ETV Bharat / state

ಕೋವಿಡ್ ಅಪಾಯ‌ ಭತ್ಯೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಸ್ಥಾನಿಕ ವೈದ್ಯರ ಮುಷ್ಕರ

author img

By

Published : Oct 7, 2021, 1:49 PM IST

Updated : Oct 7, 2021, 2:26 PM IST

ಪಿಜಿ ರೆಸಿಡೆಂಟ್ ಡಾಕ್ಟರ್ಸ್, ರೆಸಿಡೆಂಟ್ ಡಾಕ್ಟರ್ಸ್‌, ಇಂಟರ್ನ್ಸ್ ಗ್ರಾಮೀಣ ಸೇವೆಗೆ ಸೇರಿಕೊಂಡವರು ಸೇರಿದಂತೆ ಎಲ್ಲರೂ ಕೂಡ ಪ್ರತಿ ಹಂತದಲ್ಲೂ ಕೋವಿಡ್ ಸೇವೆ ಮಾಡುತ್ತಿದ್ದೇವೆ. ಆದರೆ‌ 18 ತಿಂಗಳಿಂದ ಸರ್ಕಾರದಿಂದ ಅಪಾಯ ಭತ್ಯೆ ಪ್ರತಿ ತಿಂಗಳು 10 ಸಾವಿರ ಕೊಡುವುದಾಗಿ ಘೋಷಿಸಿದ್ದರೂ ಕೊಟ್ಟಿಲ್ಲ ಎಂದು ಮುಷ್ಕರನಿರತ ವೈದ್ಯರು ಆರೋಪಿಸಿದ್ದಾರೆ.

doctors-protest-against-government-in-bengaluru
ಕೋವಿಡ್ ಅಪಾಯ‌ ಭತ್ಯೆ ಅನುದಾನ ಬಿಡುಗಡೆಗೆ ಸ್ಥಾನಿಕ ವೈದ್ಯರ ಆಗ್ರಹ

ಬೆಂಗಳೂರು: ಸರ್ಕಾರವು ಕೋವಿಡ್ ಸಮಯದಲ್ಲಿ ಸ್ಥಾನಿಕ ವೈದ್ಯರು ಹಾಗೂ ಇಂಟರ್ನ್ ಡಾಕ್ಟರ್​​ಗಳನ್ನು ತಮಗೆ ಬೇಕಾದಂತೆ ಬಳಸಿಕೊಂಡು ಕೆಲಸ ಮುಗಿದ ಬಳಿಕ ನಿರ್ಲಕ್ಷಿಸಿದೆ. ಕೋವಿಡ್ ಅಪಾಯ ಭತ್ಯೆಯನ್ನೂ ನೀಡಿಲ್ಲ ಎಂದು ಆರೋಪಿಸಿ ಸರ್ಕಾರಿ ಆಸ್ಪತ್ರೆಗಳ ಸ್ಥಾನಿಕ ವೈದ್ಯರು (ನಿವಾಸಿ ವೈದ್ಯರು) ಒಂದು ದಿನದ ಮುಷ್ಕರ ನಡೆಸುತ್ತಿದ್ದಾರೆ.

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತುರ್ತು ಸೇವೆ, ಕೋವಿಡ್ ಚಿಕಿತ್ಸೆ ಹೊರತುಪಡಿಸಿ ಹೊರರೋಗಿ ವಿಭಾಗವನ್ನು ಬಂದ್ ಮಾಡಲಾಗಿದೆ. ಸ್ಥಾನಿಕ ವೈದ್ಯರ ಪೈಕಿ ಖಾಯಂ ಹಾಗೂ ಹಿರಿಯ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸದ ಕಾರಣ, ಹೊರರೋಗಿ ವಿಭಾಗದ ರೋಗಿಗಳ ಚಿಕಿತ್ಸೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.‌ ಸಾವಿರಾರು ರೋಗಿಗಳು ಒಪಿಡಿಗೆ ಚಿಕಿತ್ಸೆಗಾಗಿ ಬರುತ್ತಾರೆ.

