ETV Bharat / state

ವಲಸೆ ಕಾರ್ಮಿಕರ ಪ್ರಯಾಣ ಸಮಸ್ಯೆ, ಡಿಆರ್​​ಎಂ ಭೇಟಿ ಮಾಡಿ ಮನವಿ ಸಲ್ಲಿಸಿದ ಡಿಕೆಶಿ

author img

By

Published : May 11, 2020, 7:29 PM IST

ಬೆಂಗಳೂರಿನ ವಿಭಾಗೀಯ ರೈಲ್ವೆ ಮ್ಯಾನೇಜರ್ ಅನ್ನುವ ಭೇಟಿ ಮಾಡಿ ಡಿ.ಕೆ. ಶಿವಕುಮಾರ್​ ವಲಸೆ ಕಾರ್ಮಿಕರ ಪ್ರಯಾಣ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದಾರೆ.

dk shivkumar  meets bengluru railway division manager
ಡಿಆರ್​​ಎಂ ಭೇಟಿ ಮಾಡಿದ ಡಿಕೆಶಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಲಸೆ ಕಾರ್ಮಿಕರ ಪ್ರಯಾಣ ಸಮಸ್ಯೆ ಕುರಿತು ಮನವಿ ಸಲ್ಲಿಸಲು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ವಿಭಾಗೀಯ ರೈಲ್ವೆ ಮ್ಯಾನೇಜರ್​ (DRM) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಡಿಆರ್​​ಎಂ ಭೇಟಿ ಮಾಡಿದ ಡಿಕೆಶಿ

ಕರ್ನಾಟಕಕ್ಕೆ ಮರಳಲು ಇಚ್ಛಿಸುವವರರಿಗೆ ಅಗತ್ಯ ರೈಲು ಸೇವೆ ಕಲ್ಪಿಸಬೇಕು, ಅದಕ್ಕೆ ತಗಲುವ ವೆಚ್ಚವನ್ನು ಕಾಂಗ್ರೆಸ್ ಪಕ್ಷ ಭರಿಸಲಿದೆ ಎಂದು ಡಿ.ಕೆ. ಶಿವಕುಮಾರ್ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ವರ್ಮ ಅವರೊಂದಿಗೆ ಸಮಾಲೋಚಿಸಿದ್ದೇನೆ. ನಗರದಿಂದ ತೆರಳುವ ಹಾಗೂ ಬರುವ ರೈಲುಗಳ ಮಾಹಿತಿ ಪಡೆದಿದ್ದೇನೆ. ನಾಳೆಯಿಂದ ರೈಲು ಸಂಚಾರ ಆರಂಭವಾಗಲಿದೆ. ಒಟ್ಟು 15 ರೈಲುಗಳು ತೆರಳಲಿದ್ದು ಅದರಲ್ಲಿ ಮೊದಲ ರೈಲು ದಿಲ್ಲಿಗೆ ಪ್ರಯಾಣ ಬೆಳೆಸಲಿದೆ. ಸಾಮಾನ್ಯ ರೈಲುಗಳ ಜೊತೆ 45 ಶ್ರಮಿಕ ರೈಲುಗಳು ತೆರಳುತ್ತಿವೆ. ಈ ರೈಲುಗಳ ಸಂಚಾರಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ಭರಿಸುತ್ತಿದೆ, ಇದು ಸಂತಸದ ಸಂಗತಿ. ಕಾಂಗ್ರೆಸ್ ಪಕ್ಷದ ವತಿಯಿಂದ ಅಳಿಲು ಸೇವೆಯ ರೂಪದಲ್ಲಿ ನಾವು ಕೂಡ ಸಹಕಾರ ನೀಡಲು ಮುಂದಾಗಿದ್ದು ಹೊರರಾಜ್ಯದಿಂದ ಇಲ್ಲಿಗೆ ಆಗಮಿಸುವ ಪ್ರಯಾಣ ವೆಚ್ಚವನ್ನು ಭರಿಸಲು ನಾವು ಸಿದ್ಧವಿದ್ದೇವೆ ಎಂಬ ಪತ್ರವನ್ನು ಸಲ್ಲಿಸಿದ್ದೇವೆ ಎಂದರು.

