ETV Bharat / state

ಇದು ಬಜೆಟ್ಟೋ ಅಥವಾ ಲದ್ದಿ ಪೇಪರ್ರೋ ಗೊತ್ತಿಲ್ಲ: ಹೆಚ್​ಡಿಕೆ - Don't know it's a budget

ಇದು ಬಜೆಟ್ಟೋ ಅಥವಾ ಲದ್ದಿ ಪೇಪರ್ರೋ ಗೊತ್ತಿಲ್ಲ. ಈ ರೀತಿ ಪದ ಬಳಕೆ ಮಾಡ್ತಿದ್ದೇನೆ ಅಂತ ತಪ್ಪು ತಿಳಿಯಬೇಡಿ. ಮಹಿಳೆಯರಿಗೆ ಭರಪೂರ ಕೊಡುಗೆ ಏನು, ಶಿಕ್ಷಣಕ್ಕೆ ಏನು ಮಾಡಿದ್ದೀರಿ, ಜನತೆಯ ತೆರಿಗೆ ಹಣ ಕೆಟ್ಟ ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಹೆಚ್​ಡಿಕೆ
ಹೆಚ್​ಡಿಕೆ
author img

By

Published : Mar 15, 2021, 5:22 PM IST

ಬೆಂಗಳೂರು: ರಾಜ್ಯ ಬಜೆಟ್​ನಲ್ಲಿ ಸತ್ವವಿಲ್ಲ. ಅದಕ್ಕಾಗಿ ವಿಧಾನಸಭೆ ಕಲಾಪದಲ್ಲಿ‌ ಭಾಗಿಯಾಗುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಸಭೆ ನಂತರ ಮಾತನಾಡಿ, ಇದು ಬಜೆಟ್ಟೋ ಅಥವಾ ಲದ್ದಿ ಪೇಪರ್ರೋ ಗೊತ್ತಿಲ್ಲ. ಈ ರೀತಿ ಪದ ಬಳಕೆ ಮಾಡ್ತಿದ್ದೇನೆ ಅಂತ ತಪ್ಪು ತಿಳಿಯಬೇಡಿ. ಮಹಿಳೆಯರಿಗೆ ಬರಪೂರ ಕೊಡುಗೆ ಏನು, ಶಿಕ್ಷಣಕ್ಕೆ ಏನು ಮಾಡಿದ್ದೀರಿ, ಜನತೆಯ ತೆರಿಗೆ ಹಣ ಕೆಟ್ಟ ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆ ಎಂದರು.

ಇಂದು ಜೆಡಿಎಲ್‌ಪಿ ಸಭೆ ಕರೆಯಲಾಗಿತ್ತು. 2019-20 ಹಾಗೂ 20-21 ಸಾಲಿನಲ್ಲಿ ಸದನದ ಒಪ್ಪಿಗೆ ಪಡೆದು ಆರ್ಥಿಕ ಇಲಾಖೆಯಿಂದ ಹಣದ ಹಂಚಿಕೆ ಮಾಡಲಾಗಿತ್ತು. ಅವು ಟೆಂಡರ್ ಪ್ರೋಸೆಸ್ ಆಗಿದ್ರೂ ನಿಲ್ಲಿಸಲಾಗಿದೆ. ಆಗ ಕೊಟ್ಟ ಹಣ ವರ್ಗಾಯಿಸಲಾಗಿದೆ. 19-20ನೇ ಸಾಲಿನಲ್ಲಿ ರೈತರ ಸಾಲ ಮನ್ನ ಮಾಡಲು ಮೀಸಲಿಟ್ಟಿದ್ದು ಸದನದಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಾಗ ನೆರೆಗೆ ಬಳಸಿಕೊಳ್ಳೋದಾಗಿ ಹೇಳಿದ್ರು. ಆದ್ರೆ ಆ ಹಣ ಬಳಸಿಕೊಂಡ ಯಾವುದೇ ಮಾಹಿತಿ ಸದನದಲ್ಲಿ ಇಟ್ಟಿಲ್ಲ. ನಾಳೆ‌ 69ಕ್ಕೆ ಪರಿವರ್ತನೆ ಮಾಡಿರೋದಾಗಿ ಹೇಳಿದ್ದಾರೆ.

