ETV Bharat / state

ಕೊರೊನಾ ಅಟ್ಟಹಾಸದ ಮಧ್ಯೆಯೂ ಇಂದು ಡಿಕೆಶಿ ಪ್ರತಿಜ್ಞಾವಿಧಿ ಸ್ವೀಕಾರ

author img

By

Published : Jul 2, 2020, 5:25 AM IST

Updated : Jul 2, 2020, 6:26 AM IST

ಕಾಂಗ್ರೆಸ್ ಕಾರ್ಯಕ್ರಮ ಅಂದ ತಕ್ಷಣ ಅಪಾರ ಸಂಖ್ಯೆಯ ಕಾರ್ಯಕರ್ತರು ಸೇರುವುದು ಸಾಮಾನ್ಯವಾಗಿರುತ್ತದೆ. ಇದಕ್ಕೆ ಈ ಹಿಂದೆ ನಡೆದಿದ್ದ ಸಮಾರಂಭ ಹಾಗೂ ಪ್ರತಿಭಟನೆಗಳೇ ಸಾಕ್ಷಿ. ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಗೆ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆ ಆಗಿದ್ದರು.

DK Shivakumar
ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದರ ನಡುವೆಯೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಅವರು ಇಂದು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.

ನಗರದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ವೇಳೆ ಇಂಥದ್ದೊಂದು ಸಮಾರಂಭ ಆಯೋಜಿಸಿರುವ ಕಾಂಗ್ರೆಸ್, ಈ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಲು ಸಜ್ಜಾಗಿದೆ. ಕೋವಿಡ್​-19 ವೇಳೆಯಲ್ಲಿ ಅಪಾರ ಜನರನ್ನು ಸೇರಿಸಿ ಮತ್ತೊಮ್ಮೆ ಕುಖ್ಯಾತಿಗೆ ಪಾತ್ರವಾಗಲಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ಕಾರ್ಯಕ್ರಮ ಅಂದ ತಕ್ಷಣ ಅಪಾರ ಸಂಖ್ಯೆಯ ಕಾರ್ಯಕರ್ತರು ಸೇರುವುದು ಸಾಮಾನ್ಯವಾಗಿರುತ್ತದೆ. ಇದಕ್ಕೆ ಈ ಹಿಂದೆ ನಡೆದಿದ್ದ ಸಮಾರಂಭ ಹಾಗೂ ಪ್ರತಿಭಟನೆಗಳೇ ಸಾಕ್ಷಿ. ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಗೆ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆ ಆಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ನಡೆದಿದ್ದ ಇಂಧನ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಕೂಡ ಕಾರ್ಯಕರ್ತರ ಪಡೆ ಕಂಡುಬಂದಿತ್ತು.

ಡಿ.ಕೆ. ಶಿವಕುಮಾರ್ ಅವರು ಎಲ್ಲಿಗೆಯೇ ತೆರಳಲ್ಲಿ, ಅಲ್ಲೆಲ್ಲ ಕಾರ್ಯಕರ್ತರು ಸೇರುವುದು ಸಾಮಾನ್ಯವಾಗಿದೆ. ಹೀಗಾಗಿ, ನಾಳಿನ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೆ ಸಾಕ್ಷಿ ಆಗದಿದ್ದರೆ ಸಾಕು ಎನ್ನುವುದು ಹಲವರ ಆಶಯವಾಗಿದೆ. ನಿನ್ನೆ ಕೆಪಿಸಿಸಿಯ ನೂತನ ಕಟ್ಟಡದಲ್ಲಿ ಅಂತಿಮ ಹಂತದ ಸಿದ್ಧತೆಯನ್ನು ಹಲವು ನಾಯಕರು ಪರಿಶೀಲಿಸಿದ್ದಾರೆ. ಮಧ್ಯಾಹ್ನದ ಬಳಕ ಸಂಸದ ಡಿ.ಕೆ. ಸುರೇಶ್ ಸಮಾರಂಭದ ಸ್ಥಳವನ್ನು ಪರಿಶೀಲಿಸಿ ಪಕ್ಷದ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಸಿದ್ಧತೆಯ ಕುರಿತು ಸಂಜೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರು ಸಮಾರಂಭದ ಬಗ್ಗೆ ವಿವರಣೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಪಕ್ಷವನ್ನು ಮರು ಸಂಘಟಿಸುವ ಹಾಗೂ ಕಾರ್ಯಕರ್ತರ ಮನೋಬಲ ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಿದ್ದು, ಪಕ್ಷದ ಪಾಲಿಗೆ ಇದೊಂದು ಪ್ರತಿಷ್ಠೆಯ ಸಂಕೇತವಾಗಿದೆ. ಸಭಾಂಗಣದ ಒಳಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಿದರೂ ಹೊರಭಾಗದಲ್ಲಿ ಅಳವಡಿಸಿರುವ ಡಿಜಿಟಲ್ ಡಿಸ್ಪ್ಲೇಗಳ ಮುಂಭಾಗ ಕಾರ್ಯಕರ್ತರ ಜಮಾವಣೆ ನಿಯಂತ್ರಿಸುವುದು ಸವಾಲಿನದ್ದಾಗಿರಲಿದೆ.

Last Updated : Jul 2, 2020, 6:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.