ETV Bharat / state

ದೊಡ್ಡಬನಹಳ್ಳಿಯ ಸಿ ಎಂ ನಾಗರಾಜ್​ ಅವರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ.. - ದೊಡ್ಡಬನಹಳ್ಳಿ ಸರ್ಕಾರಿ ಪ್ರೌಢಶಾಲೆ

ಯೂಟ್ಯೂಬ್​ಗಳನ್ನು‌ ನೋಡಿಕೊಂಡು ಮಾಹಿತಿ, ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸುಲಭವಾಗಿ ವಿಜ್ಞಾನವನ್ನು ಕಲಿಯಲು, ಅರ್ಥೈಸಿಕೊಳ್ಳಲು ಬೇಕಾದ ಅಗತ್ಯ ವಿಧಾನಗಳನ್ನು ಜಾರಿಗೆ ತರಲಾಗಿದೆ. ಶಾಲೆಯಲ್ಲಿ ಮಳೆ ನೀರ ಕೊಯ್ಲು, ನಿರಂತರ ಸಸಿ ನೆಟ್ಟು ಪೋಷಿಸುವುದು ಹೀಗೆ ವಿವಿಧ ಪರಿಸರ ಸ್ನೇಹಿ ಕ್ರಮಗಳನ್ನು ಶಾಲೆಯಲ್ಲಿ ನಡೆಸುತ್ತಿದ್ದೇವೆ..

doddabanahalli-teacher-nagaraj-nominated-for-the-national-award
ದೊಡ್ಡಬನಹಳ್ಳಿ ಸರ್ಕಾರಿ ಪ್ರೌಢಶಾಲೆ
author img

By

Published : Aug 20, 2021, 8:50 PM IST

ಬೆಂಗಳೂರು : ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ದೊಡ್ಡಬನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸಿ ಎಂ ನಾಗರಾಜ ಅವರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಈ ಬಾರಿ ಈ ಗೌರವಕ್ಕೆ ಪಾತ್ರರಾದ ರಾಜ್ಯದ ಏಕೈಕ ಶಿಕ್ಷಕರಾಗಿದ್ದಾರೆ. ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರಶಸ್ತಿ ನೀಡಲಾಗುತ್ತಿದೆ.

ದೊಡ್ಡಬನಹಳ್ಳಿ ಶಿಕ್ಷಕ ಸಿ ಎಂ ನಾಗರಾಜ್​ ಅವರಿಗೆ ಲಭಿಸಿದ 'ರಾಷ್ಟ್ರೀಯ ಪ್ರಶಸ್ತಿ'

ಚಿತ್ರದುರ್ಗ ಜಿಲ್ಲೆಯ ಹೊಳ್ಕೆರೆ ತಾಲೂಕಿನವರಾದ ನಾಗರಾಜ್‌ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಪದವಿ ಪಡೆದಿದ್ದಾರೆ. ನಂತರ 2005ರಿಂದ ಬೆಂಗಳೂರು ಮಹದೇವಪುರ ಕ್ಷೇತ್ರದ ಕಾಡಸೊಣ್ಣಪ್ಪನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವಿಜ್ಞಾನ ಶಿಕ್ಷಕರಾಗಿ ನೇಮಕಗೊಂಡು 8 ವರ್ಷ ಸೇವೆ ಸಲ್ಲಿಸಿದರು.