ಬಜೆಟ್ ವೇಳೆ ಯಡಿಯೂರಪ್ಪ ಭಾಷಣ ನೋಡಿದ್ದೇನೆ. ಐದು ಲಕ್ಷ ಹಣ ನೀಡಿರೋದಾಗಿ ಹೇಳಿದ್ದಾರೆ. ಕಂದಾಯ ಸಚಿವರು ಹೇಳ್ತಾರೆ ಹಂತ ಹಂತವಾಗಿ ಹಣ ನೀಡ್ತಿರೋದಾಗಿ. ಮಾಧ್ಯಮದಲ್ಲಿ ಮುರುಕುಲು ಮನೆ ತೋರಿಸಿದ್ದಾರೆ. ಬಜೆಟ್‌ನಲ್ಲಿ ಚರ್ಚೆ ಮಾಡುವಾಗ ಯಾವುದಕ್ಕೂ ಉತ್ತರ ಕೊಡ್ತಿಲ್ಲ. ಶಾಸ್ತ್ರಕ್ಕೆ ಉತ್ತರ ಕೊಟ್ಟು ಹೋಗ್ತಿದ್ದಾರೆ ಎಂದರು.

ಇಂದು ಮಧ್ಯಾಹ್ನ ಈ ಬಗ್ಗೆ ಚರ್ಚೆ ಮಾಡ್ತೀವಿ. ಇದೇ ರೀತಿ ಆದ್ರೆ ಹಣ ಕಾಸು ಪರಿಸ್ಥಿತಿ ದಯನೀಯ ಸ್ಥಿತಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಹತ್ತುಸಾವಿರ ವೆಚ್ಚ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆಯೋ ಕೆಲಸ ಮಾಡ್ತೀವಿ. ಇವತ್ತಿನವರೆಗೂ ಅಭಿವೃದ್ಧಿಗೆ ಈ ಸರ್ಕಾರ ಹಣ ನೀಡ್ತಿಲ್ಲ. ಇದು ಪಕ್ಷದ ಹಣ ಅಲ್ಲ. ರಾಜ್ಯದ ಜನತೆಯ ತೆರಿಗೆ ಹಣ. ಸದನದಲ್ಲಿ ಯಾವ ಬಜೆಟ್ ಅಪ್ರೂವಲ್ ಆಗಿದೆ. ಕ್ಯಾಬಿನೆಟ್ ನಲ್ಲಿ ಬೇಕಾದ ಕಾರ್ಯಕ್ರಮಕ್ಕೆ ಹಣ ನೀಡೋ ಟ್ರೆಂಡ್ ಮಾಡಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲಿ ಅಧಿಕಾರ ಮೊಟಕುಗೊಳಿಸೋ ಕೆಲಸ ಮಾಡ್ತಿದ್ದಾರೆ ಎಂದರು.

ಇರುವ ವಾಸ್ತವ ವಿಚಾರ ಚರ್ಚೆ ಮಾಡ್ತೀನಿ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದೆ. ಕಾಂಗ್ರೆಸ್ ಧರಣಿ ಮಾಡಿದ್ದಾರೆ. ಜನ ವಾಹನ ಓಡಿಸೋದು ನಿಲ್ಲಿಸಿದ್ದಾರೆ. ಕಟ್ಟಿಗೆ ಉರಿಸೋದು ಬೇಡ ಅಂತ ಹೇಳಿ ಉಜ್ವಲ ಯೋಜನೆ ತಂದ್ರು. ರಾಜ್ಯದ ಜನತೆ ಇವರ ನಡವಳಿಕೆ ಬಗ್ಗೆ ಅರ್ಥ ಮಾಡಿಕೊಳ್ಳಲಿ. ನನ್ನದು ಕೆಟ್ಟ ಅಧಿಕಾರ ಅಂತ ಕೆಳಗಿಳಿಸಿದ್ರು. ಕೊಡಗಿನಲ್ಲಿ ಒಂಬತ್ತು ಲಕ್ಷದಂತೆ ಸಾವಿರ ಮನೆ ಕಟ್ಟಿಕೊಟ್ಟೆ. ಯಾರೂ ನನ್ನ ನೆನಸಿಕೊಳ್ಳಲಿಲ್ಲ, ನನ್ನ ಹೆಸರೂ ಹೇಳಲಿಲ್ಲ. ಮುಂದಿನ ವರ್ಷ ಮಳೆ ಬಂದಾಗ ಅದೇ ಪರಿಸ್ಥಿತಿ ಬರಲಿದೆ. ಹೀಗಾಗಿ ವೈಜ್ಞಾನಿಕ ಅಧ್ಯಯನ ಮಾಡಿ ಮನೆ ಕಟ್ಟಿಕೊಡಬಹುದಿತ್ತು. 25 ಸಾವಿರ ಕೋಟಿ ರೂ. ರೈತ ಸಾಲ ಮನ್ನ ಮಾಡಿದೆ. ಆಗ ನಾನು ಕೊಟ್ಟ ಹಣ ಡೈವರ್ಟ್ ಮಾಡಿದ್ದು, ಈಗ ಹಂಚಿಕೆ ಮಾಡಿರೋದಾಗಿ ಸೋಮಶೇಖರ್ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದೆವು. ಬಳಿಕ ಸೆಸ್ ಕಡಿಮೆ ಮಾಡಲಾಯ್ತು. ಜಾಸ್ತಿ ಮಾಡಿದ್ದು ಹೇಳಿದ್ರು, ಕಡಿಮೆ ಮಾಡಿದ್ದು ಯಾರೂ ಹೇಳಲಿಲ್ಲ. ಇಸ್ರೇಲ್ ಮಾದರಿಯ ಕೃಷಿ ಯೋಜನೆಗೆ ಹಣ ಇಟ್ಟಿದ್ದೆ. ಅದನ್ನೂ ಬೇರೆಯದಕ್ಕೆ ಬಳಸಿಕೊಂಡ್ರು, ಆ ಯೋಜನೆ ಈವರೆಗೂ ಆರಂಭ ಆಗಲೇ ಇಲ್ಲ ಎಂದರು.

