ETV Bharat / state

ಅಸಂಘಟಿತ ವೃತ್ತಿಪರರಿಗೆ ಬ್ಯಾಂಕುಗಳು ಕಿರುಕುಳ ನೀಡುತ್ತಿವೆ: ಡಿ.ಕೆ.ಶಿವಕುಮಾರ್​​ - ಅಸಂಘಟಿತ ವೃತ್ತಿಪರರಿಗೆ ಬ್ಯಾಂಕುಗಳ ಕಿರುಕುಳ ಆರೋಪ

ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಅಸಂಘಟಿತ ವೃತ್ತಿಪರರಿಗೆ ಕಿರುಕುಳ ನೀಡುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್​ ಮಾಡಿದ್ದಾರೆ.

dk shivkumar tweet about banks
ಡಿ.ಕೆ.ಶಿವಕುಮಾರ್​​ ಟ್ವೀಟ್​
author img

By

Published : Apr 30, 2020, 10:52 AM IST

ಬೆಂಗಳೂರು: ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿ ಹೆಸರಲ್ಲಿ ಅಸಂಘಟಿತ ವೃತ್ತಿಪರರಿಗೆ ಕಿರುಕುಳ ನೀಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

dk shivkumar tweet about banks
ಡಿ.ಕೆ.ಶಿವಕುಮಾರ್​​ ಟ್ವೀಟ್​

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆರ್.ಬಿ.ಐ ನಿಂದಾಗಲಿ ಅಥವಾ ಕೇಂದ್ರ ಸರ್ಕಾರದಿಂದಾಗಲಿ ಯಾವುದೇ ನಿರ್ದೇಶನಗಳು ಬ್ಯಾಂಕುಗಳಿಗೆ ರವಾನೆಯಾಗಿಲ್ಲ. ಕಾನೂನಿನ ವ್ಯಾಪ್ತಿಯಲ್ಲೇ ಈ ವರ್ಗದ ಜನರಿಗೆ ನೆರವು ನೀಡಬೇಕು ಎಂದು ಹೇಳಿದ್ದಾರೆ.

ಅಸಂಘಟಿತ ವೃತ್ತಿಪರರ ಪರವಾಗಿ ನಿರಂತರವಾಗಿ ಮಾತನಾಡುತ್ತಾ ಬಂದಿರುವ ಶಿವಕುಮಾರ್ ಈ ಸಂಬಂಧ ಈ ಹಿಂದೆಯೂ ಸುದ್ದಿಗೋಷ್ಟಿ ನಡೆಸಿ ಸರ್ಕಾರ ಇವರ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದ್ದರು. ಅಲ್ಲದೆ ಪಕ್ಷದ ಹಿರಿಯ ನಾಯಕರ ಜೊತೆ ತೆರಳಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಇಂತಹ ವೃತ್ತಿಪರರನ್ನು ಗುರುತಿಸಿ ಮಾರ್ಚ್-ಏಪ್ರಿಲ್ ತಿಂಗಳು ಜೀವನ ನಿರ್ವಹಣೆಗಾಗಿ ತಲಾ 10 ಸಾವಿರ ರೂಪಾಯಿ ನೀಡಬೇಕು ಎಂದು ಮನವಿ ಮಾಡಿದ್ದರು. ಇದೀಗ ಟ್ವೀಟ್ ಮೂಲಕ ಅಸಂಘಟಿತ ವೃತ್ತಿಪರರ ಪರವಾಗಿ ತಮ್ಮ ದನಿ ಎತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.