ನಂತರ ಕೆ.ಆರ್. ಪುರ ಬಿಇಒ ಕಚೇರಿಯಲ್ಲಿ ನಾಲ್ಕು ವರ್ಷ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಕಾರ್ಯನಿರ್ವಹಿಸಿದ್ದರು. ಸದ್ಯ 2018ರಿಂದ ಬೆಂಗಳೂರಿನ ಮಹದೇವಪುರದ ದೊಡ್ಡಬನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆಯಷ್ಟೆ ದೊಡ್ಡಬನಹಳ್ಳಿ ಫ್ರೌಡ ಶಾಲೆಗೆ ವಿಜ್ಞಾನ ವಿಷಯದ ಶಿಕ್ಷಕರಾಗಿ ನೇಮಕಗೊಂಡರು. ಹಿಂದುಳಿದಿದ್ದ ಶಾಲೆಯನ್ನು ದಾನಿಗಳ ಮತ್ತು ಊರಿನ ಮುಖಂಡರ ಸಹಾಯದಿಂದ ಹಂತ ಹಂತವಾಗಿ ಅಭಿವೃದ್ಧಿ ಪಡಿಸಿ ಮಾದರಿ ಶಾಲೆಯನ್ನಾಗಿ ಮಾಡುವಲ್ಲಿ ಶ್ರಮಿಸಿದ್ದಾರೆ. ಮಕ್ಕಳ ದಾಖಲಾತಿ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದ್ದು, ಸದ್ಯ 170 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಈ ಕುರಿತು ಈಟಿವಿ ಭಾರತ್ ಜೊತೆಗೆ ಮಾತನಾಡಿದ ಶಿಕ್ಷಕ ನಾಗರಾಜ್ ಅವರು, ವಿದ್ಯಾರ್ಥಿಗಳಿಗೆ ಕರಕುಶಲ ವಸ್ತುಗಳ ತರಬೇತಿ, ಪ್ಲಾಸ್ಟಿಕ್ ತಾಜ್ಯದಿಂದ ವಿವಿಧ ಕಲಾಕೃತಿ ತಯಾರಿಕೆ ಹಾಗೂ ಶಾಲೆಯ ಆವರಣದಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಸಮರ್ಪಕವಾಗಿ ಬಳಕೆ ಮಾಡುವುದರ ಮೂಲಕ ಶಾಲಾ ಮಕ್ಕಳಿಂದಲೇ ಯಂತ್ರವನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಜೀವನಕೌಶಲ್ಯ ತರಬೇತಿ : ಮಕ್ಕಳಿಗೆ ಜೀವನಕೌಶಲ್ಯದ ಜತೆಗೆ ಪೇಂಟಿಂಗ್‌, ಕಾಗದದಿಂದ ಸಿದ್ಧಪಡಿಸಬಹುದಾದ ವಿವಿಧ ಕೌಶಲ್ಯಾಧಾರಿತ ವಿವಿಧ ಮಾದರಿಗಳನ್ನು ಸಿದ್ಧಪಡಿಸುವುದನ್ನು ಕಲಿಸಲಾಗುತ್ತದೆ. ವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ತರಿಸಲು ಹೊಸ ಹೊಸ ಪ್ರಯೋಗಗಳನ್ನು ಹೇಳಿಕೊಡಲಾಗುತ್ತದೆ ಎಂದರು.

ವಿಜ್ಞಾನ ಕಲಿಯಲು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ : ಯೂಟ್ಯೂಬ್​ಗಳನ್ನು‌ ನೋಡಿಕೊಂಡು ಮಾಹಿತಿ, ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸುಲಭವಾಗಿ ವಿಜ್ಞಾನವನ್ನು ಕಲಿಯಲು, ಅರ್ಥೈಸಿಕೊಳ್ಳಲು ಬೇಕಾದ ಅಗತ್ಯ ವಿಧಾನಗಳನ್ನು ಜಾರಿಗೆ ತರಲಾಗಿದೆ. ಶಾಲೆಯಲ್ಲಿ ಮಳೆ ನೀರ ಕೊಯ್ಲು, ನಿರಂತರ ಸಸಿ ನೆಟ್ಟು ಪೋಷಿಸುವುದು ಹೀಗೆ ವಿವಿಧ ಪರಿಸರ ಸ್ನೇಹಿ ಕ್ರಮಗಳನ್ನು ಶಾಲೆಯಲ್ಲಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಮಕ್ಕಳಿಂದ ವಿವಿಧ ಪ್ರಯೋಗಗಳು : ದಾನಿಗಳ ಸಹಾಯದಿಂದ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಕೈ ತೊಳೆಯುವ ನೀರು ವೇಸ್ಟ್ ಆಗದಂತೆ ಒಂದು ತೊಟ್ಟಿ ನಿರ್ಮಿಸಿ ಆ ನೀರನ್ನು ಡ್ರಿಪ್ಸ್‌ ಮೂಲಕ ಗಿಡಗಳಿಗೆ ಉಪಯೋಗಿಸುವ, ಹಾಯಿಸುವ ಪದ್ಧತಿಯನ್ನು ಮಾಡಲಾಗಿದೆ. ಶಾಲೆಯ ಸುತ್ತಮುತ್ತಲಿನಲ್ಲಿರುವ ಗಿಡ-ಮರಗಳಿಗೆ ಉತ್ತಮ ಗೊಬ್ಬರ ಹಾಕಲು ಎರೆಹುಳ ಗೊಬ್ಬರವನ್ನು ಉತ್ಪಾದನೆ ಮಾಡಲಾಗುತ್ತಿದೆ. ಈ ರೀತಿ ಮಕ್ಕಳ ಕೈಯಲ್ಲೇ ವಿವಿಧ ಪ್ರಯೋಗಗಳನ್ನು ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.