2006ರಲ್ಲಿ ನನ್ನದೂ ಸಿಡಿ ಮಾಡಿದ್ರು. 150 ಕೋಟಿ‌ ಹಗರಣ ಅಂತ ಆರೋಪ ಮಾಡಿದ್ರು. ಆಪರೇಷನ್ ಕಮಲ ಅಂತ ಹೇಳಿದ್ರು. ಸಿಡಿ ಮಾಡೋ ಎಕ್ಸ್‌ಪರ್ಟ್ ಇದಾರೆ. ಅಸಲಿ, ನಖಲಿ ಎಲ್ಲವೂ ಮಾಡ್ತಾರೆ. 2008-13 ರ ಅವಧಿಯಲ್ಲಿ ಅನೇಕ ಆರೋಪ ಮಾಡಿದ್ರು. ನಾನು ದಾಖಲೆ ಸಹಿತ ನೀಡಿದೆ. ಆದ್ರೆ ಯಡಿಯೂರಪ್ಪ ಹೇಳಿದ್ದನ್ನು ನೋಡಿದೆ. ನನ್ನ ಮೇಲೆ ಎಷ್ಟೇ ಆರೋಪ ಬಂದ್ರು ಸಹಿಸಿಕೋಳ್ತೇನೆ ಅಂದ್ರು. ದೇಶದಲ್ಲಿ ಅನುಕೂಲ ಆಗ್ತಿರೋದು ಕಾರ್ಪೊರೇಟ್ ಕಂಪನಿಗೆ, ಉಳ್ಳವರಿಗೆ ಅಂತ. ಹುಡುಕಿಸಿ, ಹುಡುಕಿಸಿ ನನ್ನ ಮೇಲೆ ನಾಲ್ಕು ಪ್ರಕರಣ ದಾಖಲಿಸಿದ್ರು ಎಂದರು.

ಕೋವಿಡ್19 ಹೆಚ್ಚಳ ವಿಚಾರ ಮಾತನಾಡಿ, ಲಾಕ್​ಡೌನ್ ಮಾಡೋದು ಸೂಕ್ತ. ಕರ್ನಾಟಕದಲ್ಲಿ ಸಾವಿರ ಹತ್ತಿರಕ್ಕೆ ಹೋಗ್ತಿದೆ. ನನ್ನನ್ನೂ ಸೇರಿದಂತೆ ಯಾರೂ ಮಾಸ್ಕ್ ಹಾಕುತ್ತಿಲ್ಲ. ದೇವರ ಮೇಲೆ ಭಾರ ಹಾಕಿ ಓಡಾಡ್ತಿದ್ದೇನೆ. ಸೋಂಕು ಸಂಪೂರ್ಣ ಹೋಗಬೇಕು. ಜನ ಜಾಗೃತರಾಗಿರಬೇಕು ಅಷ್ಟೇ ಎಂದರು.

