ETV Bharat / state

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ವಿಚಾರ: ಮುಖ್ಯಮಂತ್ರಿಗೆ ಡಿಕೆ ಶಿವಕುಮಾರ್‌ ಸವಾಲು

ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಟ್ವೀಟ್ - ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪೊಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದ ಕೆಪಿಸಿಸಿ ಅಧ್ಯಕ್ಷರು

DK Shivakumar Tweet about CM's statement

author img

By

Published : Dec 28, 2022, 7:26 PM IST

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ನೀಡಿರುವ ಪೊಳ್ಳು ಹೇಳಿಕೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿರುವ ನಿರ್ಣಯವನ್ನು ಖಂಡಿಸುವುದಾಗಿ ಮತ್ತು ಕರ್ನಾಟಕದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿಗೆ ಅವರು ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

DK Shivakumar Tweet about CM statement
ಡಿಕೆ ಶಿವಕುಮಾರ್ ಟ್ವೀಟ್

ಮುಖ್ಯಮಂತ್ರಿಗಳು ಈ ರೀತಿ ಪೊಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ಆಶ್ಚರ್ಯಕರವೇನಲ್ಲ. ರಾಜ್ಯದ ಒಂದಿಂಚು ಜಾಗವನ್ನೂ ಬಿಟ್ಟುಕೊಡಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಿದ್ಧರಿಲ್ಲದಿದ್ದರೆ, ಇಷ್ಟರಲ್ಲಾಗಲೇ ಕ್ರಮ ಕೈಗೊಳ್ಳಬೇಕಿತ್ತು ಎಂದಿರುವ ಅವರು, "ರಾಜ್ಯದ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಅವರು ನಿಜಕ್ಕೂ ತಯಾರಿಲ್ಲದಿದ್ದರೆ ತಕ್ಷಣವೇ ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕರೆದುಕೊಂಡು ಹೋಗಲಿ. ಹಾಗೆಯೇ ಕೇಂದ್ರ ಗೃಹ ಸಚಿವರು ಈ ವಿಷಯದ ಬಗ್ಗೆ ಸಾರ್ವಜನಿಕ ಭರವಸೆ ನೀಡಲಿ" ಎಂದು ಸವಾಲೆಸೆದಿದ್ದಾರೆ.

ಈ‌ ಮೂಲಕ ಬೊಮ್ಮಾಯಿಯವರ ಪೊಳ್ಳು ಭರವಸೆಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಡಿ ಕೆ ಶಿವಕುಮಾರ್, ಕೇಂದ್ರ ಗೃಹ ಸಚಿವರು ಸಾರ್ವಜನಿಕ‌ ಭರವಸೆ ನೀಡುವಂತೆ ಟ್ವೀಟ್​​ನಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಆರೋಗ್ಯ ಸಚಿವರೇ ಮಾಸ್ಕ್‌ ಧರಿಸುತ್ತಿಲ್ಲ, ಬೇರೆಯವರಿಗೆ ಯಾಕೆ ಹೇಳುತ್ತೀರಿ?: ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.