ETV Bharat / state

ಕುಡಿದು ವಾಹನ ಚಾಲನೆ: ವ್ಹೀಲಿಂಗ್ ಮಾಡಿ ಆ್ಯಕ್ಸಿಡೆಂಟ್ ಮಾಡಿದ 711 ಮಂದಿಯ ಡಿಎಲ್‌ ಕ್ಯಾನ್ಸಲ್ - ಡಿಎಲ್‌ ಕ್ಯಾನ್ಸಲ್

ಕುಡಿದು ವಾಹನ ಚಾಲನೆ ಮಾಡಿ, ಆ್ಯಕ್ಸಿಡೆಂಟ್ ಮಾಡಿದ 711 ಮಂದಿಯ ಡಿಎಲ್ ಕ್ಯಾನ್ಸಲ್ ಮಾಡಲಾಗಿದೆ.

ಜಂಟಿ ಪೊಲೀಸ್ ಆಯುಕ್ತ ಅನುಚೇತ್
ಜಂಟಿ ಪೊಲೀಸ್ ಆಯುಕ್ತ ಅನುಚೇತ್
author img

By ETV Bharat Karnataka Team

Published : Jan 9, 2024, 8:11 PM IST

Updated : Jan 9, 2024, 8:36 PM IST

ಜಂಟಿ ಪೊಲೀಸ್ ಆಯುಕ್ತ ಅನುಚೇತ್

ಬೆಂಗಳೂರು : ನೀವೇನಾದರೂ ಕುಡಿದು ವಾಹನ ಚಲಾಯಿಸುತ್ತಿದ್ದೀರಾ? ಜೋಶ್​ಗಾಗಿ ವ್ಹೀಲಿಂಗ್ ಮಾಡ್ತೀರಾ ? ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗಿದ್ದೀರಾ? ಹಾಗಾದರೆ ಮೇಲಿನ‌ ಮೂರು ಅಂಶಗಳಲ್ಲಿ ಒಂದು ಏನಾದರೂ ಮಾಡಿದರೂ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಆಗುತ್ತೆ ಎಚ್ಚರ.

ನಗರದಲ್ಲಿ ಕುಡಿದು ವಾಹನ ಚಲಾಯಿಸುತ್ತಿರುವ ಸವಾರರು ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಇದರಿಂದ ಸಾವು - ನೋವುಗಳಿಗೆ ಕಾರಣರಾಗುತ್ತಿದ್ದಾರೆ. ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಿ ದಂಡ ವಿಧಿಸಿದರೂ ಪ್ರಯೋಜನವಾಗುತ್ತಿಲ್ಲ. ಸಂಚಾರ ನಿಯಮ‌ ಉಲ್ಲಂಘಿಸಿದ ಆರೋಪದ ಹಿನ್ನೆಲೆ ಕಳೆದ ವರ್ಷ 2974 ವಾಹನ ಸವಾರರ ಪರವಾನಗಿ ರದ್ದು ಕೋರಿ ಆರ್​ಟಿಓ‌ ಕಚೇರಿಗೆ ಕಳುಹಿಸಲಾಗಿತ್ತು. ಈ ಪೈಕಿ 711 ಡಿಎಲ್ ಅಮಾನತು ಮಾಡಲಾಗಿದೆ‌.‌ ಇನ್ನುಳಿದವರ ವಾಹನ ಪರವಾನಗಿ ರದ್ದುಗೊಳಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಇನ್ನುಳಿದಂತೆ ಸಂಚಾರ ನಿಯಮ ಉಲ್ಲಂಘಿಸಿರುವ ಬೇರೆ ಬೇರೆ ರಾಜ್ಯದ ರಿಜಿಸ್ಟ್ರೇಶನ್ ಇರುವ ವಾಹನಗಳ ಬಗ್ಗೆ ಆಯಾ ರಾಜ್ಯಗಳಿಗೆ ಪತ್ರ ಬರೆದಿದ್ದೇವೆ. ಆ ವಾಹನ ಸವಾರರ ಡಿಎಲ್ ಸಹ ಸಸ್ಪೆಂಡ್ ಆಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ನಗರದಲ್ಲಿ ಡೇಂಜರ್ ಡ್ರೈವಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ‌. ವ್ಹೀಲಿಂಗ್ ಮಾಡಿದರೆ ವಾಹನದ ಆರ್​ಸಿ ಕೂಡ ಸಸ್ಪೆಂಡ್ ಮಾಡ್ತೀವಿ ಎಂದು ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಎಚ್ಚರಿಕೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸಂಚಾರ ನಿಯಮ ಪಾಲನೆ ಮಾಡದಿರುವುದೇ ಇದಕ್ಕೆ ಮೂಲ ಕಾರಣವಾಗಿದೆ.

ಸಂಚಾರಿ ಪೊಲೀಸರಿಂದ ಕಠಿಣ ಕ್ರಮ : 'ವೀಲಿಂಗ್ ಮಾಡುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಸವಾರರ ವಿರುದ್ಧದ ಕಾರ್ಯಾಚರಣೆಗೆ ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಬೇಜವಾಬ್ದಾರಿಯಿಂದ ವರ್ತಿಸುವ ವಾಹನ ಸವಾರರ ಮೇಲೆ ಇನ್ಮುಂದೆ ಕಠಿಣ ಕ್ರಮವಾಗಲಿದೆ' ಎಂದು ಸಂಚಾರ ವಿಭಾಗದ ಜಂಟಿ‌ ಆಯುಕ್ತ ಎಂ. ಎನ್‌ ಅನುಚೇತ್ ಎಚ್ಚರಿಕೆಯ (ಜನವರಿ- 5-23) ಸಂದೇಶ ರವಾನಿಸಿದ್ದರು. 'ಅಪಾಯಕಾರಿ ವೀಲಿಂಗ್ ಮಾಡುವುದು, ಅವುಗಳ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಚಾರ ಪೊಲೀಸರು ನಿಗಾ ಇಡುತ್ತಿದ್ದಾರೆ' ಎಂದಿದ್ದರು.

'ಈಗಾಗಲೇ ನಗರದ ಕಾಮಾಕ್ಷಿಪಾಳ್ಯ ಸಂಚಾರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಕಳೆದ ಹತ್ತು ದಿನಗಳಿಂದ ವಿಶೇಷ ಕಾರ್ಯಾಚರಣೆ ಕೈಗೊಳ್ಳುತ್ತಿದ್ದೇವೆ' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕುಡಿದು ವಾಹನ ಚಾಲನೆ: 12 ತಿಂಗಳಲ್ಲಿ 107 ಪ್ರಕರಣ ದಾಖಲು

Last Updated : Jan 9, 2024, 8:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.