ETV Bharat / state

ಸಾಗರೋತ್ತರ ಕನ್ನಡಿಗರೊಂದಿಗೆ ಇಂದು ಡಿ.ಕೆ.ಶಿವಕುಮಾರ್ ವಿಡಿಯೊ ಸಂವಾದ - DKShivkumar vedio conference

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಮೆರಿಕ, ಇಟಲಿ,ಯುರೋಪ್‌ಗಳಲ್ಲಿ‌ ನೆಲೆಸಿರುವ ಕನ್ನಡಿಗರ ಜೊತೆ ವಿಡಿಯೊ ಸಂವಾದ ನಡೆಸಿ ಕೋವಿಡ್ ಹಡರುವಿಕೆಯ ಕುರಿತಂತೆ ಚರ್ಚಿಸಲಿದ್ದಾರೆ.

DKShivkumar
DKShivkumar
author img

By

Published : Aug 2, 2020, 3:29 PM IST

ಬೆಂಗಳೂರು: ಸಾಗರೋತ್ತರ ಕನ್ನಡಿಗರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಸಂವಾದ ನಡೆಸಲಿದ್ದಾರೆ.

ಜಗತ್ತಿನಾದ್ಯಂತ 55ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಕನ್ನಡಿಗರು ನೆಲೆಸಿದ್ದು, ಇವರ ಜೊತೆ ವಿಡಿಯೊ ಸಂವಾದ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಅವರ ಯೋಗಕ್ಷೇಮ ವಿಚಾರಿಸಲಿದ್ದಾರೆ. ಇದರ ಜತೆಗೆ ಒಟ್ಟಾರೆ ಜಾಗತಿಕವಾಗಿ ಬದಲಾಗಿರುವ ವಿದ್ಯಮಾನಗಳ ಕುರಿತು ಸಂವಾದ ನಡೆಸಿ ಮಾಹಿತಿ ಕಲೆ ಹಾಕಲಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಎರಡು ದಿನಗಳ ಹಿಂದೆ ಒಮ್ಮೆ ಹಾಗೂ ಕಳೆದ ವಾರ ಕೂಡ ಸಾಗರೋತ್ತರ ಕನ್ನಡಿಗರ ಜೊತೆ ಸಂವಾದ ನಡೆಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.