ETV Bharat / state

ಮನೆಗೆಲಸದವರ ಗೋಳು ಕೇಳುವವರಿಲ್ಲ... ಬದುಕೇ ನರಕ ..!

ಲಾಕ್​​ಡೌನ್ ಆರಂಭದಲ್ಲಿ ಎಲ್ಲಿಯೂ ಮನೆಗೆಲಸ ಮಾಡುವವರಿಗೆ ಕೆಲಸ ಸಿಕ್ಕಿರಲಿಲ್ಲ. ಆದರೆ ಇತ್ತೀಚೆಗೆ ಮನೆಗೆಲಸದವರಿಂದ ಕೊರೊನಾ ಹಬ್ಬಿದ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕರೆಯುತ್ತಿದ್ದ ಕೆಲವರು ಕೂಡ ಕರೆಯುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಹಾಗಾಗಿ ಇವರ ಬದುಕು ತುಂಬಾ ಸಂಕಷ್ಟದಲ್ಲಿದೆ.

ಮನೆಗೆಲಸದವರು
ಮನೆಗೆಲಸದವರು
author img

By

Published : Jul 9, 2020, 11:22 PM IST

Updated : Jul 10, 2020, 6:48 PM IST

ಬೆಂಗಳೂರು: ಕೋವಿಡ್-19 ಆತಂಕ ಎಲ್ಲೆಡೆ ಮನೆ ಮಾಡಿರುವ ಸಂದರ್ಭದಲ್ಲಿ ಮನೆಗೆಲಸದವರ ಪಾಡಂತು ಹೇಳತೀರದಾಗಿದೆ. ಕೆಲಸಕ್ಕೆ ಕರೆಯುವವರಿಲ್ಲ, ಕರೆದಲ್ಲಿಗೆ ಹೋಗಲು ಅಂಜಿಕೆ. ತುತ್ತಿನಚೀಲ ತುಂಬಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಲಾಕ್​ಡೌನ್​ನಿಂದಾಗಿ ಮಾರ್ಚ್ ತಿಂಗಳ 24 ರಿಂದ ಜೂನ್ ತಿಂಗಳ ಆರಂಭದವರೆಗೂ ಮನೆಗೆಲಸದವರಿಗೆ ಮನೆಯಿಂದ ಸರಿಯಾಗಿ ಹೊರಬರಲು ಸಾಧ್ಯವಾಗಿಲ್ಲ. ಸರ್ಕಾರ ಕೆಲವೆಡೆ ಇವರಿಗೆ ಆರ್ಥಿಕ ಸಹಕಾರ, ಆಹಾರ ಸಾಮಗ್ರಿ ವಿತರಿಸಿತು. ಆದರೆ ಎಲ್ಲರಿಗೂ ಇದು ಸಿಗಲಿಲ್ಲ. ಇನ್ನು ಕೆಲ ಸ್ವಯಂಸೇವಾ ಸಂಸ್ಥೆಗಳು ವೈಯಕ್ತಿಕವಾಗಿ ಕೆಲ ದಾನಿಗಳು ನೀಡಿದ ಸಹಾಯದೊಂದಿಗೆ ಇವರು ಬದುಕಿದ್ದಾರೆ. ಆದರೆ ಇದು ಇವರಿಗೆ ಇಷ್ಟದ ಬದುಕಾಗಿ ಇರಲಿಲ್ಲ. ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ವಾಸವಾಗಿರುವ ಮನೆಗೆಲಸದವರು ಒಂದರಿಂದ ಹತ್ತು ಮನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್​​ಡೌನ್ ಆರಂಭದಲ್ಲಿ ಎಲ್ಲಿಯೂ ಇವರಿಗೆ ಕೆಲಸ ಸಿಕ್ಕಿರಲಿಲ್ಲ. ಆದರೆ ಇತ್ತೀಚೆಗೆ ಮನೆಗೆಲಸದವರಿಂದ ಕೊರೊನಾ ಹಬ್ಬಿದ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕರೆಯುತ್ತಿದ್ದ ಕೆಲವರು ಕೂಡ ಕರೆಯುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ.

