ETV Bharat / state

ವೀರಪ್ಪ ಮೊಯ್ಲಿ, ಹೆಚ್.ಡಿ ದೇವೇಗೌಡರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ಡಿಸಿಎಂ ಡಿಕೆ ಶಿವಕುಮಾರ್ - ನಾನು ಸದಾ ಸಕಾರಾತ್ಮಕವಾಗಿ ಆಲೋಚಿಸುತ್ತೇನೆಯೇ

ನಾವು ಕಾಂಗ್ರೆಸ್ ಪಕ್ಷದವರು, ನುಡಿದಂತೆ ನಡೆಯುತ್ತೇವೆ. ನಾನು ಸದಾ ಸಕಾರಾತ್ಮಕವಾಗಿ ಆಲೋಚಿಸುತ್ತೇನೆಯೇ ಹೊರತು, ಋಣಾತ್ಮಕವಾಗಿ ಆಲೋಚನೆ ಮಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

dk-sivakumar-met-veerappa-moily-and-hd-deve-gowda-in-bengaluru
ವೀರಪ್ಪ ಮೊಯ್ಲಿ, ಹೆಚ್.ಡಿ ದೇವೇಗೌಡರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ಡಿಸಿಎಂ ಡಿಕೆ ಶಿವಕುಮಾರ್
author img

By

Published : May 22, 2023, 10:40 PM IST

ಬೆಂಗಳೂರು: ಶಾಸಕರ ಪ್ರಮಾಣವಚನ ಬೋಧನೆಗೆ ಕರೆದಿರುವ ಮೂರು ದಿನಗಳ ಅಧಿವೇಶನದಲ್ಲಿಂದು ಡಿಸಿಎಂ ಡಿಕೆ ಶಿವಕುಮಾರ್ ವಿಶೇಷವಾಗಿ ಗಮನ ಸೆಳೆದರು. ಇಂದು ಬೆಳಗ್ಗೆ ಅವರು ಆಡಳಿತ ಪಕ್ಷದ ಭಾಗದ ಅಂದರೆ ಕೆಂಗಲ್ ಗೇಟ್ ಪ್ರವೇಶ ದ್ವಾರದ ಬದಲು ಹೈಕೋರ್ಟ್ ಗೇಟ್ ಪ್ರವೇಶ ದ್ವಾರದ ಮೂಲಕ ವಿಧಾನಸಭೆಗೆ ಪ್ರವೇಶಿಸಿದರು. ನಿನ್ನೆ ಸಚಿವ ಸಂಪುಟ ಸಭೆ ನಡೆದ ಸಂದರ್ಭ ವಿಧಾನಸೌಧಕ್ಕೆ ಆಗಮಿಸಿದ ಅವರು ಕೆಂಗಲ್ ಗೇಟ್ ಮುಖಾಂತರ ಆಗಮಿಸಿ ಮೆಟ್ಟಿಲುಗಳ ಬಳಿ ಸಾಷ್ಟಾಂಗ ನಮಸ್ಕಾರ ಹಾಕಿ ಒಳಗೆ ಪ್ರವೇಶಿಸಿದ್ದರು.

ಇಂದು ಹೈಕೋರ್ಟ್ ಗೇಟ್ ಕಡೆಯಿಂದ ಆಗಮಿಸಿದ ಅವರು ಮತ್ತೊಮ್ಮೆ ಪ್ರವೇಶ ದ್ವಾರದ ಮೆಟ್ಟಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದರು.
ವಿಧಾನಸಭೆ ಪ್ರತಿಪಕ್ಷದ ನಾಯಕರ ಗ್ಯಾಲರಿ ಕಡೆಯಿಂದ ಪ್ರವೇಶಿಸಿದ ಉಪಮುಖ್ಯಮಂತ್ರಿ ಡಿಕೆಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಆರ್ ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಕೆಲಕಾಲ ಸಮಾಲೋಚಿಸಿದರು.

ವಿಧಾನಸಭೆ ಮೊಗಸಾಲೆಯಲ್ಲಿ ಭೇಟಿಯಾದ ಬಿಜೆಪಿ ನಾಯಕರು ಶಿವಕುಮಾರ್ ಅವರನ್ನು ಅಭಿನಂದಿಸಿದರು. ರಮೇಶ್ ಜಾರಕಿಹೊಳಿ ಅವರ ಬಳಿ ತೆರಳಿ ರಮೇಶ್ ಹೇಗಿದ್ದೀರಿ ಎಂದು ವಿಚಾರಿಸಿದರು. ಇದಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಕೋರಿಕೆಗೆ ಮಣಿದು ಫೋಟೋಗೆ ಪೋಸ್ ಕೊಟ್ಟರು.
ಮಧ್ಯಾಹ್ನ ಭೋಜನ ವಿರಾಮಕ್ಕಾಗಿ ಪ್ರತಿಪಕ್ಷದ ಮೊಗಸಾಲೆ ಕಡೆಯಿಂದಲೇ ಹೊರಬಿದ್ದ ಡಿಕೆ ಶಿವಕುಮಾರ್ ಲಾಂಜಿನಲ್ಲಿ ಇದ್ದ ಹಾಪ್ ಕಾಮ್ಸ್ ಮಳಿಗೆಗೆ ತೆರಳಿದ ಜ್ಯೂಸ್ ಕುಡಿದು ಬಾಳೆಹಣ್ಣು ಸವಿದರು.