ಪ್ರಮುಖ ಬೇಡಿಕೆಗಳು:
1. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಪಡೆದವರಿಗೆ ಬಹಳ ತಾರತಮ್ಯವಾಗುತ್ತಿದೆ. ಶೈಕ್ಷಣಿಕ ಶುಲ್ಕವು ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿಹೆಚ್ಚಿದೆ. 2018ರಲ್ಲಿ 30,000 ಶುಲ್ಕದಿಂದ ಏಕಾಏಕಿ 1 ಲಕ್ಷಕ್ಕೆ ಏರಿಸಿತ್ತು. ಈಗ 2 ಕಾಲು ಲಕ್ಷದಷ್ಟು ಶುಲ್ಕ ತುಂಬಲು ಸಾಧ್ಯವಾಗುತ್ತಿಲ್ಲ. ಇದನ್ನು 2018ರ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಪುನರರಚನೆ ಮಾಡುವಂತೆ ಆಗ್ರಹಿಸಿದ್ದಾರೆ.

2. ಕೋವಿಡ್ ಅಪಾಯ ಭತ್ಯೆ ನೀಡುವುದಾಗಿ ಭರವಸೆ ನೀಡಿದ ಸರ್ಕಾರ ಬಿಡಿಗಾಸನ್ನೂ ಕೊಟ್ಟಿಲ್ಲ. ಕೂಡಲೇ ಕೋವಿಡ್ ಅಪಾಯ‌ ಭತ್ಯೆಯ ಅನುದಾನವನ್ನು ಬಿಡುಗಡೆ ಮಾಡಲು ಬೇಡಿಕೆ ಇಟ್ಟಿದ್ದಾರೆ.

3. ಕೋವಿಡ್ ಅಥವಾ ಕೋವಿಡೇತರ ಸೇವೆಗಳು ಎಂದು ನೋಡದೆ, ಕಳೆದ 3 ತಿಂಗಳಿಂದ ನಿರಂತರವಾಗಿ ದುಡಿಯುತ್ತಿರುವ ಇಂಟರ್ನ್ ಹಾಗೂ ಪೋಸ್ಟ್ MBBS ಜೂನಿಯರ್ ಡಾಕ್ಟರ್​​ಗಳಿಗೆ ಬಿಡಿಗಾಸು ಸ್ಟೈಪೆಂಡ್ ಕೂಡಾ ಸರ್ಕಾರ ನೀಡಿರುವುದಿಲ್ಲ.

ಸ್ಥಾನಿಕ ವೈದ್ಯರ ಮುಷ್ಕರ

ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ ಡಾ.ನಮ್ರತಾ ಮಾತನಾಡಿ, ಕಿರು ವೈದ್ಯರು, ಪಿಜಿ ರೆಸಿಡೆಂಟ್ ಡಾಕ್ಟರ್ಸ್, ರೆಸಿಡೆಂಟ್ ಡಾಕ್ಟರ್ಸ್‌, ಇಂಟರ್ನ್ಸ್ ಗ್ರಾಮೀಣ ಸೇವೆಗೆ ಸೇರಿಕೊಂಡವರು ಸೇರಿದಂತೆ ಎಲ್ಲರೂ ಕೂಡ ಪ್ರತಿ ಹಂತದಲ್ಲೂ ಕೋವಿಡ್ ಸೇವೆ ಮಾಡುತ್ತಿದ್ದೇವೆ. ಆದರೆ‌ 18 ತಿಂಗಳಿಂದ ಸರ್ಕಾರದಿಂದ ಅಪಾಯ ಭತ್ಯೆ ಪ್ರತಿ ತಿಂಗಳು 10 ಸಾವಿರ ಕೊಡುವುದಾಗಿ ಘೋಷಿಸಿದ್ದರೂ ಕೊಟ್ಟಿಲ್ಲ. 18 ತಿಂಗಳ ಕಾಲ ತಮ್ಮತಮ್ಮ ಓದನ್ನೂ ಬಿಟ್ಟು ಕೋವಿಡ್​ಗಾಗಿ ಕೆಲಸ ಮಾಡಿದರೂ ಇದಕ್ಕೆ ತಕ್ಕ ಬೆಲೆ ಸಿಕ್ಕಿಲ್ಲ ಎಂದರು.‌