ಮನೆಗೆಲಸದವರ ಗೋಳು ಕೇಳುವವರಿಲ್ಲ

ಈಗಾಗಲೇ ಎರಡು ತಿಂಗಳಿಗೂ ಹೆಚ್ಚು ವನವಾಸ ಅನುಭವಿಸಿದ್ದ ಇವರು ಇದೀಗ ಬಾಣಲಿಯಿಂದ ಬೆಂಕಿಗೆ ಬಿದ್ದ ಸ್ಥಿತಿ ಎದುರಿಸುತ್ತಿದ್ದಾರೆ. ಕೆಲಸಕ್ಕೆ ಬರುತ್ತೇನೆ ಎಂದರೆ ಕರೆಯುವವರಿಲ್ಲ, ಕರೆದ ಕಡೆ ಹೋದರೆ ರೋಗ ಬಂದರೆ ನಮ್ಮಿಂದ ವ್ಯಾಪಿಸಿತು ಎಂಬ ಆರೋಪ ಬರುತ್ತದೆ ಎಂಬ ಆತಂಕ ಅವರಲ್ಲಿ ಕಾಡುತ್ತಿದೆ. ಸದ್ಯಕ್ಕಂತೂ ಕೈಯಲ್ಲಿ ಹಣವಿಲ್ಲ ಜೊತೆಗೆ ಜೀವನೋಪಾಯಕ್ಕೆ ನಂಬಿಕೊಂಡಿದ್ದ ಕೆಲಸವಿಲ್ಲದೆ ಕಂಗಾಲಾಗಿದೆ ಇವರ ಬದುಕು.

ಎಲ್ಲೆಲ್ಲಿ‌ ಕೆಲಸ:

ಟೆಕ್ಕಿಗಳು, ಅಪಾರ್ಟ್​ಮೆಂಟ್ ನಿವಾಸಿಗಳು, ವಿವಿಧ ಬಡಾವಣೆ ಶ್ರೀಮಂತ ವರ್ಗದವರು ಮನೆಗೆಲಸದವರನ್ನು ದೊಡ್ಡಮಟ್ಟದಲ್ಲಿ ಅವಲಂಬಿಸಿದ್ದಾರೆ. ಇದರ ಹೊರತಾಗಿ ಕೆಲವು ಹೋಟೆಲ್​ಗಳು ಹಾಗೂ ಮನೆಗಳಿಗೂ ಅಡುಗೆ ಕೆಲಸಕ್ಕೆ ತೆರಳುವವರು ಸಾಕಷ್ಟು ಮಂದಿ ಇದ್ದಾರೆ. ಮನೆಗೆಲಸದವರು ಹಾಗೂ ಅಡುಗೆಯವರು ವಾಸವಾಗಿರುವುದು ಮಧ್ಯಮ ಹಾಗೂ ಬಡವರು ವಾಸವಾಗಿರುವ ಕೊಳಗೇರಿ ಇಲ್ಲವೇ ತುಂಬಾ ಜನಸಂಖ್ಯೆಯಿರುವ ಸಣ್ಣಪುಟ್ಟ ಬಡಾವಣೆಗಳಲ್ಲಿ. ಇಲ್ಲಿ ಮನೆಗಳು ಕಿರಿದು. ಜೊತೆಗೆ ಸೂಕ್ತ ಒಳಚರಂಡಿ, ಸ್ವಚ್ಛತೆ, ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಅವಕಾಶ ಇಲ್ಲದ ತಾಣಗಳಾಗಿರುತ್ತವೆ. ಇಂತಹ ಸ್ಥಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಶೇ.70ರಷ್ಟು ಕೊರೊನಾ ಪ್ರಕರಣಗಳಿಗೆ ಇಂದು ಬಡ ಹಾಗೂ ಕೂಲಿ ಕಾರ್ಮಿಕರು ವಾಸವಾಗಿರುವ ಬಡಾವಣೆ, ವಸತಿ ಪ್ರದೇಶಗಳು ನೆಲೆಯಾಗಿವೆ. ಸೂಕ್ತ ಸುರಕ್ಷತೆ ಕೈಗೊಳ್ಳುವ ಅವಕಾಶ ಇಲ್ಲದ ಇವರು ಅರಿಯದೆ ಕೊರೊನಾ ವ್ಯಾಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕೆಲಸಕ್ಕೆ ಇವರನ್ನು ಯಾರೂ ಕರೆಯುತ್ತಿಲ್ಲ.

