ETV Bharat / state

ದೇಶದ ಅತೀ ದೊಡ್ಡ ಕೋವಿಡ್​​​ ಕೇರ್ ಕೇಂದ್ರ‌ದಲ್ಲಿ ಸೇವೆ ಮಾಡಲು ಉತ್ಸುಕರಾಗಿರುವ ವೈದ್ಯರು! - ಕೋವಿಡ್ ಕೇರ್ ಕೇಂದ್ರ‌ದಲ್ಲಿ ಸೇವೆ ಮಾಡಲು ಉತ್ಸುಕರಾಗಿರುವ ವೈದ್ಯರು

ಬೆಂಗಳೂರು ಹೊರವಲಯ ತುಮಕೂರು ರಸ್ತೆಯ ಮಾದವಾರ ಬಳಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ( ಬಿಐಇಸಿ)ದಲ್ಲಿ ತಾತ್ಕಾಲಿಕ ಕೋವಿಡ್ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಕೋವಿಡ್ ಕೇರ್ ಕೇಂದ್ರ‌ದ ಉಸ್ತುವಾರಿ‌ಯನ್ನ ಬಿಬಿಎಂಪಿ ವಹಿಸಿಕೊಂಡಿದೆ.

largest Covid Care Center
ದೇಶದ ಅತೀ ದೊಡ್ಡ ಕೋವಿಡ್ ಕೇರ್ ಕೇಂದ್ರ‌ದಲ್ಲಿ ಸೇವೆ ಮಾಡಲು ಉತ್ಸುಕರಾಗಿರುವ ವೈದ್ಯರು..
author img

By

Published : Jul 14, 2020, 9:44 AM IST

ನೆಲಮಂಗಲ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೊರೊನಾ ನಿಯಂತ್ರಣ‌ಕ್ಕಾಗಿ ರಾಜ್ಯ ಸರ್ಕಾರ ದೇಶದ ಅತೀ ದೊಡ್ಡ ಕೋವಿಡ್ ಕೇರ್ ಕೇಂದ್ರವನ್ನು ಸ್ಥಾಪನೆ ಮಾಡಿದೆ.

ದೇಶದ ಅತೀ ದೊಡ್ಡ ಕೋವಿಡ್ ಕೇರ್ ಕೇಂದ್ರ‌ದಲ್ಲಿ ಸೇವೆ ಮಾಡಲು ಉತ್ಸುಕರಾಗಿರುವ ವೈದ್ಯರು

ಬೆಂಗಳೂರು ಹೊರವಲಯ ತುಮಕೂರು ರಸ್ತೆಯ ಮಾದವಾರ ಬಳಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ತಾತ್ಕಾಲಿಕ ಕೋವಿಡ್ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಕೋವಿಡ್ ಕೇರ್ ಕೇಂದ್ರ‌ದ ಉಸ್ತುವಾರಿ‌ಯನ್ನ ಬಿಬಿಎಂಪಿ ವಹಿಸಿಕೊಂಡಿದೆ. ಒಟ್ಟು 10,100 ಹಾಸಿಗೆ ಸಾಮಾರ್ಥ್ಯ ಹೊಂದಿದ್ದು, ಇಲ್ಲಿ ಕೊರೂನಾ ರೋಗ ಲಕ್ಷಣಗಳಿಲ್ಲದ ಸೋಂಕಿತರ ಆರೈಕೆ ಮಾಡಲಾಗುತ್ತೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಬಿಬಿಎಂಪಿಯಿಂದ ವೈದ್ಯರ ನೇಮಕಾತಿ ನಡೆದಿದೆ. ಮೊದಲ ತಂಡದಲ್ಲಿ 1002 ವೈದ್ಯರು ನೇಮಕವಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲು ಉತ್ಸುಕರಾಗಿದ್ದಾರೆ.

10,100 ರೋಗಿಗಳ ಆರೈಕೆ ಮಾಡಲು ಬಿಬಿಎಂಪಿ ವೈದ್ಯರು, ನರ್ಸ್​ಗಳ ನೇಮಕಾತಿ ಆರಂಭಿಸಿದೆ. 300 ವೈದ್ಯರು, 500 ನರ್ಸ್​ಗಳು, 300 ಸಹಾಯಕರು, 400 ಶುಚಿತ್ವ ಸಿಬ್ಬಂದಿ, 300 ಆರಕ್ಷಕರು, 300 ಮಾರ್ಷಲ್​ಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಮೊದಲ ತಂಡವಾಗಿ 100 ವೈದ್ಯರು ನೇಮಕವಾಗಿ‌ದ್ದು, ಕೋವಿಡ್ ಕೇರ್ ಕೇಂದ್ರದಲ್ಲಿ ಕೆಲಸಕ್ಕೆ ಹಾಜರಾಗಿ ತರಬೇತಿ ಪಡೆಯುತ್ತಿದ್ದಾರೆ.

ಕೋವಿಡ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಬಿಬಿಎಂಪಿ ಮುಖಾಂತರ ಆಯ್ಕೆಯಾದ ವೈದ್ಯರು ಸಂತಸ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಬಿಬಿಎಂಪಿ ಮುಖಾಂತರ ನೇರವಾಗಿ ಆಯ್ಕೆಯಾದೆವು. ಕೊರೊನಾ ಸಂದರ್ಭದಲ್ಲಿ ಇನ್ನೂ ವೈದ್ಯರ ಅವಶ್ಯಕತೆ ಇದೆ ಎಂಬುದು ತಿಳಿದು ಬೇಸರವಾಯಿತು. ಬಿಐಇಸಿ ಕೇಂದ್ರದಲ್ಲಿ ಕೋವಿಡ್ ಸೋಂಕಿತ ಆರೈಕೆ ಕೇಂದ್ರದಲ್ಲಿ ಕೆಲಸ ಮಾಡಲು ಉತ್ಸಕನಾಗಿದ್ದೇನೆ. ಕೋವಿಡ್-19 ಸಂದರ್ಭದಲ್ಲಿ ನಮಗೂ ಹಣಕಾಸಿನ ತೊಂದರೆಯಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅಭಿನಂದನೆ ಸಲ್ಲುಸುತ್ತೇವೆ. 10,100 ಹಾಸಿಗೆ ನಿರ್ವಹಿಸುವುದು ಕಷ್ಟ. ಇಂತಹ ಕೆಲಸದಲ್ಲಿ ನಾವು ಭಾಗಿಯಾಗಿರುವುದು ಸಂತಸ ತಂದಿದೆ ಎಂದರು.

ಇಲ್ಲಿನ ಸೌಲಭ್ಯ ನೋಡಿ ಕೆಲಸ ಮಾಡಬಹುದು ಎನ್ನುಬಹುದು. ಜೊತೆಗೆ ರೋಗಿಗೆ ಅಗತ್ಯ ಸೌಲಭ್ಯ ಸಿಗುತ್ತದೆ ಎಂಬ ಆಶಾಭಾವನೆ ಇದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.