ಪಿಜಿ ಹಾಗೂ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ 2019ರಲ್ಲಿ ಏಕಾಏಕಿ 500%ನಷ್ಟು ಶುಲ್ಕ ಏರಿಕೆ ಮಾಡಲಾಗಿದೆ. ಇದು ಕರ್ನಾಟಕ ರಾಜ್ಯದಲ್ಲೇ ಹೆಚ್ಚು. ಆದರೆ ವಿದ್ಯಾರ್ಥಿ ವೇತನ ಬೇರೆ ರಾಜ್ಯಗಳಷ್ಟೂ ಇಲ್ಲ. ಗ್ರಾಮೀಣ ಸೇವೆಗೆ ಹೋದ 126 ನಿವಾಸಿ ವೈದ್ಯರಿಗೆ, ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಟ್ಟಿಲ್ಲ. ಸಚಿವರು, ಸಿಎಂ ಅವರನ್ನು ಐದಾರು ಬಾರಿ ಭೇಟಿ ಮಾಡಿದರೂ, 2-3 ನಿಮಿಷ ಮಾತನಾಡಿ ಕಳಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂರನೇ ವರ್ಷದ ಎಂಸಿಹೆಚ್ ಓದುತ್ತಿರುವ ಡಾ. ಮನು ಅವರು ಮಾತನಾಡಿ, ಶೈಕ್ಷಣಿಕ ಶುಲ್ಕ ಕಟ್ಟಲಾಗದಷ್ಟು ಏರಿಕೆ ಮಾಡಿದ್ದಾರೆ.‌ ಏಮ್ಸ್ ದೆಹಲಿ, ತಮಿಳುನಾಡು, ಮಹಾರಾಷ್ಟ್ರದಲ್ಲಿಯೂ ನಮ್ಮ ರಾಜ್ಯಕ್ಕಿಂತ ಕಡಿಮೆ‌ ಇದೆ. ಮೈಸೂರಿನಲ್ಲಿ ಎಂಬಿಬಿಎಸ್, ದೆಹಲಿಯಲ್ಲಿ ಎಂ.ಡಿ ಮಾಡಿದಾಗ ಶುಲ್ಕ ಕಡಿಮೆ ಇತ್ತು. ಆದರೆ ಎಂಸಿಹೆಚ್​ಗೆ 2.25 ಲಕ್ಷ ಶುಲ್ಕ ಕಟ್ಟಲು ಕಷ್ಟಸಾಧ್ಯವಾಗಿದೆ. ಇನ್ನಾದರೂ ಶೈಕ್ಷಣಿಕ ಶುಲ್ಕ ಕಡಿಮೆ ಮಾಡಬೇಕು. ಕೋವಿಡ್ ಸಮಯದಲ್ಲಿ ನನಗೆ ಕೋವಿಡ್ ಬಂದಿದ್ದಷ್ಟೇ ಅಲ್ಲದೆ ಕುಟುಂಬವೂ ಕಷ್ಟದಲ್ಲಿತ್ತು.‌ ಆದರೂ ಕೋವಿಡ್ ಅಪಾಯ ಭತ್ಯೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲಖಿಂಪುರ ಹಿಂಸಾಚಾರದ ಸಂಪೂರ್ಣ ವರದಿ ಸಲ್ಲಿಸುವಂತೆ ಯುಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ

Last Updated : Oct 7, 2021, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.