ETV Bharat / state

ಮಾಸ್ಕ್ ಎಸೆಯುವ ಮುನ್ನ ನೀವು ಮಾಡಲೇಬೇಕಾದ ಕರ್ತವ್ಯ ಏನು? - bangalore latest mask

ಎಲ್ಲೆಂದರಲ್ಲಿ, ರಸ್ತೆ ಬದಿ, ಕಸದ ರಾಶಿಯಲ್ಲಿ ಮಾಸ್ಕ್ ಎಸೆಯಬೇಡಿ ಎಂದು ತಿಳಿಸಿದೆ. ಮಾಸ್ಕ್ ಬಳಕೆ ನಂತರ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿದಂತಿಲ್ಲ.

mask
ಮಾಸ್ಕ್ ಎಸೆಯುವ ಮುನ್ನ ನೀವು ಮಾಡಲೇಬೇಕಾದ ಕರ್ತವ್ಯ ಏನು ಗೊತ್ತಾ
author img

By

Published : Apr 27, 2020, 1:21 PM IST

ಬೆಂಗಳೂರು : ಕೊರೊನಾ ರಕ್ಷಣೆಗಾಗಿ ನಾವು ಬಳಸಿ ಬಿಸಾಡುವ ಮಾಸ್ಕ್ ಮತ್ತೊಬ್ಬರ ಪ್ರಾಣಕ್ಕೆ ಕುತ್ತು ತರಬಹುದು. ಮಾಸ್ಕ್ ಬಳಕೆಗೆ ಮಾರ್ಗಸೂಚಿಗಳು ಇರುವಂತೆ, ಅದನ್ನು ಎಸೆಯುವುದಕ್ಕೂ ಕೆಲ ನಿಯಮಗಳಿವೆ. ಪಾಲಿಕೆ ಈ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿಯೂ ವಿಫಲವಾಗಿದೆ. ಎಲ್ಲೆಂದರಲ್ಲಿ, ರಸ್ತೆ ಬದಿ, ಕಸದ ರಾಶಿಯಲ್ಲಿ ಮಾಸ್ಕ್ ಎಸೆಯಬೇಡಿ ಎಂದು ತಿಳಿಸಿದೆ. ಮಾಸ್ಕ್ ಬಳಕೆ ನಂತರ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿದಂತಿಲ್ಲ.

ಈ ಬಗ್ಗೆ ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿವೆ. ಅವು ಕೆಳಗಿನಂತಿವೆ.

1) ಮಾಸ್ಕ್ ಬಳಕೆಯ ನಂತರ ಸುಮಾರು 72 ಗಂಟೆಗಳ ಕಾಲ ಪೇಪರ್ ಬ್ಯಾಗ್​ನಲ್ಲಿ ಇಡಬೇಕು.
2) ಜನರಲ್ ಕಸದ ಜೊತೆ ಹಾಕಬಹುದು ಆದ್ರೆ ಕಸದ ಬುಟ್ಟಿಗೆ ಹಾಕುವ ಮುನ್ನ ಮಾಸ್ಕನ್ನು ಎರಡು ಭಾಗವಾಗಿ ತುಂಡು ಮಾಡಬೇಕು.
3) ಒಮ್ಮೆ ಬಳಸಿದ ಮಾಸ್ಕನ್ನು ಯಾರೂ ಮರುಬಳಕೆ ಮಾಡದಂತೆ ಮಾಸ್ಕನ್ನು ಎರಡು ತುಂಡು ಮಾಡಿ 72 ಗಂಟೆಯ ನಂತರ ಎಸೆಯಬೇಕು.
4) ಹೋಂ ಕ್ವಾರಂಟೈನ್ ಅಥವಾ ಕಂಟೈನ್​ಮೆಂಟ್ ಝೋನ್​ಗಳ ಕಸವನ್ನು ಪ್ರತ್ಯೇಕವಾಗಿ ಹಳದಿ ಬ್ಯಾಗ್ ನಲ್ಲಿ ಎಸೆಯಬೇಕು.

ಮಾಸ್ಕ್ ಎಸೆಯುವ ಮುನ್ನ ನೀವು ಮಾಡಲೇಬೇಕಾದ ಕರ್ತವ್ಯ ಏನು ಗೊತ್ತಾ

ಬಿಬಿಎಂಪಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಇಷ್ಟೆಲ್ಲ ಮುನ್ಸೂಚನೆ ನೀಡಿದ್ದು, ಹದಿನಾಲ್ಕು ದಿನ ಹೋಂ ಕ್ವಾರಂಟೈನ್​ನಲ್ಲಿದ್ದ ಮನೆಗಳಿಂದ ಕಸ ತೆಗೆದುಕೊಳ್ಳಲು ಯಾವುದೇ ವೈಜ್ಞಾನಿಕ ರೀತಿಗಳನ್ನು ಅಳವಡಿಸಿಕೊಂಡಿಲ್ಲ. ಇನ್ನು ಹಳದಿ ಬ್ಯಾಗ್ ಬಳಕೆ ಅಂತೂ ಎಲ್ಲೂ ಕಂಡುಬಂದಿಲ್ಲ. ಇತ್ತೀಚೆಗೆ ಹೊಂಗಸಂದ್ರದ ಕಂಟೈನ್​ಮೆಂಟ್ ಝೋನ್​ ಕಸ ಗುಡಿಸುವವರು ಹಾಗೂ ಕಸ ತೆಗೆದುಕೊಳ್ಳುವವರಿಗೆ ಮಾತ್ರ ಪಿಪಿಪಿ ಕಿಟ್ ಸೌಲಭ್ಯ ನೀಡಲಾಗಿದೆ. ಉಳಿದಂತೆ ಜನರಿಗೂ ಮಾಸ್ಕ್ ಎಸೆಯುವ ಬಗ್ಗೆ ಸೂಕ್ತ ಅರಿವು ಇಲ್ಲ. ಪಾಲಿಕೆಯೂ ಮಾಸ್ಕ್​ಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಮರೇಶ್ ಮಾತನಾಡಿ, ಒಂದು ಕಾಲು ಕೋಟಿ ಜನ ವಾಸಿಸುವ ನಗರದಲ್ಲಿ ಮಾಸ್ಕ್ ಗಳು ಕೋಟಿಗೂ ಹೆಚ್ಚು ಕಸದಲ್ಲಿ ಮಿಶ್ರವಾಗಿ ಹೋಗುತ್ತಿದೆ. ಪಾಲಿಕೆ ಇದಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.