ಉಪಚುನಾವಣೆ ವಿಚಾರದಲ್ಲಿ ನಾನು ಅಬ್ಬರಕ್ಕೆ ಹೋಗಿಲ್ಲ. ಉಪಚುನಾವಣೆಯಲ್ಲಿ ಸೋಲು,ಗೆಲುವು ನೋಡಿದ್ದೇವೆ. ಈ ಉಪಚುನಾವಣೆಯಲ್ಲಿ ಬೆಳಗಾವಿ ಪಾರ್ಲಿಮೆಂಟ್ ಅವರದ್ದು. ಹಾಗಂತ ನಾವು ಸುಮ್ಮನೆ ಕೂರಲ್ಲ. ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕ್ತೇವೆ. ಕಾಂಗ್ರೆಸ್ ನವರಿಗೆ ಅದೇನು ಧರಿದ್ರ ಬಂದಿದೆಯೋ ಗೊತ್ತಿಲ್ಲ. ಈಗಲೂ ಯಾರಿದ್ದೀರಿ ಬನ್ನಿ ಅಂತ ಮನೆ ಬಾಗಿಲು ತಟ್ತಿದ್ದಾರೆ. ನಮ್ಮಲ್ಲಿರೋ ಧರಿದ್ರ ಹೋಗಿವೆ. ಸಿದ್ದರಾಮಯ್ಯ ಈಗಲೂ ಹೇಳ್ತಾರೆ. ನಾವಿದ್ದಾಗ ಎಷ್ಟು ಗೆದ್ದೋ ಅಂತ. ಆಗ ಯಾರೆಲ್ಲ ಇದ್ರೂ ಅಂತ ಲೆಕ್ಕ ಹಾಕಬೇಕು. ಅವರು ಅಧ್ಯಕ್ಷರಿದ್ದಾಗ ಎಷ್ಟು ಗೆದ್ದಿದ್ರು ಗೊತ್ತಿದೆ. ನಮ್ಮಲ್ಲಿ ದೊಡ್ಡ ಮಹಾನ್ ನಾಯಕರಿಲ್ಲ. ಸಾಮಾನ್ಯ ನಾಯಕರಿದ್ದಾರೆ ಅಷ್ಟೇ. ಈಗಲೂ ನಮ್ಮ‌ಪಕ್ಷದ ಬಗ್ಗೆ ಕೆಲವರು ಮಾತನಾಡ್ತಾರೆ. ನನ್ನ ಬಳಿ ಶಕುನಿಯೂ ಇಲ್ಲ, ಮಂತ್ರಿಯೂ ಇಲ್ಲ. ನಾನು ಎಲ್ಲವನ್ನೂ ನೋಡಿ ಬಿಟ್ಟಿದ್ದೇನೆ ಎಂದು ಹೇಳಿದರು.

ಜಿಟಿ ದೇವೇಗೌಡ ಅವರಿಂದ ಕುಮಾರಸ್ವಾಮಿ ಮೇಲೆ ಆರೋಪ ವಿಚಾರ ಮಾತನಾಡಿ, ನಾನು ಯಾರ ವಿರುದ್ದವೂ ಕೆಲಸ ಮಾಡ್ತಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ಕೆಲಸ ಮಾಡಲು ಹೋಗಿದ್ದೇನೆ. ಆಲದ ಮರ ಬಲಾಢ್ಯವಾಗಿ ಬೆಳೆಯುತ್ತದೆ. ಅದು ಕೆಳಗಿರೋ ಗಿಡಗಳನ್ನ ಬೆಳೆಯಲು ಬಿಡೋದಿಲ್ಲ. ಹೀಗೆ ಅವರು ಆಲದ ಮರ. ನಮ್ಮ‌ಕಾರ್ಯಕರ್ತರನ್ನ ಉಳಿಸಿಕೊಳ್ಳಲು ನಾನು ಮೈಸೂರಿಗೆ ಹೋಗಿದ್ದೆ ಎಂದರು.

ಇದನ್ನೂ ಓದಿ.. ದೀದಿಗೆ ಶಾಕ್ ಮೇಲೆ ಶಾಕ್​: ಟಿಎಂಸಿ ಪಕ್ಷಕ್ಕೆ ಮತ್ತೋರ್ವ ನಾಯಕಿ ರಾಜೀನಾಮೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.