ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರರು ದಿನೇ ದಿನೇ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುವ ಪ್ರಕರಣಗಳು ಹೆಚ್ಚಾಗ್ತಿದ್ದು, ಇವುಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ಹೊಸ ಫ್ಲಾನ್ ರೂಪಿಸಿದೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಟ್ರಾಫಿಕ್ ಆಯುಕ್ತ ರವಿಕಾಂತೇ ಗೌಡ ವಿನೂತನ ಪ್ಲಾನ್ ಮಾಡಿದ್ದು ಮ್ಯಾನಿ ಕ್ವೀನ್ ಅಂದ್ರೆ, ಟ್ರಾಫಿಕ್ ಗೊಂಬೆಗಳನ್ನು ನಿಲ್ಲಿಸಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದಾರೆ.
ಸಿಲಿಕಾನ್ ಸಿಟಿಯ ಕೆ.ಜಿ. ಹಳ್ಳಿ ಪೊಲೀಸ್ ಠಾಣೆ, ನಾಗವಾರ ಜಂಕ್ಷನ್, ಸಿಟಿ ಮಾರ್ಕೆಟ್ನ ಬಿವಿಕೆ ಐಯ್ಯಂಗಾರ್ ರಸ್ತೆ, ಚಿಕ್ಕಪೇಟೆ ಜಂಕ್ಷನ್, ಕೆಂಗೇರಿ ಮಧು ಜಂಕ್ಷನ್, ರಾಜಾಜಿನಗರದ ರಾಜಾಜಿನಗರ ಮುಖ್ಯದ್ವಾರ,ಮಡಿವಾಳ ಸೇಂಟ್ ಜಾನ್ ಸಿಗ್ನಲ್, ಹುಳಿಮಾವು ಗೊಟ್ಟಿಗೆರೆ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ ಹೊಸರೋಡ್ ಜಂಕ್ಷನ್ ಸೇರಿದಂತೆ ಒಟ್ಟು 20 ಕಡೆಗಳಲ್ಲಿ ಬೊಂಬೆ ಪೊಲೀಸರನ್ನು ಅಳವಡಿಸಲಾಗಿದೆ.
ಟ್ರಾಫಿಕ್ ಪೊಲೀಸರ ಕೆಲಸದೊತ್ತಡ ಕಡಿಮೆ ಮಾಡುವುದು ಮತ್ತು ಸಂಚಾರಿ ನಿಯಮಗಳನ್ನು ಎಲ್ಲರೂ ಪಾಲಿಸುವಂತೆ ಮಾಡುವುದು ಯೋಜನೆಯ ಮೂಲ ಉದ್ದೇಶ.
ಹೆಚ್ಚು ಟ್ರಾಫಿಕ್ ಇರುವ ರಸ್ತೆಗಳಲ್ಲಿ ಈ ಬೊಂಬೆಗಳನ್ನು ನಿಲ್ಲಿಸಿದ್ರೆ ಸವಾರರಿಗೆ ಟ್ರಾಫಿಕ್ ಪೊಲೀಸರೇ ನಿಂತಿದ್ದಾರೇನೋ ಎಂಬಂತೆ ಕಾಣುತ್ತದೆ.