ETV Bharat / state

ಸಿಎಂ ಸಿಡಿ ಇದೆ ಎಂದ ಯತ್ನಾಳ್, ವಿಶ್ವನಾಥ್ ಹೇಳಿಕೆ ತನಿಖೆಯಾಗಲಿ : ಡಿಕೆಶಿ ಆಗ್ರಹ - ಸಿಎಂ ವಿರುದ್ಧ ಶಾಸಕರ ಹೇಳಿಕೆ

ಮುಖ್ಯಮಂತ್ರಿಗಳ ಸಿಡಿ ಇದೆ ಎಂದು ಶಾಸಕ ಯತ್ನಾಳ್ ಮತ್ತು ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಈ ಕುರಿತು ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದು, ಸಿಡಿ ವಿಷಯದಲ್ಲಿ ಕಾಂಗ್ರೆಸ್​ ಹೆಸರು ಪ್ರಸ್ತಾಪಿಸಿದ ಸಚಿವ ಎಸ್​.ಟಿ. ಸೋಮಶೇಖರ್​ಗೆ ಸವಾಲ್ ಹಾಕಿದ್ದಾರೆ.

DKS reaction about MLA'S Statement against CM
ಸಿಡಿ ವಿವಾದದ ಬಗ್ಗೆ ಡಿಕೆ ಶಿವಕುಮಾರ್​ ಪ್ರತಿಕ್ರಿಯೆ
author img

By

Published : Mar 10, 2021, 7:22 PM IST

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸರ್ಕಾರದ ವಿರುದ್ಧ ಶಾಸಕ ಬಸವಗೌಡ ಪಾಟೀಲ ಯತ್ನಾಳ್ ಮತ್ತು ಎಂಎಲ್​ಸಿ ಹೆಚ್​​. ವಿಶ್ವನಾಥ್ ಹೇಳಿದ ವಿಚಾರಗಳ ಬಗ್ಗೆ ತನಿಖೆಯಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸಿಡಿ ಇದೆ ಎಂದು ಯತ್ನಾಳ್ ಮತ್ತು ವಿಶ್ವನಾಥ್ ಹೇಳಿದ್ದಾರೆ, ಬ್ಲ್ಯಾಕ್​ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಎಂದಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಲು ಯೋಗೇಶ್ವರ್ 9 ಕೋಟಿ ಸಾಲ ಮಾಡಿದ್ದಾರೆ ಎಂದು ಒಬ್ಬರು ಹೇಳ್ತಾರೆ. ಈ ಎಲ್ಲದರ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಎಸ್.ಟಿ ಸೋಮಶೇಖರ್​​ಗೆ ಸವಾಲು : ಬಿಜೆಪಿಯವರಿಗಿಂತ ಹತ್ತಿರವಾಗಿ ನಾನು ಎಸ್​​.ಟಿ. ಸೋಮಶೇಖರ್ ಅವರನ್ನು ನೋಡಿದ್ದೇನೆ. ನಾವು ಜೊತೆಯಲ್ಲಿ ರಾಜಕಾರಣ ಮಾಡಿದ್ದೇವೆ. 20 ವರ್ಷದಲ್ಲಿ ಎಸ್​.ಟಿ. ಸೋಮಶೇಖರ್ ಏನೇನು ಮಾಡಿದ್ದಾರೆ ಅದನ್ನು ಹೇಳಲಿ. ಅವರ ಜೊತೆಯಲ್ಲಿ ಇರುವವರು ಎಲ್ಲರೂ ಸೇರಿಕೊಂಡು ಒಂದು ಸುದ್ದಿಗೋಷ್ಠಿ ಮಾಡಲಿ, ಎಲ್ಲವನ್ನೂ ಅಲ್ಲಿ ಬಿಚ್ಚಿಡಲಿ. ಕಾಂಗ್ರೆಸ್ ಪಕ್ಷದ ಜೊತೆ 20 ವರ್ಷ ಏನ್ ಮಾಡಿದ್ದಾರೋ ಅದನ್ನು ಹೇಳಲಿ. ಇಂತಹ ಕೆಲಸವನ್ನೇ ಮಾಡಿದ್ದೇನೆ ಎಂದು ಹೇಳಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ.

