ಬೆಂಗಳೂರು: ಬೀದಿ ನಾಯಿಗಳ ದಾಳಿಯಿಂದ ಸ್ಥಳದಲ್ಲಿಯೇ ಬಾಲಕ ಅಸುನೀಗಿರುವ ಘಟನೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಮಲ್ಲಪ್ಪ ಎಂಬ ದಂಪತಿ ಮಗ ದುರ್ಗೇಶ್ (5) ನಾಯಿ ದಾಳಿಯಿಂದ ಮೃತಪಟ್ಟಿದ್ದಾನೆ.
ಹತ್ತಿರದ ಆಚಾರ್ಯ ಕಾಲೇಜು ಹಿಂಭಾಗದಲ್ಲಿ ಮಲ್ಲಪ್ಪ ದಂಪತಿ ಕೂಲಿ ಕೆಲಸ ಮಾಡುತ್ತಿದ್ದರು. ಬಾಲಕ ಹತ್ತಿರದ ಸ್ಥಳದಲ್ಲಿ ಆಟವಾಡುತ್ತಿದ್ದಾಗ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸುಮಾರು 8-10 ಬೀದಿ ನಾಯಿಗಳು ದಾಳಿ ಮಾಡಿವೆ. ಇದರಿಂದ ತೀವ್ರ ಗಾಯಗಳಾಗಿದ್ದು, ಬಾಲಕ ಮೃತಪಟ್ಟಿದ್ದಾನೆ.
ಮಲ್ಲಪ್ಪ ಪೋಷಕರು ಕಲಬುರಗಿ ಮೂಲದವರೆಂದು ತಿಳಿದು ಬಂದಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.