ETV Bharat / state

ಡಿಸಿಎಂ ಕಾರಜೋಳ, ಸಚಿವ ಶ್ರೀರಾಮುಲು ರಾಜೀನಾಮೆಗೆ ಡಿಕೆಶಿ ಆಗ್ರಹ: ಯಾಕೆ ಗೊತ್ತಾ?

ಬಿಜೆಪಿಯವರ ಬದ್ಧತೆ ದಲಿತರು ಹಿಂದುಳಿದ ವರ್ಗದವರ ಬಗ್ಗೆ ಇಲ್ಲ. ಅಲ್ಪಸಂಖ್ಯಾತರನ್ನು ಮರೆತಿದ್ದಾರೆ. ಇದರಿಂದ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಚಿವ ಬಿ. ಶ್ರೀರಾಮುಲು ಇಂದು ಸಂಜೆಯೊಳಗೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಆಗ್ರಹಿಸಿದರು.

DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
author img

By

Published : Dec 9, 2020, 2:29 PM IST

ಬೆಂಗಳೂರು: ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿಯನ್ನು ತಡೆಯಲು ವಿಫಲರಾಗಿರುವ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಚಿವ ಬಿ. ಶ್ರೀರಾಮುಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣಕಾಸು ಇಲಾಖೆ ಮುಖ್ಯಮಂತ್ರಿ ಬಳಿ ಇರಬಹುದು. ಆದರೆ ಇಂಥದ್ದೊಂದು ನಿರ್ಧಾರ ತೆಗೆದುಕೊಂಡ ಸಂದರ್ಭ ಇವರು ಸುಮ್ಮನಿರುವುದು ಸರಿಯಲ್ಲ. ಇದನ್ನು ತಡೆಯಲಾಗದ ಇಬ್ಬರು ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಡಿಸಿಎಂ ಕಾರಜೋಳ, ಸಚಿವ ಶ್ರೀರಾಮುಲು ರಾಜೀನಾಮೆಗೆ ಡಿಕೆಶಿ ಆಗ್ರಹ..

ಮೀಸಲಿಟ್ಟ ಅನುದಾನದ ಮೊತ್ತ ಬೇರೆ ಇಲಾಖೆಗೆ ವರ್ಗಾವಣೆಯಾಗಿದ್ದು, ಅದನ್ನು ತಡೆಯಲಾಗದ ಇವರು ನೇರವಾಗಿ ಹಿಂದುಳಿದ ವರ್ಗದವರಿಗೆ ಆದ ಅನ್ಯಾಯಕ್ಕೆ ಹೊಣೆಗಾರರಾಗುತ್ತಾರೆ. ಇವರ ಸಮ್ಮತಿಯಿಲ್ಲದೆ ಇಂಥದೊಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಬಜೆಟ್​ನಲ್ಲಿ ಇದು ತೀರ್ಮಾನವಾಗಿದ್ದು, ಅರಿವಿದ್ದು ಈ ಕ್ರಮ ಕೈಗೊಂಡಿರುವ ಇವರು ದಲಿತ ವಿರೋಧಿಗಳು ಹಾಗೂ ಈ ಸರ್ಕಾರ ಕೂಡ ದಲಿತ ವಿರೋಧಿಯಾಗಿದೆ ಎಂದು ಆರೋಪಿಸಿದರು.

ದೇಶದ ಇತಿಹಾಸದಲ್ಲೇ ಅತ್ಯಂತ ಅಪರೂಪದ ತೀರ್ಮಾನವನ್ನು ಕೈಗೊಂಡ ನಮ್ಮ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ 371 ಜೆ ಯನ್ನು ಸಂವಿಧಾನದ ರೀತಿ ಕಾನೂನು ಜಾರಿಗೆ ತಂದು, ಎಸ್ಸಿ/ಎಸ್ಟಿ ಸಮುದಾಯದವರ ಅನುಕೂಲಕ್ಕೆ 30 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದ್ದೆವು. ಹಣವನ್ನು ಸಂಪೂರ್ಣವಾಗಿ ಈ ಸಮುದಾಯಕ್ಕೆ ಮಾತ್ರ ವೆಚ್ಚ ಮಾಡಬೇಕು ಎಂದು ಕೂಡ ತಿಳಿಸಿದ್ದೆವು ಎಂದರು.

