ETV Bharat / state

ವಿಪಕ್ಷಗಳ ಪ್ರಶ್ನೆಗಳಿಗೆ ಎದೆಗುಂದಬೇಡಿ.. ಸರ್ಕಾರ ಸಮರ್ಥಿಸಲು ಸಚಿವರಿಗೆ ಸಿಎಂ ಸೂಚನೆ..

ಇಂದು ನಡೆದ ಸಚಿವರೊಂದಿಗಿನ ಸಭೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಬೊಕ್ಕಸ ಖಾಲಿ, ನೆರೆ ಪರಿಹಾರ ನೀಡುವಲ್ಲಿ ವಿಳಂಬ, ಕೇಂದ್ರದ ಅಲ್ಪ ಪರಿಹಾರ ಕುರಿತು ಪ್ರಶ್ನೆಗಳು ಎದುರಾಗುತ್ತವೆ. ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ಧರಾಗಿ ಅಂತಾ ಸಚಿವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರಿಗೆ ಸಿಎಂ ಸೂಚನೆ
author img

By

Published : Oct 9, 2019, 9:27 PM IST

ಬೆಂಗಳೂರು: ನಾಳೆ ನಡೆಯುವ ಅಧಿವೇಶನದಲ್ಲಿ ಪ್ರತಿಪಕ್ಷಗಳು ಟೀಕೆಗೆ ಮುಂದಾಗುತ್ತವೆ. ‌ಬೊಕ್ಕಸ ಖಾಲಿ, ನೆರೆ ಪರಿಹಾರ ನೀಡುವಲ್ಲಿ ವಿಳಂಬ, ಕೇಂದ್ರದ ಅಲ್ಪ ಪರಿಹಾರ ಕುರಿತು ಪ್ರಶ್ನೆಗಳು ಎದುರಾಗುತ್ತವೆ. ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ಧರಾಗಿ ಅಂತಾ ಇಂದು ನಡೆದ ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ಸಚಿವರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಅಂತಾ ಮೂಲಗಳು ತಿಳಿಸಿವೆ.‌

ಸರ್ಕಾರದ ಬೊಕ್ಕಸ ಖಾಲಿ ವಿಚಾರದಲ್ಲಿ ಪ್ರತಿಪಕ್ಷಗಳ ಎದುರು ಸೋಲಬೇಡಿ.‌ ನಮ್ಮ ಅವಧಿಯಲ್ಲಿ ಬೊಕ್ಕಸ ಖಾಲಿ ಆಗಿಲ್ಲ. ಕಳೆದ ಸೆಪ್ಟೆಂಬರ್​ವರೆಗೆ ತೆರಿಗೆ ಸಂಗ್ರಹ ಚೆನ್ನಾಗಿಯೇ ಆಗಿದೆ. ತೆರಿಗೆ ಸಂಗ್ರಹದ ಅಂಕಿ-ಅಂಶ ಮುಂದಿಟ್ಟು ಮಾತನಾಡಿ.‌ ನೆರೆ ಪರಿಹಾರ ಕೆಲಸಗಳ ಬಗ್ಗೆ ಅಂಕಿ ಅಂಶ ಸಮೇತ ಉತ್ತರ ಕೊಡಿ ಅಂತಾ ಸಲಹೆ ನೀಡಿದ್ದಾರೆ.‌

ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ಧರಾಗಿ.. ಸಿಎಂ ಯಡಿಯೂರಪ್ಪ

ಇನ್ನು, ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ರಾಜ್ಯದ ಪ್ರವಾಹ ಮತ್ತು ಬರ ಪರಿಸ್ಥಿತಿಯ ಕುರಿತು ಎಲ್ಲಾ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಜರುಗಿತು. ಈ ಸಮಯದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೋವಿಂದ.ಎಂ. ಕಾರಜೋಳ ಹಾಗೂ ಎಲ್ಲ ಸಚಿವರು, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನು, ಸಭೆ ಮುಗಿದ ನಂತರ ಪ್ರತಿಕ್ರಿಯಿಸಿದ, ಪ್ರವಾಸೋದ್ಯಮ ಸಚಿವ ಸಿ ಟಿ ರವಿ, ಸದನದಲ್ಲಿ‌ ಮಂಡನೆಯಾಗಬೇಕಾದ ವಿಷಯಗಳ ಬಗ್ಗೆ ಸಿಎಂ ನಮ್ಮೊಂದಿಗೆ ಚರ್ಚಿಸಿದ್ದಾರೆ. ಜತೆಗೆ ನೆರೆ ಪರಿಹಾರ ಯಾವ ಭಾಗಗಳಿಗೆ ಎಷ್ಟೆಷ್ಟು ತಲುಪಿದೆ ಎಂಬುದರ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ನೆರೆ ಪರಿಹಾರಕ್ಕೆ ಅನುಕೂಲವಾಗುವ ಪೂರಕ ಅಂದಾಜುಗಳ ಮಂಡನೆಯಾಗುತ್ತದೆ. ಪೂರಕ ಅಂದಾಜುಗಳ ಗಾತ್ರ ಮತ್ತು ಸ್ವರೂಪ ನಾಳೆ ಕಲಾಪದಲ್ಲಿ ಬಹಿರಂಗವಾಗುತ್ತದೆ.

