ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ರಾಜ್ಯಸಭೆ ಮಾಜಿ ಸದಸ್ಯ ಎಂ. ರಾಜಗೋಪಾಲ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಮೂಲತಃ ನನ್ನ ಜಿಲ್ಲೆಯವರೇ ಆದ ದೊಡ್ಡಬಳ್ಳಾಪುರದ ರಾಜಗೋಪಾಲ್ ಅವರು ನನಗೆ ಬಹಳ ಆತ್ಮೀಯರು ಹಾಗೂ ಮಾರ್ಗದರ್ಶಿಗಳಾಗಿದ್ದರು. ಅನೇಕ ಸಂದರ್ಭಗಳಲ್ಲಿ ಅವರ ಸಲಹೆ, ಸೂಚನೆಗಳನ್ನು ಪಡೆದಿದ್ದೇನೆ. ಒಂದು ರೀತಿಯಲ್ಲಿ ಅವರು ನನಗೆ ಗುರುಗಳೇ ಆಗಿದ್ದರು. ಅವರ ಅಗಲಿಕೆ ನನ್ನ ಮನಸ್ಸಿಗೆ ಬಹಳ ನೋವು ತಂದಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
-
ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ, ಸಜ್ಜನ ಹಾಗೂ ನಿಷ್ಕಲ್ಮಶ ಮನಸ್ಸಿನ ರಾಜಕಾರಣಿ ಎಂ. ರಾಜಗೋಪಾಲ್ ಅವರ ನಿಧನ ನೋವಿನ ಸಂಗತಿ.
— DK Shivakumar (@DKShivakumar) May 23, 2021 " class="align-text-top noRightClick twitterSection" data="
ಅವರ ಆತ್ಮಕ್ಕೆ ಶಾತಿ ದೊರಕಲಿ, ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/vIeJlA9Zp7
">ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ, ಸಜ್ಜನ ಹಾಗೂ ನಿಷ್ಕಲ್ಮಶ ಮನಸ್ಸಿನ ರಾಜಕಾರಣಿ ಎಂ. ರಾಜಗೋಪಾಲ್ ಅವರ ನಿಧನ ನೋವಿನ ಸಂಗತಿ.
— DK Shivakumar (@DKShivakumar) May 23, 2021
ಅವರ ಆತ್ಮಕ್ಕೆ ಶಾತಿ ದೊರಕಲಿ, ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/vIeJlA9Zp7ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ, ಸಜ್ಜನ ಹಾಗೂ ನಿಷ್ಕಲ್ಮಶ ಮನಸ್ಸಿನ ರಾಜಕಾರಣಿ ಎಂ. ರಾಜಗೋಪಾಲ್ ಅವರ ನಿಧನ ನೋವಿನ ಸಂಗತಿ.
— DK Shivakumar (@DKShivakumar) May 23, 2021
ಅವರ ಆತ್ಮಕ್ಕೆ ಶಾತಿ ದೊರಕಲಿ, ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/vIeJlA9Zp7
ರಾಜಕೀಯದ ಜೀವನದ ಆರಂಭದಲ್ಲಿ ಬೆಂಗಳೂರಿಗೆ ಬಂದಾಗ ನನ್ನ ಬಳಿ ಫೋನ್ ಕೂಡ ಇರಲಿಲ್ಲ. ಆಗ ರಾಜಗೋಪಾಲ್ ಅವರು ತಮ್ಮ ಕೋಟಾದಲ್ಲಿ ನನ್ನ ಮನೆಗೆ ಫೋನ್ ಕೊಡಿಸಿದ್ದರು. ಯುವ ನಾಯಕನಾಗಿದ್ದ ಸಂದರ್ಭದಲ್ಲಿ ಅವರು ನನಗೆ ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ಯುವ ನಾಯಕರನ್ನು ಪ್ರೋತ್ಸಾಹಿಸಿ, ಬೆಳೆಸುವಲ್ಲಿ ಅವರು ಸದಾ ಉತ್ಸುಕರಾಗಿದ್ದರು. ಯಾವಾಗಲೂ ಯುವಕರ ಏಳಿಗೆ ಬಯಸುತ್ತಿದ್ದರು.
ಸಜ್ಜನ ಹಾಗೂ ನಿಷ್ಕಲ್ಮಶ ಮನಸ್ಸಿನ ರಾಜಕಾರಣಿ ರಾಜಗೋಪಾಲ್ ಅವರಂತಹ ನಾಯಕರ ಅಗಲಿಕೆ ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಕೆಶಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ನಿಧನ :
ಕನಕಪುರ ಮೂಲದವರಾಗಿದ್ದ ಮಾಜಿ ಸಂಸದ ಎಂ. ರಾಜಗೋಪಾಲ್ ಪ್ರಸ್ತುತ ಬೆಂಗಳೂರಿನ ನಂದಿನಿ ಬಡಾವಣೆಯ ನಿವಾಸದಲ್ಲಿ ಇದ್ದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಇಂದು ನಿಧನರಾಗಿದ್ದಾರೆ. ಕಳೆದ ಏಪ್ರಿಲ್ 9 ರಂದು ರಾಜಗೋಪಾಲ್ ಅವರ ನಂದಿನಿ ಲೇಔಟ್ ನಿವಾಸಕ್ಕೆ ಭೇಟಿ ಕೊಟ್ಟಿದ್ದ ಡಿ.ಕೆ. ಶಿವಕುಮಾರ್ ಆಶೀರ್ವಾದ ಪಡೆದು ವಾಪಸ್ಸಾಗಿದ್ದರು.