ಓದಿ: ವರ್ತೂರು ಪ್ರಕಾಶ್​​ಗೂ ಕಾಂಗ್ರೆಸ್​​ಗೂ ಯಾವುದೇ ಸಂಬಂಧವಿಲ್ಲ: ಡಿಕೆಶಿ

ಕಳೆದ ಬಾರಿ ಸರ್ಕಾರ ಈ ಮೊತ್ತವನ್ನು 17 ಸಾವಿರ ಕೋಟಿಗೆ ಇಳಿಸಿತ್ತು. ಆರ್ಥಿಕ ಕೊರತೆ ಇರಬಹುದು ಅಥವಾ ಕೋವಿಡ್ ಆತಂಕ ಇರುವ ಹಿನ್ನೆಲೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಸುಮ್ಮನಿದ್ದೆವು. ಈಗ ಅದನ್ನು 10 ಸಾವಿರ ಕೋಟಿಗೆ ತಂದು ನಿಲ್ಲಿಸಲಾಗಿದೆ. ಜೊತೆಗೆ ಇದನ್ನು ಬೇರೆ ಇಲಾಖೆಗೆ ವರ್ಗಾಯಿಸುವ ಪ್ರಯತ್ನ ನಡೆದಿದೆ. ಬಿಜೆಪಿಯವರ ಬದ್ಧತೆ ದಲಿತರು ಹಿಂದುಳಿದ ವರ್ಗದವರ ಬಗ್ಗೆ ಇಲ್ಲ. ಅಲ್ಪಸಂಖ್ಯಾತರನ್ನು ಮರೆತಿದ್ದಾರೆ. ಇದರಿಂದ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಚಿವ ಬಿ. ಶ್ರೀರಾಮುಲು ಇಂದು ಸಂಜೆಯೊಳಗೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಡಿಕೆಶಿ ಆಗ್ರಹಿಸಿದರು.

ರಾಜ್ಯದ ದಲಿತ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ವಿರೋಧಿ ಸರ್ಕಾರ ರಾಜ್ಯದಲ್ಲಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಶಾಸಕರು ಹೆಚ್ಚು ಇದ್ದಾರೆ. ಅನುದಾನ ಬಿಡುಗಡೆಯಾದರೆ ಕಾಂಗ್ರೆಸ್ ಶಾಸಕರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಸರ್ಕಾರ ಇಡೀ ಕಲ್ಯಾಣ ಕರ್ನಾಟಕವನ್ನೇ ನಿರ್ಲಕ್ಷಿಸಿದೆ. ಈ ಭಾಗದ ನಾಯಕರಿಗೆ ಯಾವುದೇ ಸ್ಥಾನಮಾನ ಸಿಗುತ್ತಿಲ್ಲ. ನಿಗಮ-ಮಂಡಳಿಗಳಲ್ಲಿ ಕೂಡ ಸಣ್ಣಪುಟ್ಟ ಸ್ಥಾನಗಳನ್ನು ನೀಡಲಾಗಿದೆ. ಅನುದಾನವಾಗಿ ಹತ್ತು ರೂಪಾಯಿ ಕೂಡ ನೀಡುತ್ತಿಲ್ಲ. ಘೋಷಣೆ ಮಾಡಿರುವ ಹಣವನ್ನು ಅವರು ಇನ್ನೂ ಬಿಡುಗಡೆ ಮಾಡಿಲ್ಲ. ಹೊಸ ಬೇಡಿಕೆಯನ್ನು ಹೇಗೆ ಮುಂದಿಡಲು ಸಾಧ್ಯ ಎಂದು ಡಿಕೆಶಿ ಪ್ರಶ್ನಿಸಿದರು.

ಕುಮಾರಸ್ವಾಮಿ ಕಾಂಗ್ರೆಸ್ ತನ್ನ ಶಾಲಿನ ಗೌರವ ಕಳೆದುಕೊಂಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪಾಪ ಏನು ಮಾಡ್ತೀರಿ. ಈ ದೇಶದ ಪ್ರಧಾನಿ ಮಾಡಿದ್ದು ಆ ಶಾಲು, ಕುಮಾರಸ್ವಾಮಿ ಅವರನ್ನ ಮುಖ್ಯಮಂತ್ರಿ ಮಾಡಿದ್ದು ಆ ಶಾಲು. ಈಗ ಅವರು ಆ ಶಾಲಿನ ವಿರುದ್ಧ ಮಾತನಾಡಿದರೆ ಜನ ತೀರ್ಮಾನ ಮಾಡುತ್ತಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ಸಿಎಂ ಯಡಿಯೂರಪ್ಪ ರಾತ್ರಿ ಭೇಟಿ ವಿಚಾರ ಕುರಿತು ಮಾತನಾಡಿದ ಡಿಕೆಶಿ, ಅದು ನನಗೆ ಗೊತ್ತಿಲ್ಲ. ಅದೆಲ್ಲ ಸುಳ್ಳು. ದಾಖಲೆ ಇದ್ದರೆ ಜನರ ಮುಂದೆ ಬಿಡುಗಡೆ ಮಾಡಲಿ. ಭೇಟಿ ಬಗ್ಗೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರನ್ನೇ ಕೇಳಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.