ETV Bharat / state

ಜಾತ್ರೆಯಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ಬೇಡ: ವಿಹಿಂಪ, ಬಜರಂಗದಳ ಮನವಿ

ಒಂದು ವೇಳೆ ಅನುಮತಿ ನೀಡಿದ್ದೇ ಆದರೆ ಬಜರಂಗದಳ, ಹಿಂದೂಪರ ಸಂಘಟನೆಗಳು ಸ್ಥಳಕ್ಕೆ ಹೋಗಿ ಅಂಗಡಿಗಳನ್ನು ತೆರವು ಮಾಡುತ್ತದೆ ಎಂದು ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

vhp bajrang dal appeal
ವಿಹಿಂಪ, ಭಜರಂಗದಳ ಮನವಿ
author img

By

Published : Nov 26, 2022, 4:15 PM IST

Updated : Nov 26, 2022, 5:02 PM IST

ಬೆಂಗಳೂರು: ಮುಂಬರುವ ಜಾತ್ರೆಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಬಿಬಿಎಂಪಿ, ಪೊಲೀಸ್ ಇಲಾಖೆಯೇ ಕಾರಣ ಎಂದು ಬಜರಂಗದಳ ಸಂಘಟನೆ ಎಚ್ಚರಿಕೆ ನೀಡಿದೆ.

ನ. 29ರಂದು ವಿವಿ ಪುರಂನ ಸುಬ್ರಹ್ಮಣ್ಯ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಅಂದು ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಸುಬ್ರಹ್ಮಣ್ಯ ಸ್ವಾಮಿ ಬೆಳ್ಳಿ ತೇರಿನ ವೇಳೆ ಹಿಂದೂಗಳನ್ನು ಬಿಟ್ಟು ಬೇರೆ ಧರ್ಮದ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡರಾದ ತೇಜಸ್ ಗೌಡ ಮತ್ತು ಶಿವು, ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮತ್ತು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬಜರಂಗದಳದ ಮುಖಂಡ ತೇಜಸ್ ಗೌಡ

ಈ ಮಂಗಳವಾರ ಷಷ್ಠಿ ಇರುವ ಹಿನ್ನೆಲೆ ಎಲ್ಲ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಸಜ್ಜನ್ ರಾವ್ ಸರ್ಕಲ್​ನಲ್ಲಿರುವ ಸುಬ್ರಹ್ಮಣ್ಯ ರಥೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಅನ್ಯಮತೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಬಜರಂಗದಳದ ಮುಖಂಡ ತೇಜಸ್ ಗೌಡ ಕೇಳಿಕೊಂಡಿದ್ದಾರೆ.

ಹಿಂದೂ ಸಂಘಟನೆಗಳಿಂದ ಅಂಗಡಿಗಳ ತೆರವು: ಸೌತ್ ಡಿಸಿಪಿ, ಬಿಬಿಎಂಪಿ ಆಯುಕ್ತರಿ​ಗೆ ಮನವಿ ಮಾಡಿದ್ದೇವೆ. ಒಂದು ವೇಳೆ ಅನುಮತಿ ನೀಡಿದ್ದೆ ಆದರೆ. ಭಜರಂಗದಳ, ಹಿಂದೂಪರ ಸಂಘಟನೆಗಳು ಸ್ಥಳಕ್ಕೆ ಹೋಗಿ ಅಂಗಡಿಗಳನ್ನು ತೆರವು ಮಾಡುತ್ತದೆ. ಈ ವೇಳೆ, ಏನಾದರೂ ಹೆಚ್ಚು ಕಡಿಮೆಯಾದರೆ, ಇದಕ್ಕೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ನೇರ ಹೊಣೆ ಎಂದಿದ್ದಾರೆ.

ಮೂರ್ತಿ ಪೂಜೆ ಒಪ್ಪದ ಮುಸ್ಲಿಮರು: ಅನ್ಯಧರ್ಮೀಯರು ಲವ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆಗೆ ಬೆಂಬಲ ನೀಡುತ್ತಾರೆ. ನಮ್ಮ ಮೂರ್ತಿ ಪೂಜೆಯನ್ನು ಮುಸ್ಲಿಮರು ಒಪ್ಪುವುದಿಲ್ಲ. ಹಾಗಾಗಿ ನಾವು ಯಾಕೆ ನಮ್ಮ ಹಬ್ಬದಲ್ಲಿ ಅವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬೇಕು. ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಡಬಾರದು. ನಮ್ಮ ವ್ಯಾಪಾರ ಏನಿದ್ದರೂ ಹಿಂದೂಗಳಿಂದ, ಹಿಂದೂಗಳಿಗೋಸ್ಕರ ಎಂದು ತೇಜಸ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದತ್ತಿ ಇಲಾಖೆಗೆ ಸೇರಿದ ದೇಗುಲಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ಬೇಡ- ವಿಹಿಂಪ

Last Updated : Nov 26, 2022, 5:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.