದ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಆರೋಪ ಸಲ್ಲ
ಬೀದರ್ ಶಾಹೀನ್ ಕಾಲೇಜ್ ಮೇಲೆ ದೇಶದ್ರೋಹ ಆರೋಪ ಕುರಿತು ಮಾತನಾಡಿ, ಬಿಜೆಪಿ ಕಾರ್ಯದರ್ಶಿ ಹೇಳಿದ ಅಂತ ಇಂತ ಕೆಲಸ ಸರಿಯಲ್ಲ. ಪೊಲೀಸರು ದೇಶದ್ರೋಹ ಕೇಸ್ ಹಾಕಿದ್ದು ಸರಿಯಲ್ಲ. ಮಕ್ಕಳನ್ನ, ಶಿಕ್ಷಕರನ್ನ ವಿಚಾರಣೆಗೆ ಗುರಿಪಡಿಸಿದ್ದು ಸರಿಯಲ್ಲ. ತಪ್ಪು ಮಾಡಿದ್ದರೆ ಬೇಕಿದ್ದರೆ ಕ್ರಮತೆಗೆದುಕೊಳ್ಳಲಿ. ಇಲ್ಲವೇ ಕೇಸ್ ದಾಖಲಿಸಿದ ಪೊಲೀಸರ ಮೇಲೆ ಕ್ರಮವಾಗಬೇಕು. ರಾಜಕೀಯ ಒತ್ತಡಕ್ಕೆ ಅಧಿಕಾರಿಗಳು ಮಣಿಯಬಾರದು. ಒತ್ತಡಕ್ಕೆ ಮಣಿದು ಈ ರೀತಿ ಮಾಡಿದರೆ ಅದು ತಪ್ಪು. ಸಮಾಜಕ್ಕೆ ಮಾರಕಾಗುವ ನಿರ್ಧಾರ ಮಾಡಬಾರದು. ಒತ್ತಡಕ್ಕೆ ಅಧಿಕಾರಿಗಳು ಬಗ್ಗಬಾರದು. ಬಗ್ಗಿದಿದ್ದರೆ ಏನಾಗುತ್ತದೆ ವರ್ಗಾವಣೆ ಮಾಡಬಹುದು. ವರ್ಗಾವಣೆಗೆ ಮಣಿದು ತಪ್ಪೆಸಗಬಾರದು. ಮುಂದೆ ಇದೇ ನಿಮಗೆ ಮುಳುವಾಗಲಿದೆ ಎಂದರು.
ಆದಿತ್ಯರಾವ್ ಕೇಸ್ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಮಂಗಳೂರು ಬಾಂಬ್ ಇಟ್ಟ ಪ್ರಕರಣದ ರೂವಾರಿ ಆಗಿರುವ ರಾವ್ ಈಗ ಮಾನಸಿಕ ಅಸ್ವಸ್ಥನೆಂದು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯವರ ಮೇಲೆ ನಂಬಿಕೆಯೇ ಇಲ್ಲ. ಬಾಂಬ್ ಇಟ್ಟವರಿಗೆ ಸ್ಥಾನಮಾನ ಕೊಡುವ ಕೆಲಸ ನಡೆಯುತ್ತಿದೆ. ಬಿಜೆಪಿಯಿಂದ ಸ್ಥಾನಮಾನ ಸಿಗುತ್ತಿದೆ. ಶಾಸಕರ ಭವನಕ್ಕೆ ಬಾಂಬಿಟ್ಟವರಿಗೆ ಅಧ್ಯಕ್ಷ ಸ್ಥಾನ ಕೊಡ್ತಾರೆ. ಪ್ರಜ್ಞಾ ಸಿಂಗ್ ಬಗ್ಗೆಯೂ ಮೃಧು ಧೋರಣೆ ತಾಳ್ತಾರೆ ಎಂದು ಬೇಸರ ಹೊರಹಾಕಿದರು.
ಜನರು, ಬಡವರು ಹಾಗೂ ಹಿಂದುಳಿದವರಿಗೆ ಬಿಜೆಪಿ ನೀಡಿದ ಸೌಲಭ್ಯವೇನು. ನಾವು ತಂದ ಯೋಜನೆ ನಿಲ್ಲಿಸುತ್ತಿದೆ.



Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.