ಓದಿ: ಸಿಡಿ ಹಿಂದೆ ಯಾರಿದ್ದಾರೆ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ: ಎಸ್.ಟಿ. ಸೋಮಶೇಖರ್

ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿಡಿಯ ಆಡಿಯೋ ಬಗ್ಗೆ ಮಾತನಾಡಿ, ವಿಡಿಯೋದಲ್ಲಿ ಯಡಿಯೂರಪ್ಪ ಭ್ರಷ್ಟಾಚಾರಿ ಎಂದು ಹೇಳಿದ್ದಾರೆ. ಮಾಧ್ಯಮಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಾನೊಬ್ಬ ಕನ್ನಡಿಗನಾಗಿ ಆ ಮಾತುಗಳನ್ನು ಹೇಳಲ್ಲ. ಕನ್ನಡಿಗರು ಯಾಕೆ ಇನ್ನೂ ಸುಮ್ಮನೆ ಇದ್ದಾರೆ ಗೊತ್ತಿಲ್ಲ. ಬೆಳಗಾವಿ ಒಂದು ರಾಜ್ಯ ಅಂತ ಹೇಳಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೆ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.

ಓದಿ : CD ಮಾಡಿಸಿದ್ದು "ಅವರೇ": ಸಹಕಾರ ಸಚಿವ ಸೋಮಶೇಖರ್

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಾಗಬೇಕಿತ್ತು. ಕಾಂಗ್ರೆಸ್​ನವರು ಶರ್ಟ್, ಪ್ಯಾಂಟ್​ ಬಿಚ್ಚಿ ಎಂದು ಹೇಳಿ ಕೊಟ್ಟಿದ್ರಾ? ಕನ್ನಡಿಗರ ಬಗ್ಗೆ ಮಾತಾಡಿ ಎಂದು ಹೇಳಿಕೊಟ್ವಾ? ನಾವೇನು ಸ್ಕ್ರಿಪ್ಟ್ ಕೊಟ್ವಾ? ಮಾಧ್ಯಮಗಳ ಬಗ್ಗೆ ಮಾತನಾಡಿ ಎಂದು ಹೇಳಿಕೊಟ್ವಾ? ಅವರ ಬಾಯಲ್ಲಿ ಬಂದಂತಹ ನುಡಿಮುತ್ತುಗಳು ಅದು. ಅದೊಂದು ನಕಲಿ ಸಿಡಿ ಆಗಿದ್ರೆ ತನಿಖೆ ಏಕೆ ಬೇಕು? ರಾಜ್ಯದ ಜನರು ಡಡ್ಡರೇನ್ರಿ ಎಂದು ಪ್ರಶ್ನಿಸಿದರು.

ರಮೇಶ್ ಜಾರಕಿಹೊಳಿ ನೊಂದಿದ್ದಾನೆ, ಐ ಫೀಲ್ ಸಾರಿ ಫಾರ್ ಹಿಮ್. ನಾನು ಅವನು ಒಂದು ಕಾಲದಲ್ಲಿ ಚೆನ್ನಾಗಿದ್ದೆವು. ನಂತರ ಹುಚ್ಚುಚ್ಚು ಆಗಿ ಹೇಳಿಕೆ ಕೊಟ್ಟಿದ್ದ. ರಾಜಕಾರಣ ಅಂದ್ರೆ ಷಡ್ರಂತ್ಯ ಮಾಡೋದು ಸಾಮಾನ್ಯ. ನೀವು ಸರಿ ಇದ್ರೆ ನಿಮ್ಮನ್ನು ಯಾಕೆ ಸಿಕ್ಕಿ ಹಾಕಿಸುತ್ತಾರೆ. ನಿಮ್ಮ ಬಟನ್ ಬಿಚ್ಚಿ ಅಂದ್ರೆ, ನೀವೇ ಬಿಚ್ಚಬೇಕು. ನಿಮ್ಮ ಪ್ಯಾಂಟ್​ ಬಿಚ್ಚಿ ಅಂದ್ರೆ ನೀವು‌ ಬಿಚ್ಚಬೇಕು ಎಂದು ಟಾಂಗ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.