ETV Bharat / state

ನಾನು ನಟಿ ಸಂಜನಾಗೆ ನಾಯಿ ಕೊಟ್ಟಿದ್ದು ನಿಜ:  ಶ್ವಾನದ ಒಡೆಯ ಸತೀಶ್​ ಸ್ಪಷ್ಟನೆ - Sandalwood and Drug Mafia

ಸ್ಯಾಂಡಲ್​ವುಡ್​ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಎದುರಿಸಿದ ಕೋಟಿ ರೂ ಮೌಲ್ಯದ ಶ್ವಾನ ಮಾಲೀಕ ಸತೀಶ್ ಕ್ಯಾಡಬೋಮ್ಸ್, ನಟಿ ಸಂಜನಾ ಜೊತೆಗಿನ ಸಂಬಂಧದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Dog Breeder Satish Cadaboms Reaction After CCB Questioning
ಕೋಟಿ ನಾಯಿ ಒಡೆಯ ಸತೀಶ್​ ಕ್ಯಾಡಬೋಮ್ಸ್ ಸ್ಪಷ್ಟನೆ
author img

By

Published : Sep 22, 2020, 4:29 PM IST

ಬೆಂಗಳೂರು : ಡ್ರಗ್ಸ್​ ಮಾಫಿಯಾ ಪ್ರಕರಣದ ಸಂಬಂಧ ತನ್ನನ್ನು ಸಿಸಿಬಿ ಅಧಿಕಾರಿಗಳು ಇಂದು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ ಎಂದು ಸ್ಯಾಂಡಲ್​ವುಡ್ ನಟ - ನಟಿಯರಿಗೆ ಕೋಟಿ - ಕೋಟಿ ರೂ. ಮೌಲ್ಯದ ನಾಯಿಗಳನ್ನು ಮಾರಾಟ ಮಾಡುತ್ತಿದ್ದ ಸತೀಶ್ ಕ್ಯಾಡಬೋಮ್ಸ್​ ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸತೀಶ್, ಸಿಸಿಬಿ ಅಧಿಕಾರಿಗಳು ನನಗೆ ವಿಚಾರಣೆಗೆ ಹಾಜರಾಗಿ ಎಂದು ತನಗೆ ಮನೆಗೆ ಬಂದು ನೋಟಿಸ್​ ಕೊಟ್ಟಿಲ್ಲ, ವಾಟ್ಸ್​ಆ್ಯಪ್​​​ ಮೂಲಕ ನೋಟಿಸ್​ ಜಾರಿ ಮಾಡಿದ್ದರು.

ಪಾರ್ಟಿಯಲ್ಲಿ ಸಂಜನಾ ಜೊತೆಗಿರುವ ನನ್ನ ಫೋಟೋ ನೋಡಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಿ ಉತ್ತರ ನೀಡಿದ್ದೇನೆ ಎಂದು ಹೇಳಿದರು.

ಸಂಜನಾ ಜೊತೆಗಿನ ಪಾರ್ಟಿಗಳ ಫೋಟೋ ನೋಡಿ ಸಂಜನಾಗೂ ನಿಮಗೂ ಏನು ಸಂಬಂಧ ಎಂದು ಅಧಿಕಾರಿಗಳು ಪ್ರಶ್ನಿಸಿದರು. ಪಾರ್ಟಿ ಮಾಡಿದ್ದರ ಬಗ್ಗೆ, ಸುತ್ತಾಡಿದ್ದರ ಬಗ್ಗೆ, ನಟ-ನಟಿಯರ ಜೊತೆಗಿನ ಸಂಬಂಧದ ಬಗ್ಗೆ ಸಹ ಕೇಳಿದರು. ಸಿಸಿಬಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿರುವುದಾಗಿ ಅವರು ತಿಳಿಸಿದರು.

ಕೋಟಿ ನಾಯಿ ಒಡೆಯ ಸತೀಶ್​ ಕ್ಯಾಡಬೋಮ್ಸ್ ಸ್ಪಷ್ಟನೆ

ನಾನೂ ಸಹ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದೆ. ಆದರೆ, ನಾನು ಪಾರ್ಟಿಯಲ್ಲಿ ಸಿಗರೇಟ್, ಡ್ರಗ್ ಯಾವುದನ್ನೂ ಕೂಡ ತೆಗೆದುಕೊಂಡಿಲ್ಲ. ಹಾಗೆ, ಸಂಜನಾ ಕೂಡ ನನ್ನ ಎದುರು ಯಾವುತ್ತೂ ಸಿಗರೇಟ್​ ಸೇದಿಲ್ಲ. ಸಂಜನಾ ನನಗೆ ಹೇಗೆ ಪರಿಚಯವೋ ಹಾಗೆಯೇ ಎಲ್ಲ ಸೆಲೆಬ್ರೆಟಿಗಳು ಪರಿಚಯವೂ ಸಹ ನನಗೆ ಇದೆ. ಹಲವು ನಟ-ನಟಿಯರ ಫಂಕ್ಷನ್​ ಅಟೆಂಡ್​ ಮಾಡಿದ್ದೇನೆ. ಸಂಜನಾ ಮನೆಯಲ್ಲಿರುವ ಸುಲ್ತಾನ್ ಎಂಬ ನಾಯಿ ನನ್ನದೆ. ಕಾಂಟ್ರಾಕ್ಟ್ ಬೇಸ್​ ಮೇಲೆ ಕೊಟ್ಟಿರುವೆ. ನಾನು ನಾನ್​ವೆಜ್ ಅಡುಗೆ ಚೆನ್ನಾಗಿ ಮಾಡುತ್ತೇನೆ. ಹಾಗಾಗಿ ನನ್ನನ್ನು ಆಗ್ಗಾಗೆ ಮನೆಗೆ ಕರೆಯುತ್ತಿದ್ದರು. ಹಾಗೆ ಇದೇ ವೇಳೆ ಜನರಲ್ ಪಾರ್ಟಿ ಮಾಡುತ್ತಿದ್ದೆವು. ಪಾರ್ಟಿಯಲ್ಲಿ ಡ್ರಗ್ ನೀಡುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹಾಗೆ ಸದ್ಯ ಸಿಸಿಬಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಈಗ ಊಟದ ಸಮಯ ಮತ್ತೆ ಬನ್ನಿ ಎಂದು ಕಳುಹಿಸಿರುವುದಾಗಿ ಸತೀಶ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.