ETV Bharat / state

ಕನ್ನಡಿಗರನ್ನು ಕನ್ನಡ ನಾಡಿಗೆ ಕರೆ ತನ್ನಿ: ಸಿಎಂಗೆ ಡಿಕೆಶಿ ಮನವಿ

author img

By

Published : May 9, 2020, 10:39 PM IST

ಈಗಾಗಲೇ ಹೊರ ರಾಷ್ಟ್ರಗಳಿಂದ ಕನ್ನಡಿಗರನ್ನು ವಿಮಾನದಲ್ಲಿ ಕರೆ ತರಲಾಗುತ್ತಿದೆ. ಈ ವಿಚಾರದಲ್ಲಿ ನಾವು ನಿಮ್ಮ ಜತೆ ಇದ್ದೇವೆ. ನಿಮಗೆ ಎಲ್ಲಾ ತರಹದ ಸಹಕಾರವನ್ನು ನೀಡಲು ಕಾಂಗ್ರೆಸ್ ಪಕ್ಷ ತಯಾರಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.

DKS appeal to CM
ಕನ್ನಡಿಗರನ್ನು ಕನ್ನಡನಾಡಿಗೆ ಕರೆ ತನ್ನಿ: ಸಿಎಂಗೆ ಡಿಕೆಶಿ ಮನವಿ

ಬೆಂಗಳೂರು: ಹೊರ ರಾಜ್ಯಗಳಲ್ಲಿ ಹಾಗೂ ರಾಜ್ಯದ ಗಡಿಯಲ್ಲಿ ಸಿಲುಕಿರುವ ಕನ್ನಡಿಗರನ್ನು ದಯವಿಟ್ಟು ವಾಪಸ್ ಕರೆ ತನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಕನ್ನಡಿಗರನ್ನು ಕನ್ನಡ ನಾಡಿಗೆ ಕರೆ ತನ್ನಿ: ಸಿಎಂಗೆ ಡಿಕೆಶಿ ಮನವಿ

ಬೇರೆ ರಾಜ್ಯಗಳಲ್ಲಿ ಸಿಲುಕಿ ಕರ್ನಾಟಕಕ್ಕೆ ವಾಪಸಾಗಲು ತವಕಿಸುತ್ತಿರುವ ನಮ್ಮ ರಾಜ್ಯದ ಜನರನ್ನು ಸುರಕ್ಷಿತವಾಗಿ ವಾಪಸ್ ಕರೆ ತರುವ ವಿಚಾರವಾಗಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿರುವ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳೇ ನಮ್ಮ ಹಾಗೂ ನಿಮ್ಮ ಅಣ್ಣ ತಮ್ಮಂದಿರು ಹೊರ ರಾಜ್ಯಗಳಲ್ಲಿ, ಗಡಿ ಭಾಗಗಳಲ್ಲಿ ಸಿಲುಕಿದ್ದಾರೆ. ಅವರು ತಮ್ಮ ತಾಯ್ನಾಡಿಗೆ ಮರಳಬೇಕು ಎಂಬ ಇಚ್ಛೆ ಹೊಂದಿದ್ದಾರೆ. ತಮ್ಮ ಮನೆಗೆ ಮರಳಲು ಲಕ್ಷಾಂತರ ಮಂದಿ ಅರ್ಜಿ ಹಾಕಿದ್ದಾರೆ. ಆದರೆ ಇವರನ್ನು ಕರೆ ತರಲು ಯಾವುದೇ ಅಧಿಕಾರಿ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಹೊರಗಡೆ ಇರುವ ಕನ್ನಡಿಗರನ್ನು ನಮ್ಮ ರಾಜ್ಯಕ್ಕೆ ಕರೆ ತರಲು ವ್ಯವಸ್ಥೆ ಮಾಡಬೇಕು ಎಂದು ನಿಮ್ಮಲ್ಲಿ ನಮ್ರತೆಯಿಂದ ಮನವಿ ಮಾಡುತ್ತೇನೆ. ಈಗಾಗಲೇ ಹೊರ ರಾಷ್ಟ್ರಗಳಿಂದ ಕನ್ನಡಿಗರನ್ನು ವಿಮಾನದಲ್ಲಿ ಕರೆ ತರಲಾಗುತ್ತಿದೆ. ಈ ವಿಚಾರದಲ್ಲಿ ನಾವು ನಿಮ್ಮ ಜತೆ ಇದ್ದೇವೆ. ನಿಮಗೆ ಎಲ್ಲಾ ತರಹದ ಸಹಕಾರವನ್ನು ನೀಡಲು ಕಾಂಗ್ರೆಸ್ ಪಕ್ಷ ತಯಾರಾಗಿದೆ. ಎಂದಿದ್ದಾರೆ.

ಈ ಹಿಂದೆಯೂ ಕಾಂಗ್ರೆಸ್ ಪಕ್ಷ ತಮ್ಮ ಉತ್ತಮ ನಡೆಗೆ ಸಹಕಾರ ನೀಡುತ್ತಲೇ ಬಂದಿದ್ದು, ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರೆಸಲಿದೆ. ಸರ್ಕಾರದ ಜೊತೆಗೆ ಸಹಕಾರ ನೀಡುವ ಮೂಲಕ ರಾಜ್ಯಕ್ಕೆ ಆಗಬಹುದಾದ ಅನುಕೂಲಗಳಿಗೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.