ETV Bharat / state

ಅತೃಪ್ತರ ಮನವೊಲಿಕೆಗೆ ನಾಳೆ ಮುಂಬೈನತ್ತ ಡಿಕೆಶಿ - undefined

ಅತೃಪ್ತ ಶಾಸಕರ ಮನವೊಲಿಸಲು ಡಿ.ಕೆ.ಶಿವಕುಮಾರ್​​ ನೇತೃತ್ವದಲ್ಲಿ ಬುಧವಾರ ಹಲವು ನಾಯಕರು ಮುಂಬೈಗೆ ತೆರಳಲಿದ್ದಾರೆ. ಬಿಜೆಪಿ ನಾಯಕರೇ ಆಪರೇಷನ್​ ಕಮಲ ನಡೆಸಿದ್ದಾರೆ ಎಂದು ನೇರವಾಗಿಯೆ ಡಿಕೆಶಿ ಹರಿಹಾಯ್ದರು.

ಡಿ.ಕೆ.ಶಿವಕುಮಾರ
author img

By

Published : Jul 9, 2019, 8:33 PM IST

ಬೆಂಗಳೂರು: ಎರಡು, ಮೂರು ದಶಕಗಳ ಕಾಲ ಜತೆಗೆ ನಿಂತು ಪಕ್ಷ ಕಟ್ಟಿದವರು, ನಾವೆಲ್ಲ ಒಟ್ಟಾಗಿ ಅನೇಕ ಕೆಲಸಗಳನ್ನು ಕೈಗೊಂಡಿದ್ದೇವೆ. ಬುಧವಾರ ಅವರ ಮನವೊಲಿಸಲು ಕೆಲವರ ಜತೆ ಮುಂಬೈಗೆ ತೆರಳಲಿದ್ದೇನೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​​ ಹೇಳಿದರು.

bgl
ಡಿ.ಕೆ.ಶಿವಕುಮಾರ್​​

ಇಲ್ಲಿನ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸೇರಿ ಕೆಲ ನಾಯಕರು ಅತೃಪ್ತರ ಜತೆ ಮಾತುಕತೆ ‌ನಡೆಸಲಿದ್ದಾರೆ. ಬೆಳಿಗ್ಗೆ 9.30ರ‌ ವಿಮಾನದಲ್ಲಿ ಹೊರಡಲಿದ್ದೇವೆ. ಬಿಜೆಪಿ ನಾಯಕರು ನೇರವಾಗಿ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆಪರೇಷನ್ ಕಮಲ ಆರಂಭಿಸಿದ್ದೇ ಬಿಜೆಪಿ ನಾಯಕರು. ಅತೃಪ್ತ ಶಾಸಕರನ್ನು ಮುಂಬೈಯಲ್ಲಿ ಬರ‌ಮಾಡಿಕೊಂಡವರು‌ ಯಾರು ಗೊತ್ತಿಲ್ವಾ? ಎಂದು ಬಿಜೆಪಿ ನಾಯಕರನ್ನು ನೇರವಾಗಿಯೇ ಕುಟುಕಿದರು.

ನಾವು ಯಾವ ಬಿಜೆಪಿ ಶಾಸಕರನ್ನು ಸಂಪರ್ಕಿಸಿಲ್ಲ. ಹಾಗೇನಾದರೂ ನಾವು ಸಂಪರ್ಕಿಸಿದ್ದರೆ ಬಿಜೆಪಿ ಶಾಸಕರು ಹೇಳಲಿ. ನನಗೆ 224 ಶಾಸಕರೂ ಗೆಳೆಯರೇ. ಅಭಿವೃದ್ಧಿ ಕೆಲಸಕ್ಕಾಗಿ ಬಿಜೆಪಿ ಶಾಸಕರು ನನ್ನನ್ನು ಭೇಟಿಯಾಗುತ್ತಾರೆ ಎಂದರು.

Intro:DksBody:KN_BNG_05_DKSHIVAKUMAR_MUMBAI_SCRIPT_7201951

ಅತೃಪ್ತರ ಮನವೊಲಿಕೆಗೆ ನಾಳೆ ಟ್ರಬಲ್ ಶೂಟರ್‌ ಡಿಕೆಶಿ ಮುಂಬೈನತ್ತ ಪಯಣ

ಬೆಂಗಳೂರು: ಸರ್ಕಾರ ಉಳಿಸಲು ದೋಸ್ತಿಗಳು ಶತಾಯಗತಾಯ ಕಸರತ್ತು ನಡೆಸುತ್ತಿದ್ದು, ಅತೃಪ್ತರ ಮನವೊಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಟ್ರಬಲ್‌ ಶೂಟರ್ ಡಿಕೆಶಿ ನಾಳೆ ಮುಂಬೈಗೆ ತೆರಳಲಿದ್ದಾರೆ.

ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸೇರಿ ಕೆಲ ನಾಯಕರು ನಾಳೆ ಮುಂಬಯಿಗೆ ಹೋಗಿ ಅತೃಪ್ತರ ಜತೆ ಮಾತುಕತೆ ‌ನಡೆಸಲಿದ್ದಾರೆ. ಈ ಸಂಬಂಧ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಡಿಕೆಶಿ, ನಮ್ಮ ಶಾಸಕರ ಜತೆ ಮಾತುಕತೆ ನಡೆಸಿ ಅವರನ್ನು ವಾಪಾಸು ಕರೆತರುವ ಪ್ರಯತ್ನ ಮಾಡಲಿದ್ದೇವೆ. ಅವರೆಲ್ಲ ನಮ್ಮ ಸ್ನೇಹಿತರಾಗಿದ್ದಾರೆ. 30-40 ವರ್ಷಗಳ ಕಾಲ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರೆಲ್ಲರೂ ಪಕ್ಷ ಕಟ್ಟಿದವರು ಎಂದು ತಿಳಿಸಿದರು.

ಮುಂಬಯಿನಲ್ಲಿರುವ ನನ್ನ ಸ್ನೇಹಿತರ ಜತೆ ಮಾತಾಡಲು ಹೋಗುತ್ತಿದ್ದೇನೆ. ನಾಳೆ ಬೆಳಿಗ್ಗೆ 9.30ರ‌ ವಿಮಾನದಲ್ಲಿ ‌ಮುಂಬಯಿಗೆ ತೆರಳಲಿದ್ದೇನೆ. ನನ್ನ ಜತೆ ಕೆಲ ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಬರಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನಾಯಕರು ನೇರವಾಗಿ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆಪರೇಷನ್ ಕಮಲ ಆರಂಭಿಸಿದ್ದೇ ಬಿಜೆಪಿ ನಾಯಕರು. ಯಾರ್ಯಾರು ಎಲ್ಲೆಲ್ಲಿ ಸೇರ್ತಿದ್ದಾರೆ ಅನ್ನೋದೆಲ್ಲಾ ಗೊತ್ತು. ಅತೃಪ್ತ ಶಾಸಕರನ್ನು ಮುಂಬೈಯಲ್ಲಿ ಬರ‌ಮಾಡಿಕೊಂಡವರು‌ ಯಾರು ಗೊತ್ತಿಲ್ವಾ?. ಅವರು ಬಹಿರಂಗವಾಗಿ ಹೇಳಲಿ, ಸಿಎಂ ಆಗುತ್ತೇನೆ ಹೇಳಲಿ. ಅದು ಬಿಟ್ಟು ನಮ್ಮ‌ ಪಾತ್ರ ಇಲ್ಲ ಎಂದು ಹೇಳಬಾರದು ಎಂದು ಕಿಡಿ ಕಾರಿದರು.

ನಾವು ಯಾವ ಬಿಜೆಪಿ ಶಾಸಕರನ್ನು ಸಂಪರ್ಕಿಸಿಲ್ಲ. ಹಾಗಿದ್ದರೆ ಅದನ್ನು ಬಿಜೆಪಿ ಶಾಸಕರು ಹೇಳಲಿ. ನನಗೆ 224 ಶಾಸಕರೂ ಗೆಳೆಯರೇ. ಅಭಿವೃದ್ಧಿ ಕೆಲಸಕ್ಕಾಗಿ ಬಿಜೆಪಿ ಶಾಸಕರು ನನ್ನನ್ನು ಭೇಟಿಯಾಗುತ್ತಾ ಇರುತ್ತಾರೆ ಎಂದು ವಿವರಿಸಿದರು.

ರಿವರ್ಸ್ ಆಪರೇಷನ್ ವಿಫಲವಾಗಿದೆಯಾ ಎಂಬ ಪ್ರಶ್ನೆಗೆ ಡಿಕೆಶಿ, ಅವನು ಯಾರೋ ಬಿಜಾಪುರದಲ್ಲಿ ಚಕ್ಕನೊಬ್ಬ ಹೇಳಿಕೆ ಕೊಟ್ಟಿದ್ದಾನೆ ಎಂದು ಆಕ್ರೋಶಭರಿತವಾಗಿ ನುಡಿದರು.Conclusion:Vvv

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.