ETV Bharat / state

ಪ್ರತಿ ವಾರ್ಡ್​ನಲ್ಲಿ ಕನಿಷ್ಠ 200 ಮಂದಿಗೆ ಕೊರೊನಾ ಟೆಸ್ಟ್‌ ಮಾಡಿ: ಬೈರತಿ ಬಸವರಾಜ್

author img

By

Published : Aug 18, 2020, 7:37 PM IST

ಮಹದೇವಪುರ ಕ್ಷೇತ್ರದ ಹೂಡಿಯ ಖಾಸಗಿ ಹೋಟೆಲ್​​ನಲ್ಲಿ ಕೊರೊನಾ ಹಿನ್ನೆಲೆ ಏರ್ಪಡಿಸಿದ್ದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯನ್ನು ಸಚಿವ ಬೈರತಿ ಬಸವರಾಜ್ ನಡೆಸಿದ್ರು. ಈ ವೇಳೆ ಪ್ರತಿಯೊಂದು ವಾರ್ಡ್​ನಲ್ಲಿ ಕನಿಷ್ಠ 200 ಮಂದಿಗೆ ಕೊರೊನಾ ಟೆಸ್ಟ್‌ ಮಾಡಿ ಎಂದು ಸೂಚನೆ ನೀಡಿದ್ರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸೂಚನೆ
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸೂಚನೆ

ಬೆಂಗಳೂರು: ಪ್ರತಿದಿನ ಪ್ರತಿಯೊಂದು ವಾರ್ಡ್​ನಲ್ಲಿ ಕನಿಷ್ಠ 200 ಮಂದಿಗೆ ಕೊರೊನಾ ಟೆಸ್ಟ್‌ ಮಾಡಿ, ವರದಿ ನೀಡುವಂತೆ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸೂಚನೆ ನೀಡಿದ್ದಾರೆ.

ಮಹದೇವಪುರ ಕ್ಷೇತ್ರದ ಹೂಡಿಯ ಖಾಸಗಿ ಹೋಟೆಲ್​​ನಲ್ಲಿ ಕೊರೊನಾ ಹಿನ್ನೆಲೆ ಏರ್ಪಡಿಸಿದ್ದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪರೀಕ್ಷೆ ಸೇರಿದಂತೆ ಹಲವು ಕ್ರಮಗಳನ್ನು ಸರ್ಮಪಕವಾಗಿ ಮಾಡುವಂತೆ ಸೂಚಿಸಿದರು.

ಕಂಟೈನ್​ಮೆಂಟ್​​ ಝೋನ್​​ಗಳಲ್ಲಿ ಸರ್ಮಪಕ ಆಹಾರ ವಿತರಣೆ ಸೇರಿದಂತೆ, ಝೋನ್​​ಗಳಲ್ಲಿ ಪರೀಕ್ಷೆಗಳನ್ನು ಪಾಲಿಕೆ ಸದಸ್ಯರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಜಾ ದಿನಗಳಲ್ಲಿಯೂ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.

ಕೊರೊನಾ ಮಹದೇವಪುರ ವಲಯದಲ್ಲಿ ಕಡಿಮೆ ಆಗುವವರೆಗೂ ಅಧಿಕಾರಿಗಳಿಗೆ ಮತ್ತು ನನಗೆ ಯಾವುದೇ ರಜೆ, ಹಬ್ಬ ಹರಿದಿನಗಳು ಇಲ್ಲ. ಅಧಿಕಾರಿಗಳು ತಮ್ಮ ಕೆಳಗೆ ಇರುವವರಿಗೆ ಹೆಚ್ಚಿನ ಪ್ರಮಾಣದ ಜವಾಬ್ದಾರಿಯನ್ನು ಕೊಡಬೇಕು. ನೀವು ಪ್ರತಿದಿನ ಒಂದೊಂದು ಸ್ಥಳಕ್ಕೆ ಭೇಟಿ ನೀಡಬೇಕು. ಅಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದರು.

ಬಿಬಿಎಂಪಿ ವಾರ್ಡ್​ಗಳಲ್ಲಿ ಮತ್ತು ಪಂಚಾಯಿತಿಗಳಲ್ಲಿ ಆಶಾ ಕಾರ್ಯಕರ್ತೆಯರು ಪರೀಕ್ಷೆ ಮಾಡಲು ಮನೆ ಮನೆಗೆ ಬಂದಾಗ ದಯವಿಟ್ಟು ಸಾರ್ವಜನಿಕರು ಪರಿಕ್ಷೆ ಮಾಡಿಸಿಕೊಳ್ಳಬೇಕು, ಅಲ್ಲದೇ ಅವರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಸರಿಯಾಗಿ ಕೆಲಸ ಮಾಡದೇ ಸಚಿವರ ಪ್ರಶ್ನೆಗಳಿಗೆ ಉತ್ತರ ಕೊಡದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.