ರೈಲ್ವೆ ವ್ಯವಸ್ಥಾಪಕರು ಇದಕ್ಕೆ ಸೂಕ್ತವಾಗಿ ಸ್ಪಂದಿಸಿ ತಮ್ಮ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ವಿವರ ನೀಡುವುದಾಗಿ ತಿಳಿಸಿದ್ದಾರೆ. ರಾಜ್ಯದಿಂದ ತೆರಳಲು ಹಾಗೂ ರಾಜ್ಯಕ್ಕೆ ಆಗಮಿಸಲು ಹೆಸರು ನೋಂದಣಿ ಮಾಡಿಕೊಂಡವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಕೇವಲ ಉದ್ಯೋಗದ ನಿಮಿತ್ತ ಬೇರೆ ಬೇರೆ ರಾಜ್ಯಗಳಿಗೆ ಸಂಚರಿಸುವವರು ಮಾತ್ರವಲ್ಲ, ಇನ್ನೂ ಹಲವು ಕಾರಣಗಳಿಗೆ ಒಂದು ರಾಜ್ಯದ ಇನ್ನೊಂದು ರಾಜ್ಯಕ್ಕೆ ತೆರಳಲು ಜನ ಬಯಸುತ್ತಿದ್ದಾರೆ. ಇವರೆಲ್ಲರಿಗೂ ಸಹಕಾರ ಸಿಗಬೇಕಿದೆ ಎಂದರು.

ಸರ್ಕಾರ ಸಂಪೂರ್ಣ ವಿಫಲ:
ಕೊರೊನಾ ನಿಯಂತ್ರಣದ ವಿಚಾರದಲ್ಲಿ ರಾಜ್ಯಸರ್ಕಾರ ಆರಂಭದಿಂದಲೂ ಸಂಪೂರ್ಣ ವಿಫಲವಾಗಿದೆ. ಕೇರಳ ಸರ್ಕಾರ ಇದೇ ವಿಚಾರಕ್ಕೆ 20,000 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಜೆಟ್​​ನಲ್ಲಿ ಮೀಸಲಿಟ್ಟಿದೆ. ನಾವು ಕೂಡ ಸಾಕಷ್ಟು ರೀತಿಯಲ್ಲಿ ಮನವಿ, ಆಗ್ರಹ ಪಡಿಸುತ್ತಿದ್ದು ಸರ್ಕಾರ ಆದಷ್ಟು ಬೇಗ ವಿಶೇಷ ಅಧಿವೇಶನ ಕರೆಯಲಿ. ನಾವು ಸಂಪೂರ್ಣ ಸಹಕಾರವನ್ನು ಸರ್ಕಾರಕ್ಕೆ ನೀಡುತ್ತೇವೆ ಎಂದ್ರು.

50,000 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್​​ ಅನ್ನು ಘೋಷಿಸಿದರೆ ಉತ್ತಮ. ಎಲ್ಲ ವರ್ಗದ ಜನರಿಗೆ ಸಹಾಯ ಮಾಡಿ ಎಂದು ಕೋರಿಕೊಳ್ಳುತ್ತಿದ್ದೇವೆ. ಸರ್ಕಾರಕ್ಕೆ ಈ ಮೊತ್ತ ದೊಡ್ಡ ಹೊರೆಯೇನು ಅಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಯಾವುದೇ ಸಹಕಾರ ಉದ್ಯೋಗಿಗಳಿಗೆ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದೆ ಎಂದು ಘೋಷಿಸಿಕೊಂಡಿದೆ, ಆದರೆ ಇದರ ಲಾಭ ಇದುವರೆಗೂ ಹೆಚ್ಚಿನವರಿಗೆ ಸಿಕ್ಕಿಲ್ಲ. ಆದಷ್ಟು ಬೇಗ ರಾಜ್ಯ ಸರ್ಕಾರ ಶ್ರಮಿಕರ ಹಾಗೂ ಇತರ ರಾಜ್ಯದ ನಾಗರಿಕರ ಸಹಕಾರಕ್ಕೆ ಮುಂದಾಗಬೇಕು ಎಂದು ಕರೆ ಕೊಟ್ಟರು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ ಬಾವಾ, ಸಂಸದ ಡಿ.ಕೆ. ಸುರೇಶ್, ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.