ಅನರ್ಹ ಶಾಸಕರ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹಾಗಾಗಿ ಅವರ ಬಗ್ಗೆ ನ್ಯಾಯಾಲಯದಲ್ಲೇ ತೀರ್ಮಾನವಾಗಬೇಕು. ಟಿಕೆಟ್ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿರುವ ಬಗ್ಗೆ ನಾವೇನು ಹೇಳಲು ಸಾಧ್ಯವಿಲ್ಲ, ಯಾರಿಗೂ ಅಸಮಾಧಾನವಿಲ್ಲ ಅಂತಾ ತಿಳಿಸಿದರು.

Intro:ಸರ್ಕಾರದ ಬೊಕ್ಕಸ ಖಾಲಿ ವಿಚಾರದಲ್ಲಿ ಪ್ರತಿಪಕ್ಷಗಳ ಎದುರು ಸೋಲಬೇಡಿ ..

ಬೆಂಗಳೂರು: ನಾಳೆ ನಡೆಯುವ ಅಧಿವೇಶನದಲ್ಲಿ ಪ್ರತಿಪಕ್ಷಗಳು ಟೀಕೆಗೆ ಮುಂದಾಗುತ್ತದೆ..‌ಬೊಕ್ಕಸ ಖಾಲಿ, ನೆರೆ ಪರಿಹಾರ ವ್ಯತ್ಯಯ, ಕೇಂದ್ರದ ಅಲ್ಪ ಪರಿಹಾರ ಕುರಿತು ಪ್ರಶ್ನೆಗಳು ಮುಂದಾಗುತ್ತೆ .. ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ದರಾಗಿ ಅಂತ ಇಂದು ನಡೆದ ಸಭೆಯಲ್ಲಿ ಸಚಿವರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಅಂತ ಮೂಲಗಳು ತಿಳಿಸಿವೆ..‌

ಸರ್ಕಾರದ ಬೊಕ್ಕಸ ಖಾಲಿ ವಿಚಾರದಲ್ಲಿ ಪ್ರತಿಪಕ್ಷಗಳ ಎದುರು ಸೋಲಬೇಡಿ.‌ ನಮ್ಮ ಅವಧಿಯಲ್ಲಿ ಬೊಕ್ಕಸ ಖಾಲಿ ಆಗಿಲ್ಲ..
ಕಳೆದ ಸೆಪ್ಟೆಂಬರ್ ವರೆಗೆ ತೆರಿಗೆ ಸಂಗ್ರಹ ಚೆನ್ನಾಗಿಯೇ ಆಗಿದೆ. ತೆರಿಗೆ ಸಂಗ್ರಹದ ಅಂಕಿ ಅಂಶ ಮುಂದಿಟ್ಟು ಮಾತನಾಡಿ..‌ ನೆರೆ ಪರಿಹಾರ ಕೆಲಸಗಳ ಬಗ್ಗೆ ಅಂಕಿ ಅಂಶ ಸಮೇತ ಉತ್ತರ ಕೊಡಿ ಅಂತ ಸಲಹೆ ನೀಡಿದ್ದಾರೆ..‌

ಇನ್ನು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಅಧ್ಯಕ್ಷತೆಯಲ್ಲಿ ರಾಜ್ಯದ ಪ್ರವಾಹ ಮತ್ತು ಬರ ಪರಿಸ್ಥಿತಿಯ ಕುರಿತು ಎಲ್ಲಾ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಜರುಗಿತು. ಈ ಸಮಯದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೋವಿಂದ.ಎಂ.ಕಾರಜೋಳ ಹಾಗೂ ಎಲ್ಲ ಸಚಿವರು, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನು ಸಭೆಯು ಮುಗಿದ ನಂತರ ಪ್ರತಿಕ್ರಿಯಿಸಿದ,
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸದನದಲ್ಲಿ‌ ಮಂಡನೆಯಾಗ ಬೇಕಾದ ವಿಷಯಗಳ ಬಗ್ಗೆ ಸಿಎಂ ನಮ್ಮೊಂದಿಗೆ ಚರ್ಚಿಸಿದ್ದಾರೆ.. ಜತೆಗೆ ನೆರೆ ಪರಿಹಾರ ಯಾವ ಭಾಗಗಳಿಗೆ ಎಷ್ಟೆಷ್ಟು ತಲುಪಿದೆ.. ಎಂಬುದರ ಮಾಹಿತಿಯನ್ನೂ ಪಡೆದು ಕೊಂಡಿದ್ದಾರೆ. ನೆರೆ ಪರಿಹಾರಕ್ಕೆ ಅನುಕೂಲ ವಾಗುವಂತೆ ಪೂರಕ ಅಂದಾಜುಗಳ ಮಂಡನೆಯಾಗುತ್ತದೆ. ಪೂರಕ ಅಂದಾಜುಗಳ ಗಾತ್ರ ಮತ್ತು ಸ್ವರೂಪ ನಾಳೆ ಕಲಾಪದಲ್ಲಿ ಬಹಿರಂಗವಾಗುತ್ತದೆ.

ಅನರ್ಹ ಶಾಸಕರ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಹಾಗಾಗಿ ಅವರ ಬಗ್ಗೆ ನ್ಯಾಯಾಲಯದಲ್ಲೇತೀರ್ಮಾನವಾಗಬೇಕು.
ಟಿಕೆಟ್ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿರುವ ಬಗ್ಗೆ ನಾವೇನು ಹೇಳಲು ಸಾಧ್ಯವಿಲ್ಲ, ಯಾರಿಗೂ ಅಸಮಾಧಾನವಿಲ್ಲ ಅಂತ ತಿಳಿಸಿದರು..

KN_BNG_2_CM_MEETING_MINISTER_SCRIPT_7201801

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.