ಇನ್ನೊಂದು ಕಡೆ ಅನೇಕ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಕೆಲಸಗಾರರ ಅಗತ್ಯ ಕೂಡ ಅವರಿಗೆ ಎದುರಾಗುತ್ತಿಲ್ಲ. ಕಚೇರಿಗೆ ಪ್ರಯಾಣ ಮಾಡುವ ಸಮಯವನ್ನು ಮನೆಗೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಕೆಲಸದ ಜೊತೆ ಮನೆಗೆಲಸವೂ ಸಾಗಿಹೋಗುತ್ತಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಮನೆಗೆಲಸದವರು ಸರಿ ಸುಮಾರು ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಇನ್ನು ಬೆಂಗಳೂರು ನಗರದ ವ್ಯಾಪ್ತಿಗೆ ಬಂದರೆ ಸರಿ ಸುಮಾರು 10ರಿಂದ 12 ಲಕ್ಷ ಮಂದಿ ಮನೆಗೆಲಸದವರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಹೊರ ರಾಜ್ಯಗಳಿಂದ ಆಗಮಿಸಿದವರಾಗಿದ್ದಾರೆ. ಬೆಂಗಳೂರಿನ ಗಾಂಧಿನಗರ ಚಾಮರಾಜಪೇಟೆ ಚಿಕ್ಕಪೇಟೆ ಶಾಂತಿನಗರ ಭಾಗಗಳಲ್ಲಿ ಹೆಚ್ಚಾಗಿ ಇವರು ವಾಸವಾಗಿದ್ದಾರೆ. ಇದರ ಹೊರತಾಗಿ ಬೆಂಗಳೂರಿನ ಬಹುತೇಕ ಕೊಳಗೇರಿ ಹಾಗೂ ಸಣ್ಣಪುಟ್ಟ ಬಡಾವಣೆಗಳಲ್ಲಿ ಇವರು ವಾಸವಾಗಿದ್ದು ತಮ್ಮ ಪ್ರದೇಶಕ್ಕೆ ಸಮೀಪದಲ್ಲಿರುವ ಅಪಾರ್ಟ್​ಮೆಂಟ್ ಅಥವಾ ಮನೆಗಳಿಗೆ ಕೆಲಸಕ್ಕೆ ತೆರಳುತ್ತಿದ್ದಾರೆ. ಇಷ್ಟು ಸಮಯ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಕಳೆದ ಮಾರ್ಚ್ ತಿಂಗಳಲ್ಲಿ ವಕ್ಕರಿಸಿದ ಮಹಾಮಾರಿ ಇವರ ಬದುಕನ್ನು ಮೂರಾಬಟ್ಟೆ ಮಾಡಿದೆ.

ಕಷ್ಟವಾಗಿದೆ ಬದುಕು:

ಬೆಂಗಳೂರಿನ ಗಾಂಧಿನಗರ ನಿವಾಸಿ ಹಾಗೂ ಮನೆಗೆಲಸದವರಾದ ಸರಸ್ವತಿ ಪ್ರಕಾರ, ಕೊರೊನಾ ಬಂದ ನಂತರದ ದಿನಗಳಲ್ಲಿ ಮನೆಯಲ್ಲಿ ಯಾರು ಕೆಲಸಕ್ಕೆ ತೆರಳಿಲ್ಲ. ಆಹಾರ ಸಾಮಗ್ರಿಗಳ ಕೊರತೆ ಸಾಕಷ್ಟು ಕಾಡಿತ್ತು. ಎಲ್ಲೋ ಕೆಲವರು ಬಂದು ಆಹಾರ ಸಾಮಗ್ರಿ ನೀಡಿದರು. ಸರ್ಕಾರದಿಂದ ಯಾವುದೇ ಸಹಕಾರ ಸಿಗಲಿಲ್ಲ. ಮಗಳಿಗೆ ಮಗು ಜನಿಸಿದ್ದು ಚಿಕ್ಕ ಮನೆಯಲ್ಲಿ ಆರೆಂಟು ಜನ ವಾಸವಾಗಿದ್ದೇವೆ. ಎಲ್ಲರೂ ಒಂದೊಂದು ಕಡೆ ಕೆಲಸ ಮಾಡುತ್ತಿದ್ದೆವು. ಈಗ ಹೆಚ್ಚಿನವರಿಗೆ ಕೆಲಸ ಇಲ್ಲದಂತಾಗಿದೆ. ಯಾರೂ ಕೆಲಸಕ್ಕೆ ಕರೆಯುತ್ತಿಲ್ಲ ಜೀವನ ಕಷ್ಟವಾಗಿದೆ ಎನ್ನುತ್ತಾರೆ.

Last Updated : Jul 10, 2020, 6:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.