ತಮ್ಮ ಜೊತೆಗಿದ್ದವರಿಗೂ ಹಣ್ಣು ಹಾಗೂ ಜ್ಯೂಸ್​​ ಕೊಡಿಸಿದರು. ಇಲ್ಲಿಂದ ತಮ್ಮ ಬೆಂಬಲಿಗರೊಂದಿಗೆ ಹೊರಟ ಡಿಕೆ ಶಿವಕುಮಾರ್ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಆರ್​ಟಿ ನಗರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಆಶೀರ್ವಾದ ಪಡೆದರು. ಮೊಯ್ಲಿ ಅವರು ತಾವು ರಚಿಸಿರುವ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಕೃತಿಯನ್ನು ಇದೇ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ನೀಡಿದರು. ಸಂಜೆ ಕಲಾಪಕ್ಕೆ ಆಗಮಿಸಿದ ಡಿಸಿಎಂ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಡಿಸಿಎಂ: ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಸಂಜೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಮಾಡಿ, ಆಶೀರ್ವಾದ ಪಡೆದರು. ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರಿಗೆ ದೇವೇಗೌಡರು ಶಾಲು ಹೊದಿಸಿ ಅಭಿನಂದಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ದೇವೇಗೌಡರು ಅಪಾರ ಜನಸೇವೆ ಮಾಡಿದ್ದಾರೆ. ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ಅವರೊಬ್ಬ ಛಲಗಾರರು. ಅವರ ಆಶೀರ್ವಾದ, ಮಾರ್ಗದರ್ಶನ ಪಡೆಯಲು ಬಂದಿದ್ದೇನೆ. ಚುನಾವಣಾ ರಾಜಕಾರಣ ಮುಕ್ತಾಯವಾಗಿದೆ. ಇನ್ನು ರಾಜ್ಯದ ಹಿತ ಕಾಪಾಡುವತ್ತ ಗಮನಹರಿಸಬೇಕು. ಈ ವಿಚಾರವಾಗಿ ಅವರ ಸಲಹೆ ಪಡೆದಿದ್ದೇವೆ. ಅವರು ಕೂಡ ಬಹಳ ಸ್ಪೂರ್ತಿಯಿಂದ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ." ಎಂದರು.

ವಿಧಾನಸಭೆ ಪಡಸಾಲೆಯಲ್ಲಿ ವಿರೋಧ ಪಕ್ಷಗಳ ನಾಯಕರ ಜತೆ ಬಹಳ ಆತ್ಮೀಯ ಮಾತುಕತೆ ಮೂಲಕ ಪಾಸಿಟಿವ್ ಆಗಿರುವ ಬಗ್ಗೆ ಕೇಳಿದಾಗ, 'ಚುನಾವಣೆ ಮುಗಿದಿದೆ. ನೆಗೆಟಿವ್ ನಿಂದ ಯಾವ ಪ್ರಯೋಜನವಿದೆ? ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದು, ನಾವು ಅದನ್ನು ಕಾರ್ಯರೂಪಕ್ಕೆ ತರಬೇಕು. ನಾವು ಕಾಂಗ್ರೆಸ್ ಪಕ್ಷದವರು, ನುಡಿದಂತೆ ನಡೆಯುತ್ತೇವೆ. ನಾನು ಸದಾ ಸಕಾರಾತ್ಮಕವಾಗಿ ಆಲೋಚಿಸುತ್ತೇನೆಯೇ ಹೊರತು ಋಣಾತ್ಮಕವಾಗಿ ಆಲೋಚನೆ ಮಾಡುವುದಿಲ್ಲ. ನಾನು ಇಂದು ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಅವರನ್ನು ಭೇಟಿ ಮಾಡಿ ನಂತರ ದೇವೇಗೌಡರನ್ನು ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು.

ದೇವೇಗೌಡರು ಯಾವ ಸಲಹೆ ನೀಡಿದ್ದಾರೆ ಎಂದು ಕೇಳಿದಾಗ, ಕಾವೇರಿ ನೀರು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಹೇಗೆ ಬಳಸಿಕೊಳ್ಳಬೇಕು ಎಂದು ಚರ್ಚೆ ಮಾಡಿದ್ದು, ಅವರು ಕೊಟ್ಟಿರುವ ಸಲಹೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಒಕ್ಕಲಿಗ ಸಿಎಂ ವಿಚಾರವಾಗಿ ಚರ್ಚೆ ಏನಾದರೂ ನಡೆಯಿತೇ ಎಂದು ಕೇಳಿದಾಗ, ಈಗ ಸಮುದಾಯದ ಆಧಾರದ ಮೇಲೆ ಚರ್ಚೆ ಮಾಡುವುದಿಲ್ಲ. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ ಎಂದರು.

ಇದನ್ನೂ ಓದಿ:ಇಂದು ಒಟ್ಟು 182 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ: ಡಿಕೆಶಿ, ದೇವೇಗೌಡರ ಹೆಸರಲ್ಲಿ ಪ್ರಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.